More

    ಗಂಭೀರ್​​​ ವಿರುದ್ಧ ಗುಡುಗಿದ ಶ್ರೀಶಾಂತ್​ಗೆ ಲೀಗಲ್​ ನೋಟಿಸ್​! ವಿಡಿಯೋ ಡಿಲೀಟ್​ ಮಾಡಲು ಆಗ್ರಹ

    ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಬ್ಯಾಟ್ಸ್​ಮನ್ ಗೌತಮ್​ ಗಂಭೀರ್​ ಜತೆ ಮೈದಾನದಲ್ಲೇ ಕಿತ್ತಾಡಿಕೊಂಡ ಮಾಜಿ ವೇಗಿ ಎಸ್​. ಶ್ರೀಶಾಂತ್​ಗೆ ಲೆಜೆಂಡ್ಸ್​ ಲೀಗ್​ ಕ್ರಿಕೆಟ್​ (ಎಲ್​ಎಲ್​ಸಿ)​ ಕಮಿಷನರ್ ಲೀಗಲ್​ ನೋಟಿಸ್​ ನೀಡಿದ್ದಾರೆ.​

    ಶ್ರೀಶಾಂತ್​ ಅವರು ಒಪ್ಪಂದದ ಉಲ್ಲಂಘನೆ ಮಾಡಿದ್ದಾರೆಂದು ಆರೋಪ ಮಾಡಿರುವ ಎಲ್​ಎಲ್​ಸಿ ಕಮಿಷನರ್​, ಗೌತಮ್​ ಗಂಭೀರ್​ ಅವರನ್ನು ಟಾರ್ಗೆಟ್​ ಮಾಡಿರುವ ವಿಡಿಯೋವನ್ನು ಕೂಡಲೇ ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.

    ಏನಿದು ಪ್ರಕರಣ?
    ಎಲ್​ಎಲ್​ಸಿ ಟೂರ್ನಿಯ ಎಲಿಮಿನೇಟರ್​ ಪಂದ್ಯ ಬುಧವಾರ ರಾತ್ರಿ ಸೂರತ್​ನಲ್ಲಿ ನಡೆಯಿತು. ಗಂಭೀರ್​ ನೇತೃತ್ವದ ಇಂಡಿಯನ್ಸ್​ ಕ್ಯಾಪಿಟಲ್ಸ್​ ತಂಡ ಮೊದಲು ಬ್ಯಾಟಿಂಗ್​ ಮಾಡಿತು. ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದ ಗಂಭೀರ್​ ಉತ್ತಮ ಆಟವಾಡಿದರು. ಪಂದ್ಯದ ಎರಡನೇ ಓವರ್​ ಅನ್ನು ಶ್ರೀಶಾಂತ್​ ಎಸೆದರು. ಎರಡು ಮತ್ತು ಮೂರನೇ ಎಸೆತದಲ್ಲಿ ಕ್ರಮವಾಗಿ ಸಿಕ್ಸರ್​ ಮತ್ತು ಬೌಂಡರಿಯನ್ನು ಗಂಭೀರ್​ ಬಾರಿಸಿದರು. ಆದರೆ, ನಾಲ್ಕನೇ ಎಸೆತದಲ್ಲಿ ಯಾವುದೇ ರನ್​ ಬರಲಿಲ್ಲ. ಈ ವೇಳೆ ಶ್ರೀಶಾಂತ್​ ಅವರು ಗಂಭೀರ್​ಗೆ ಏನೋ ಹೇಳಿದ್ದಾರೆ ಅಥವಾ ಗುರಾಯಿಸಿರುವಂತೆ ಕಾಣುತ್ತದೆ. ಇದರಿಂದ ಆಕ್ರೋಶಗೊಂಡ ಗಂಭೀರ್​, ಏನು ಗುರಾಯಿಸ್ತಿದ್ದೀಯಾ ಎನ್ನುವಂತೆ ಶ್ರೀಶಾಂತ್​ ಕಡೆ ದಿಟ್ಟಿಸಿ ನೋಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯು ಸಹ ನಡೆಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಯಿತು.

    ಘಟನೆಯ ಬಳಿಕ ಶ್ರೀಶಾಂತ್​ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದು, ವಿವಾದದ ಕಿಚ್ಚಿಗೆ ಮತ್ತಷ್ಟು ತುಪ್ಪ ಸುರಿದಂತಾಯಿತು. ವಿಡಿಯೋದಲ್ಲಿ ಶ್ರೀಶಾಂತ್​, ಗಂಭೀರ್​ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ. ನನ್ನನ್ನು ಮಾತು ಮಾತಿಗೂ ಫಿಕ್ಸರ್​ ಎಂದು ಕರೆಯುತ್ತಿದ್ದರು. ಅಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದರು ಎಂದು ಆರೋಪ ಮಾಡಿದರು. ಗಂಭೀರ್​ ಸ್ವಭಾವವೇ ಹೀಗೆ. ಹಿರಿಯರಿಗೂ ಆತ ಗೌರವ ಕೊಡುವುದಿಲ್ಲ. ಕಾಲು ಕೆರೆದು ಜಗಳ ಮಾಡುವ ವ್ಯಕ್ತಿ ಎಂದೆಲ್ಲ ಶ್ರೀಶಾಂತ್​ ವಾಗ್ದಾಳಿ ನಡೆಸಿದ್ದಾರೆ.

    ಘಟನೆಯ ಗಂಭೀರತೆಯನ್ನು ಅರಿತ ಎಲ್​ಎಲ್​ಸಿ, ಈ ವಿಚಾರವಾಗಿ ತನಿಖೆ ನಡೆಸಲಾಗುವುದು ಎಂದು ಡಿ. 7ರಂದು ಅಧಿಕೃತ ಹೇಳಿಕೆಯನ್ನು ನೀಡಿದೆ. ಆಟಗಾರರ ಒಪ್ಪಂದದ ಬಾಧ್ಯತೆಗಳ ಪ್ರಕಾರ ಮತ್ತು ಲೀಗ್‌ನ ನೀತಿ ಸಂಹಿತೆ ನೀತಿಯ ಪ್ರಕಾರ ತನಿಖಾ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ ಎಂದು ಎಲ್​ಎಲ್​ಸಿ ಸಿಇಒ ಮತ್ತು ಸಹ ಮಾಲೀಕ ರಾಮನ್​ ರಜೇಜಾ ಹೇಳಿದ್ದಾರೆ.

    ಡಿಸೆಂಬರ್​ 6ರಂದು ಶ್ರೀಶಾಂತ್​ಗೆ ಲೀಗಲ್​ ನೋಟಿಸ್​ ನೀಡಲಾಗಿದೆ. ಅಲ್ಲದೆ, ಗಂಭೀರ್​ ಟಾರ್ಗೆಟ್​ ಮಾಡಿ ಅಪ್​ಲೋಡ್​ ಮಾಡಿರುವ ವಿಡಿಯೋಗಳನ್ನು ಡಿಲೀಟ್​ ಮಾಡುವಂತೆ ಒತ್ತಾಯಿಸಲಾಗಿದೆ. ಮೈದಾನದಲ್ಲಿ ಗಂಭೀರ್ ಅವರು ಶ್ರೀಶಾಂತ್ ಕುರಿತು ಫಿಕ್ಸರ್​ ಎಂದು ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಅಂಪೈರ್‌ಗಳು ನೀಡಿದ ವರದಿಯಲ್ಲಿದೆ. (ಏಜೆನ್ಸೀಸ್​)

    ಬಿಯರ್​ ಪ್ರಿಯರಿಗೊಂದು ಕಹಿ ಸುದ್ದಿ… ಕರ್ನಾಟಕದಲ್ಲಿ ನ್ಯೂ ಇಯರ್​ ಸಂದರ್ಭ ಪಾನೀಯದ ಕೊರತೆ!

    ನನ್ನ ನಂಬಿಕೆ ಹುಸಿಯಾಗಿದೆ: ಹಿರಿಯ ನಟಿ ಲೀಲಾವತಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts