More

    12ನೇ ವಾರ್ಡ್‌ಗೆ ಮೂಲ ಸೌಕರ್ಯ ಒದಗಿಸಲು ಒತ್ತಾಯಿಸಿ ಪುರಸಭೆಗೆ ಮುತ್ತಿಗೆ ಹಾಕಿದ ನಿವಾಸಿಗಳು

    ಲಿಂಗಸುಗೂರು: ಕುಡಿವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಸ್ಥಳೀಯ ಪುರಸಭೆ ವ್ಯಾಪ್ತಿಯ 12ನೇ ವಾರ್ಡ್ ನಿವಾಸಿಗಳು ಪುರಸಭೆಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ವಾರ್ಡ್‌ನಲ್ಲಿ ಕುಡಿವ ನೀರಿನ ಸರಬರಾಜು ಸಮರ್ಪಕವಾಗಿರದೆ ಪರದಾಡುತ್ತಿದ್ದೇವೆ. ಬೋರ್‌ವೆಲ್ ಹಾಕಿಸಿ ಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಗಮನ ಹರಿಸುತ್ತಿಲ್ಲ. ವಾರ್ಡ್‌ನಲ್ಲಿ ಚರಂಡಿ ಸ್ವಚ್ಛತೆ ಹಾಗೂ ಘನತ್ಯಾಜ್ಯ ವಿಲೇವಾರಿ ಮಾಡದೆ ದುರ್ವಾಸನೆ ಬೀರುತ್ತಿದೆ. ಮಲೀನ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಮಹಿಳಾ ಶೌಚಗೃಹ ಜಾಲಿಗಿಡಗಳಿಂದ ಆವೃತಗೊಂಡಿದೆ. ಶೌಚಕ್ಕೆ ತೆರಳುವ ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಮುಖ್ಯಾಧಿಕಾರಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ

    ಲಿಂಗಸುಗೂರು: ಮುಖ್ಯಾಧಿಕಾರಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ … ಸಮಸ್ಯೆ ಹೇಳಲು ಬಂದವರ ಮುಂದೆ ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಯಮನೂರು ಹೀಗೆ ಹೇಳಿ ನಿವಾಸಿಗಳು ತಬ್ಬಿಬ್ಬುಗೊಳ್ಳುವಂತೆ ಮಾಡಿದರು. ಮುತ್ತಿಗೆ ಹಾಕಿದ 12ನೇ ವಾರ್ಡ್‌ನ ನಿವಾಸಿಗಳ ಸಮಸ್ಯೆಯನ್ನು ಆಲಿಸಿದ ಬಳಿಕ ಅಧ್ಯಕ್ಷೆ ಗದ್ದೆಮ್ಮ ಯಮನೂರು ಪ್ರತಿಕ್ರಿಯಿಸಿ, ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಮುಖ್ಯಾಧಿಕಾರಿ ನಾವು ಹೇಳುವ ಕೆಲಸ ಸಮರ್ಪಕವಾಗಿ ಮಾಡುತ್ತಿಲ್ಲ. ಅಲ್ಲದೆ, ಸಾರ್ವಜನಿಕರ ಸಮಸ್ಯೆಗೂ ಸ್ಪಂದಿಸುತ್ತಿಲ್ಲ. ಕಚೇರಿಗೆ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಡಿಸಿ ಅಥವಾ ಎಸಿ ಬಳಿ ನಿಮ್ಮ ಅಳಲು ತೋಡಿಕೊಳ್ಳುವಂತೆ ಸೂಚಿಸಿದರು. ಈ ಮಾತಿಗೆ ಆಕ್ರೋಶಗೊಂಡ ನಿವಾಸಿಗಳು, ಸಮಸ್ಯೆಯನ್ನು ನೀವೇ ಪರಿಹರಿಸಬೇಕು, ಅವರಿವರ ಬಳಿ ಹೋಗುವುದಿದ್ದರೆ ಪುರಸಭೆ ಯಾಕಿರಬೇಕು ಎಂದು ತರಾಟೆ ತೆಗೆದುಕೊಂಡರು. ಸಿಒ ನಮಗೆ ಸಹಕಾರ ನೀಡುತ್ತಿಲ್ಲ, ನಾವೇನು ಮಾಡೋಣ, ನಮಗೂ ಸಾಕಾಗಿದೆ ಎಂದು ಅಧ್ಯಕ್ಷೆ ಗದ್ದೆಮ್ಮ ಯಮನೂರ ಬಂದವರ ಮುಂದೆ ತಮ್ಮ ಅಸಹಾಯಕತೆ ತೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts