More

    ನಿಲಯ ವಿದ್ಯಾರ್ಥಿಗಳಿಗೆ ಬಳಕೆಯಾಗದ ಅನುದಾನ

    ಲಿಂಗಸುಗೂರು: ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ವಸತಿ ನಿಲಯ ಮೇಲ್ವಿಚಾರಕರಿಂದ ಆಗುತ್ತಿರುವ ಮಾನಸಿಕ ಹಿಂಸೆ ತಡೆದು ಅವ್ಯವಸ್ಥೆ ಸರಿಪಡಿಸಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಎಸಿ ಕಚೇರಿ ತಹಸೀಲ್ದಾರ್ ಶಂಶಾಲಂಗೆ ಶನಿವಾರ ಮನವಿ ಸಲ್ಲಿಸಿದರು.

    ಅನುದಾನ ವಿದ್ಯಾರ್ಥಿಗಳಿಗೆ ಬಳಕೆಯಾಗುತ್ತಿಲ್ಲ. ಸೌಕರ್ಯಗಳ ಕೇಳಿದರೆ ಪುಂಡರು ಮತ್ತು ಪೊಲೀಸರನ್ನು ಕರೆಯಿಸಿ ಬೆದರಿಕೆ ಹಾಕಿಸುತ್ತಾರೆ. ಇದರಿಂದ ಕೆಲವರು ನಿಲಯ ತೊರೆದಿದ್ದಾರೆ. ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗದೆ ಅನುದಾನ ನುಂಗಿ ಹಾಕಿದ್ದಾರೆ.

    ನಿಲಯ ಸಿಬ್ಬಂದಿ ಸರಿಯಾಗಿ ಕರ್ತವ್ಯ ಪಾಲನೆ ಮಾಡುತ್ತಿಲ್ಲ. ಕೂಡಲೇ ನಿಲಯಕ್ಕೆ ಭೇಟಿ ನೀಡಿ, ಅವ್ಯವಸ್ಥೆ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳಾದ ಹನುಮೇಶ, ಚಂದುಲಾಲ, ಗೋಪಾಲ, ರಮೇಶ, ಹುಲಗಪ್ಪ, ಖಾನಪ್ಪ, ಸುರೇಶ, ಹನುಮಂತ, ಮಹೇಶ, ಮೌನೇಶ, ವೀರೇಶ, ನಾಗಪ್ಪ, ಅಭಿಷೇಕ, ಮಲ್ಲಿಕಾರ್ಜುನ, ಅಮರೇಶ, ರಾಜಕುಮಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts