More

    ಅವಕಾಶ ಸಿಕ್ಕಾಗ ರಕ್ತದಾನ ಮಾಡಿ : ರಾಜ್ಯ ರೋಟರಿ ಕ್ಲಬ್ ಗವರ್ನರ್ ಶ್ರೀಕಾಂತ್ ಚಕ್ರಪತಿ ಹೇಳಿಕೆ

    ಕೋಲಾರ : ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸುವುದು ಹಾಗೂ ಅವಕಾಶ ಸಿಕ್ಕಾಗ ರಕ್ತದಾನ ಮಾಡುವುದು ನಮ್ಮ ಪ್ರವೃತ್ತಿಯಾಗಬೇಕು ಎಂದು ರಾಜ್ಯ ರೋಟರಿ ಕ್ಲಬ್ ರಾಜ್ಯಪಾಲ ಶ್ರೀಕಾಂತ್ ಚಕ್ರಪತಿ ಹೇಳಿದರು.

    ನಗರದ ಅಂತರಗಂಗೆ ರಸ್ತೆಯಲ್ಲಿ ಶ್ರೀ ಚನ್ನಮ್ಮ ವೆಂಕಟಪ್ಪ ಟ್ರಸ್ಟ್ ಮತ್ತು ರೋಟರಿ ಕೋಲಾರದಿಂದ ಭಾನುವಾರ ಲಯನ್ಸ್ ರಕ್ತನಿಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನದ ಬಗ್ಗೆ ಸಮಾಜದಲ್ಲಿ ತಪ್ಪು ಸಂದೇಶಗಳನ್ನು ಪ್ರಚಾರ ಮಾಡುತ್ತಾರೆ. ಇದನ್ನು ಹೋಗಲಾಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.

    ದೇಶದಲ್ಲಿ ಶೇ.50ರಷ್ಟು ಮಂದಿ ರಕ್ತ ಸಿಗದೇ ಪರದಾಡುವಂತಾಗಿದೆ. ಪ್ರತಿಯೊಬ್ಬರೂ ಮನಸ್ಸು ಮಾಡಿದರೆ ರಕ್ತದ ಕೊರತೆ ನೀಗಿಸಲು ಸಾಧ್ಯವಾಗುತ್ತದೆ. ರಕ್ತದಾನ ಸಂಸ್ಥೆಗಳನ್ನು ಹುಟ್ಟುಹಾಕುವುದು ಸುಲಭ, ಮುಂದುವರೆಸಿಕೊಂಡು ಹೋಗುವ ಜತೆಗೆ ಸಾರ್ವಜನಿಕರಿಗೆ ರೋಗಿಗಳಿಗೆ ತಕ್ಷಣಕ್ಕೆ ರಕ್ತ ಸಿಗುವಂತೆ ಮಾಡಬೇಕು. ರಕ್ತದಾನ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಸಂಸ್ಥೆ ಮಾಡಬೇಕು ಎಂದರು.

    ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ಮನುಷ್ಯನಿಗೆ ರಕ್ತ ಪ್ರಕೃತಿದತ್ತವಾಗಿ ಬಂದಿದೆ. ರಕ್ತಕ್ಕೆ ಬದಲಾಗಿ ಬೇರೊಂದು ವಸ್ತುವಿಲ್ಲ. ಸೇವೆಯ ಹೆಸರಿನಲ್ಲಿ ರಕ್ತದಾನ ಮಾಡುವ ಮೂಲಕ ಪ್ರಕೃತಿಗೆ ಋಣ ತೀರಿಸಬೇಕು. ನಾವು ಬದುಕಬೇಕು ನಮ್ಮ ಜತೆಯಲ್ಲಿ ಮತ್ತೊಬ್ಬರನ್ನು ಬದುಕುವ ಪ್ರವೃತಿಯಾಗಬೇಕು ಎಂದು ತಿಳಿಸಿದರು.

    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಮನುಷ್ಯನ ಬೆಳವಣಿಗೆಗೆ ರಕ್ತ ಬಹುಮುಖ್ಯವಾಗಿದೆ ರಕ್ತದ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ರಕ್ತನಿಧಿ ಕೇಂದ್ರದ ಪ್ರಯೋಜನ ಜನರಿಗೆ ತಕ್ಷಣವೇ ಸಿಗುವಂತಾಗಬೇಕು ಎಂದು ನುಡಿದರು.
    ಎಸ್ಸೆನ್ನಾರ್ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ಮಾತನಾಡಿ,18 ವರ್ಷ ತುಂಬಿದ ಆರೋಗ್ಯವಂತರು ರಕ್ತದಾನ ಮಾಡಬಹುದು. ರಕ್ತದಾನ ನಮ್ಮ ಕರ್ತವ್ಯ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಬೇಕು ಎಂದರು.

    ರೋಟರಿ ಕ್ಲಬ್ ಸಹ ರಾಜ್ಯಪಾಲ ಎಲ್.ಗೋಪಾಲಕೃಷ್ಣ, ಚನ್ನಮ್ಮ ವೆಂಕಟಪ್ಪ ಟ್ರಸ್ಟ್ ಅಧ್ಯಕ್ಷ ಬಿ.ವಿ.ಮಂಜುನಾಥಗೌಡ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ಸಿಎಂಆರ್ ಶ್ರೀನಾಥ್, ಟ್ರಸ್ಟ್ ಖಜಾಂಚಿ ಟಿ.ಎಸ್ ಜನಾರ್ದನ್, ಟಿ.ಎಸ್ ರಾಮಚಂದ್ರಗೌಡ, ಶ್ರೀರಾಮ್, ಬಿಇಒ ಅಶೋಕ್, ಸಿ.ವಿ ನಾಗರಾಜ್ ಇದ್ದರು. ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಹತ್ತಾರು ಮಂದಿ ರಕ್ತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts