ಎಚ್​ಎಂಪಿ ವೈರಸ್​ ಭೀತಿ ಬೆನ್ನಲ್ಲೇ ಭುಗಿಲೆದ್ದ ಲಾಕ್​ಡೌನ್​ ಚರ್ಚೆ! ಟ್ರೆಂಡಿಂಗ್​ ಪಟ್ಟಿ ಸೇರಿದ #Lockdown

ವಿಜಯವಾಣಿ (53)
Published on

Lockdown: ಮಹಾಮಾರಿ ಕರೊನಾ ವೈರಸ್​ ನಾಲ್ಕೈದು ವರ್ಷಗಳ ಹಿಂದೆ ಇಡೀ ಜಗತ್ತನ್ನೇ ಕಾಡಿತ್ತು. ಈಗ ಅದರ ಮತ್ತೊಂದು ಮುಖ ನೋಡುವಂತ ಸನ್ನಿವೇಶ ಎದುರಾಗಿರುವುದು ಸದ್ಯ ಜನರನ್ನು ತೀರ ಚಿಂತಗೆ ದೂಡಿದೆ. ಚೀನಾದಲ್ಲಿ ಬಹಳ ವೇಗವಾಗಿ ಹರಡುತ್ತಿರುವ HMPV- ಹ್ಯೂಮನ್ ಮೆಟಾಪ್ನ್ಯೂಮೋ ಎಂಬ ಹೊಸ ವೈರಸ್ ಇದೀಗ ಭಾರತಕ್ಕೂ ಲಗ್ಗೆಯಿಟ್ಟಿದ್ದು, ಮೂವರಲ್ಲಿ ಪತ್ತೆಯಾಗಿರುವುದಾಗಿ ಇತ್ತೀಚಿನ ವರದಿಗಳು ಉಲ್ಲೇಖಿಸಿವೆ.

ರೋಗದ ಭೀತಿ

HMPV ವೈರಸ್​ ಭಾರತದಲ್ಲಿ ಪತ್ತೆಯಾಗಿದ್ದು, ಮೂವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಇಬ್ಬರು ಮತ್ತು ಅಹಮದಾಬಾದ್‌ನಲ್ಲಿ ಒಬ್ಬರು. ಕರ್ನಾಟಕದ ಎರಡು ಪುಟ್ಟ ಕಂದಮ್ಮಗಳಲ್ಲಿ ವೈರಸ್ ಕಾಣಿಸಿಕೊಂಡಿರುವುದು ಸದ್ಯ ರಾಜ್ಯದ ಜನತೆಯಲ್ಲಿ ರೋಗದ ಭೀತಿ ಆವರಿಸಿದೆ. ಸೋಂಕಿನ ಹರಡುವಿಕೆ ಬಗ್ಗೆ ಈಗಾಗಲೇ ಆರೋಗ್ಯ ಸಂಸ್ಥೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಉತ್ತಮ ಎಂಬ ಸಲಹೆ ನೀಡಿದೆ. ಆದರೂ ಸಹ ಸೋಂಕಿನ ವೇಗದ ಹರಡುವಿಕೆಯಿಂದ ಚಿಂತೆಗೆ ಒಳಗಾಗಿರುವ ಜನರು, ಲಾಕ್​ಡೌನ್​ ವಿಷಯವನ್ನು ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.

HMPV Guidelines

#Lockdown

ಭಾರತದಲ್ಲಿ ಮೂರು HMP ಸೋಂಕಿತರು ಪತ್ತೆಯಾದ ಬೆನ್ನಲ್ಲೇ ಟ್ವಿಟರ್​ನಲ್ಲಿ (ಪ್ರಸ್ತುತ ಎಕ್ಸ್​) ಲಾಕ್​ಡೌನ್​ ಟ್ರೆಂಡಿಂಗ್ ಆಗುತ್ತಿದೆ. ಈ ವಿಷಯ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಲಾಕ್​ಡೌನ್​ ಟ್ವಿಟರ್​ ಟ್ರೆಂಡಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಸದ್ಯ ಚೀನಾದ ಹೊಸ ವೈರಸ್​ ಕುರಿತು ಕೇಂದ್ರ ಸರ್ಕಾರ ಮತ್ತು ಭಾರತದ ಉನ್ನತ ವೈದ್ಯಕೀಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR) ಪ್ರತಿಕ್ರಿಯಿಸಿದೆ.

ಭಯದ ಅಗತ್ಯವಿಲ್ಲ

HMPV ವೈರಸ್ ಜಾಗತಿಕವಾಗಿ ಚಲಾವಣೆಯಲ್ಲಿರುವ ಕಾರಣ ಮತ್ತು ಹೊಸ ರೋಗಕಾರಕವಲ್ಲದ ಹಿನ್ನಲೆ ತೀರ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಆದಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳಿತು ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net