More

    ಖಾತೆ ಹಂಚಿಕೆಯನ್ನು ಯಾವುದೇ ಕಗ್ಗಂಟಿಲ್ಲದೆ ಮಾಡಿ ಮುಗಿಸಿದ ಸಿಎಂ ಯಡಿಯೂರಪ್ಪ; ಇಲ್ಲಿದೆ ನೋಡಿ ಸಚಿವರು ಹಾಗೂ ಅವರಿಗೆ ಸೇರಿದ ಇಲಾಖೆಗಳ ಪಟ್ಟಿ…

    ಬೆಂಗಳೂರು: ಇತ್ತೀಚೆಗೆ ಸಚಿವ ಸಂಪುರ ವಿಸ್ತರಣೆ ಮಾಡಿ 10 ನೂತನ ಶಾಸಕರಿಗೆ ಮಂತ್ರಿ ಹುದ್ದೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಖಾತೆ ಹಂಚಿಕೆಯನ್ನೂ ಮಾಡಿದ್ದಾರೆ. ಇಷ್ಟು ದಿನ ಇದ್ದಿದ್ದ ಇಲಾಖೆಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿ ಒಟ್ಟು 28 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

    ಸಚಿವರು ಹಾಗೂ ಅವರಿಗೆ ನೀಡಲಾದ ಖಾತೆಗಳು ಹೀಗಿದೆ.

    1. ರಮೇಶ್ ಜಾರಕಿಹೊಳಿ- ಜಲಸಂಪನ್ಮೂಲ ಖಾತೆ
    2. ಶಿವರಾಮ ಹೆಬ್ಬಾರ್​-ಕಾರ್ಮಿಕ ಇಲಾಖೆ
    3. ಬಿ.ಸಿ.ಪಾಟೀಲ್​- ಅರಣ್ಯ ಖಾತೆ
    4. ಶ್ರೀಮಂತ ಪಾಟೀಲ್- ಜವಳಿ ಖಾತೆ
    5. ಸುಧಾಕರ – ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ
    6.ಆನಂದ ಸಿಂಗ್- ಆಹಾರ ಮತ್ತು ನಾಗರಿಕ ಪೂರೈಕೆ
    7. ನಾರಾಯಣಗೌಡ- ಪೌರಾಡಳಿತ ಮತ್ತು ತೋಟಗಾರಿಕೆ ಖಾತೆ
    8. ಬೈರತಿ ಬಸವರಾಜ್- ನಗರಾಭಿವೃದ್ಧಿ ಇಲಾಖೆ (ಬೆಂಗಳೂರು ಹೊರತು ಪಡಿಸಿ)
    9. ಎಸ್.ಟಿ.ಸೋಮಶೇಖರ್- ಸಹಕಾರ ಇಲಾಖೆ
    10. ಗೋಪಾಲಯ್ಯ- ಸಣ್ಣ ಕೈಗಾರಿಕೆ ಖಾತೆ
    11. ಗೋವಿಂದ ಕಾರಜೋಳ- ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ
    12. ಅಶ್ವತ್ಥ​ನಾರಾಯಣ- ಉನ್ನತ ಶಿಕ್ಷಣ, ಐಟಿಬಿಟಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ
    13. ಲಕ್ಷ್ಮಣ ಸವದಿ- ಸಾರಿಗೆ ಇಲಾಖೆ
    14. ಕೆ.ಎಸ್ ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಖಾತೆ
    15. ಆರ್.ಅಶೋಕ್ – ಕಂದಾಯ ಇಲಾಖೆ
    16. ಜಗದೀಶ್ ಶೆಟ್ಟರ್- ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
    17. ಬಿ.ಶ್ರೀರಾಮುಲು- ಆರೋಗ್ಯ ಮತ್ತು ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
    18. ಸುರೇಶ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
    19. ವಿ ಸೋಮಣ್ಣ- ವಸತಿ ಇಲಾಖೆ
    20. ಸಿ.ಟಿ ರವಿ- ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಜನ ಸಬಲೀಕರಣ ಮತ್ತು ಕ್ರೀಡೆ
    21. ಬಸವರಾಜ ಬೊಮ್ಮಾಯಿ- ಗೃಹ ಇಲಾಖೆ ಮತ್ತು ಕೃಷಿ ಖಾತೆ
    22. ಕೋಟಾ ಶ್ರೀನಿವಾಸ್ ಪೂಜಾರಿ- ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ
    23. ಜೆ.ಸಿ ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಖಾತೆಗಳು.
    24. ಸಿಸಿ ಪಾಟೀಲ್-ಗಣಿ ಮತ್ತು ಭೂ ವಿಜ್ಞಾನ ಇಲಾಖೆ
    25. ಪ್ರಭು ಚೌಹಾಣ್- ಪಶು ಸಂಗೋಪನೆ, ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್​
    26. ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
    27. ನಾಗೇಶ್- ಅಬಕಾರಿ ಖಾತೆ.

    ಹಣಕಾಸು ಖಾತೆ, ಬೆಂಗಳೂರು ಅಭಿವೃದ್ಧಿ, ಡಿಪಿಎಆರ್​ ಸೇರಿ ಇನ್ನೂ ಕೆಲವು ಹಂಚಿಕೆಯಾಗದ ಖಾತೆಗಳ ಜವಾಬ್ದಾರಿ ಮುಖ್ಯಮಂತ್ರಿ ಯಡಿಯೂರಪ್ಪನವರದ್ದಾಗಿದೆ.

    ಇನ್ನು ರಮೇಶ್ ಜಾರಕಿಹೊಳಿ ಮೊದಲಿನಿಂದಲೂ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದರು. ಅವರಿಷ್ಟದಂತೆ ಅದೇ ಇಲಾಖೆಯೇ ಸಿಕ್ಕಿದೆ.

    ಬಸವರಾಜ ಬೊಮ್ಮಾಯಿ ಅವರಿಗೆ ಗೃಹ ಖಾತೆ ಜತೆ ಕೃಷಿ ಇಲಾಖೆಯನ್ನು ನೀಡಿ, ಅವರ ಬಳಿಯಿದ್ದ ಸಹಕಾರ ಖಾತೆಯನ್ನು ಎಸ್​.ಟಿ.ಸೋಮಶೇಖರ್​ಗೆ ಹಂಚಿಕೆ ಮಾಡಲಾಗಿದೆ.

    ಸಚಿವ ಈಶ್ವರಪ್ಪನವರ ಉಸ್ತುವಾರಿಯಲ್ಲಿದ್ದ ಯುವಜನ ಸಬಲೀಕರಣ ಇಲಾಖೆಯನ್ನು ಸಿ.ಟಿ.ರವಿ ಅವರಿಗೆ ನೀಡಲಾಗಿದೆ. ನಾರಾಯಣ ಗೌಡರಿಗೆ ಪೌರಾಡಳಿತದ ಜತೆ ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಜವಾಬ್ದಾರಿಯನ್ನು ಸಿಎಂ ಕೊಟ್ಟಿದ್ದಾರೆ. ಈ ಖಾತೆ ಮೊದಲು ಸಚಿವ ಸೋಮಣ್ಣನವರ ಬಳಿ ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts