More

    ಲಿಕ್ಕರ್ ಖರೀದಿಗೆ ಮದ್ಯಪ್ರಿಯರ ಕ್ಯೂ, ಮುಗಿಬಿದ್ದು ಎಣ್ಣೆ ಕೊಂಡುಕೊಂಡ ಜನ, ಹಟ್ಟಿಚಿನ್ನದಗಣಿಯಲ್ಲಿ ಲಘುಲಾಠಿ ಚಾರ್ಜ್

    ಲಿಂಗಸುಗೂರು: ಲಾಕ್‌ಡೌನ್ ಸಡಿಲಗೊಳಿಸಿ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡುತ್ತಿದ್ದಂತೆ ಮದ್ಯಪ್ರಿಯರು ಎಂಎಸ್‌ಐಎಲ್ ಮುಂದೆ ಸರತಿ ಸಾಲಲ್ಲಿ ನಿಂತು ಖರೀದಿಸುವ ದೃಶ್ಯ ಕಂಡು ಬಂದಿತು.

    ಸೋಮವಾರ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ ಪ್ರಯುಕ್ತ ತರಕಾರಿ, ಕಿರಾಣಿ, ಹಾಲು ಮತ್ತಿತರ ವಸ್ತುಗಳ ಮಾರಾಟ ಮಾಡುವ ಅಂಗಡಿಗಳಿಗೆ ಜನ ಮುಗಿಬಿದ್ದು ಖರೀದಿಸುವುದು ಸಾಮಾನ್ಯವಾಗಿತ್ತು. ಎಂಎಸ್‌ಐಎಲ್ ಮುಂದೆ ಪೊಲೀಸ್ ಕಾವಲಿನಲ್ಲಿ ಮದ್ಯ ಖರೀದಿ ನಡೆಯಿತು.

    ಹಟ್ಟಿಚಿನ್ನದಗಣಿ: ಪಟ್ಟಣದ ಮದ್ಯಪ್ರಿಯರು ಸೋಮವಾರ ಲಿಕರ್‌ಶಾಪ್‌ಗಳಿಗೆ ಮುಗಿಬಿದ್ದು ಲಿಕ್ಕರ್ ಖರೀದಿಸಿದರು. ಮದ್ಯ ಕೊಳ್ಳುವ ಧಾವಂತದಲ್ಲಿ ಸಾಮಾಜಿಕ ಅಂತರ ಮರೆತರಲ್ಲದೇ, ಮಾಸ್ಕ್ ಕೂಡ ಹಾಕಿಕೊಂಡಿರಲಿಲ್ಲ. ದಿನನಿತ್ಯ ಎಲ್ಲೆಂದರಲ್ಲಿ ಕದ್ದು ಮುಚ್ಚಿ ತರಕಾರಿ, ಕಿರಾಣಿ ಸಾಮಗ್ರಿಗಳ ಮಾರಾಟ ನಡೆದೇ ಇದ್ದುದರಿಂದ ಸೋಮವಾರ ಇವುಗಳ ಖರೀದಿಗಾಗಿ ಜನ ಸಂದಣಿ ಅಷ್ಟೇನು ಇರಲಿಲ್ಲ. ಮದ್ಯಪ್ರಿಯರು ತಂದ ವಾಹನಗಳನ್ನು ತೆರವುಗೊಳಿಸಲು ಪೊಲೀಸರು ಹೆಣಗಾಡಬೇಕಾಯಿತಲ್ಲದೇ ಒಂದೆರಡು ಬಾರಿ ಲಾಠಿ ರುಚಿ ತೋರಿಸಿ ಗದ್ದಲ ನಿಯಂತ್ರಿಸಿದರು.

    ಲಿಕ್ಕರ್ ಖರೀದಿಗೆ ಮದ್ಯಪ್ರಿಯರ ಕ್ಯೂ, ಮುಗಿಬಿದ್ದು ಎಣ್ಣೆ ಕೊಂಡುಕೊಂಡ ಜನ, ಹಟ್ಟಿಚಿನ್ನದಗಣಿಯಲ್ಲಿ ಲಘುಲಾಠಿ ಚಾರ್ಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts