More

    ಮತಶ್ರದ್ಧೆಯ ಇತಿ, ಮಿತಿ, ಪರಿಧಿ, ಮರ್ಯಾದೆಗಳು ಬಗ್ಗೆ ಡಾ. ಕೆ.ಎಸ್​. ನಾರಾಯಣಾಚಾರ್ಯ ವಿಶ್ಲೇಷಣೆ

    ಮತಶ್ರದ್ಧೆಯ ಇತಿ, ಮಿತಿ, ಪರಿಧಿ, ಮರ್ಯಾದೆಗಳು ಬಗ್ಗೆ ಡಾ. ಕೆ.ಎಸ್​. ನಾರಾಯಣಾಚಾರ್ಯ ವಿಶ್ಲೇಷಣೆ

    ಆದಿ ಶಂಕರರು ವಾಮಾಚಾರ, ಕಪಾಲಿಕರ ಹಾವಳಿ ತಡೆಗೆ ಶ್ರಮಿಸಿದರು. ರಾಮಾನುಜರು ಅಸ್ಪೃಶ್ಯತೆಯ ನಿವಾರಣೆಗೆ, ಎಲ್ಲರನ್ನೂ ಭಗವಂತನೆಡೆಗೆ ಕರೆದೊಯ್ಯುವ ಸಾಹಸ ಮಾಡಿದರು. ಬಸವಣ್ಣನವರೂ ದೃಢಪ್ರಯತ್ನ ಮಾಡಿದರು, ಅವಸರದ ಸುಧಾರಣೆ ವಿಫಲವಾಗುತ್ತದೆಯಾಗಿ, ಜನರ ಪರಿವರ್ತನೆ ಮನಃಪ್ರಯತ್ನ ಮೂಲಕ, ಮನಪರಿವರ್ತನೆಯಿಂದ ಮಾತ್ರ ಸಾಧ್ಯ.

    ಭಾರತದ ಸ್ವಾಭಿಮಾನ, ಅಂತಃಕರಣ ಜಾಗೃತಿಯ, ವ್ಯಾಪಕ ಅಭಿವೃದ್ಧಿಶೀಲತೆಯತ್ತ ದಾಪುಗಾಲು ಹಾಕುವುದು ಆರಂಭವಾಗಿರುವ ಸೂರ್ಯೋದಯದ ಈ ಕಾಲದಲ್ಲಿ ಹಲಕೆಲವರು ನಡೆಸುತ್ತಿರುವ ಅಪಪ್ರಚಾರ, ಹಿಂಸಾಚಾರ, ದೊಂಬಿ, ಮತೀಯ ಘರ್ಷಣೆಗಳು, ಸಾಮುದಾಯಿಕ ವೈರ, ಅನೈಕ್ಯತೆಯ ದುಷ್ಪರಿಣಾಮಗಳ ಬಗ್ಗೆ ಅಲ್ಲಲ್ಲಿ ಚಿಕಿತ್ಸೆ ನಡೆಯುತ್ತಿದ್ದರೂ, ಇನ್ನೂ ಪರಿಣಾಮ ಕಾಣದ ಸಂಕಟ ಕಾಲದಲ್ಲಿ ಒಂದು ಸಣ್ಣ ಗುಳಿಗೆಯಂತಹ, ಔಷಧವನ್ನು ನೀಡಬಯಸುವುದು ಅನಗತ್ಯ ಆಗಲಾರದು. ಹಲವಾರು ಘನ ಗಹನ ಗ್ರಹಿಕೆಗಳು ಅವಶ್ಯವಾಗಿ, ಭ್ರಾಂತ ಕಲ್ಪನೆಗಳೂ, ಗೃಹೀತಗ್ರಹಿಕೆಗಳೂ ತೊಲಗಬೇಕಾಗಿದೆ. ಅಲ್ಲಿ? ಸೂರ್ಯ ಉದಿಸಿದರೆ, ಕತ್ತಲೆ ತೊಲಗಬೇಕಾದ್ದು ಧರ್ಮ, ನಿಯಮ, ಅಪೇಕ್ಷಿತ, ಪ್ರಾಕೃತಿಕ ವ್ಯಾಪಾರ. ಹೌದೆ?

    ‘ಮತ’ ಎಂಬುದು ‘ಮತಿ’ ಶಬ್ದದಿಂದ ಬಂದು ‘ಒಂದು ಗ್ರಹಿಕೆ’ ಎಂದಾಗುತ್ತದೆ. ‘ಧರ್ಮ’ ಹಾಗಲ್ಲ. ಅದು ವಿಶ್ವನಿಯಮ, ಅಕೃತಕ, ಅನಿವಾರ್ಯ, ತಲೆಬಾಗಬೇಕಾದ ಮಹಾಶಕ್ತಿ. ‘ಮೊಂಡು ಗ್ರಹಿಕೆ’ ಎಂಬುದು ಪರೀಕ್ಷಾರ್ಹವಲ್ಲದ, ಅವಿಚಾರಿತ,

    ಅಂಧಃಶ್ರದ್ಧೆ=‘ಡಾಗ್ಮಾ’ ಎಂಬುದು, ಜಗತ್ತನ್ನು ಅನೇಕ ಸಲ ಮಹಾಯುದ್ಧಗಳಲ್ಲಿ ಸಾಯಿಸಿ, ಬೇಯಿಸಿದ ಭೂತ, ಬೇತಾಳ. ಉದಾಹರಣೆಗೆ, ‘ಯಾರೋ ಒಬ್ಬ ಗುರುವು ಸಮಾಧಿಯಿಂದ ಎದ್ದು ಬಂದ’ ಎಂಬುದನ್ನು ತರ್ಕಕ್ಕೆ ಹಚ್ಚಲಾಗುವುದಿಲ್ಲ. ‘ಒಂದೇ ದಿಕ್ಕಿಗೆ ತಿರುಗಿಯೇ ಪ್ರಾರ್ಥಿಸಬೇಕು’ ಎಂಬುದೂ ವಿಚಾರಾರ್ಹವಲ್ಲದ ಒಂದು ಗ್ರಹಿಕೆ. ‘ವಾರದ ಯಾವುದೇ ‘ಒಂದೇ’ ದಿನ ಮಾತ್ರ ಸಾಮೂಹಿಕ ಪ್ರಾರ್ಥನೆ, ಅದು ಏಕೆ?’ ಎಂದರೆ ಕಾರಣ ಕೊಡಲು ಬರುವುದಿಲ್ಲ. ಬರ್ನಾರ್ಡ್ ಶಾ ಎಂಬ ನಾಟಕಕಾರ ಇದನ್ನು, ಇಂಥವನ್ನು ವಿಡಂಬಿಸಿದ್ದಾನೆ. ‘ಸಂಡೇ ಗಾಡ್, ಮಂಡೇ ಗಾಡ್, ಫ್ರ್ರೈಡೆ ಗಾಡ್’ ಎಂಬುದನ್ನು ಹೇಗೆ ಪರೀಕ್ಷಿಸುತ್ತೀರಿ? ಈ ಕಲ್ಪನೆಗಳು ಇತರರೊಡನೆ ಸಂಘರ್ಷಕ್ಕೆ ಇಳಿದು ಸಾಮುದಾಯಿಕ ಹಾನಿ, ಸಂಘರ್ಷ, ಶಾಂತಿನಾಶ, ದ್ವೇಷವರ್ಧನೆಗೆ ಎಡೆಮಾಡುವಾಗ ಅನೇಕ ಸಮುದಾಯಗಳಿರುವ ನಾಡಿನಲ್ಲಿ ಕೆಲವು ನಿಯಮಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಪಾಲಿಸಿಯನ್ನು ಜಾರಿ ಮಾಡಿ ಸಾಮುದಾಯಿಕ ಶಾಂತಿಗೆ ಕಾರಣವಾಗುವ ಹೊಣೆ ಎಲ್ಲ ಮತನಾಯಕರ ಮೇಲೂ ಇರುತ್ತದೆ. ಮಾಡದೇ ಇರುವವರು ಸರ್ಕಾರಿ (ಸರ್ವಕಾರಿ) ನಿಯಮಗಳಂತೆ ಶಿಕ್ಷಿತರಾಗಬೇಕಾಗುತ್ತದೆ. ಇದನ್ನು ಅಲ್ಲಗಳೆಯುವುದು ರಾಷ್ಟ್ರದ್ರೋಹವಾಗುತ್ತದೆ. ಇಲ್ಲವೆಂದೀರಾ?

    ನಮ್ಮ ಭಾರತ ದೇಶದಲ್ಲಿ, ಈಗ ಇರುವುದಾದ ಎಲ್ಲ ಮತಾನುಯಾಯಿಗಳೂ ಈ ನಿಯಮವನ್ನು ಒಪ್ಪಬೇಕಾಗುತ್ತದೆ. ಹಾಗೆ ಸಂವಿಧಾನ ರಚಿತವಾಗಿಯೂ, ಹಲವು ಸಲ ಅನಪೇಕ್ಷಿತ ತಿದ್ದುಪಡಿಗಳಾಗಿ, ಹಲವು ಸಮುದಾಯಗಳ ತುಷ್ಟೀಕರಣಕ್ಕೆ ‘ನ್ಯಾಯ’ವನ್ನು ಮೂಗುದಾರ ಹಾಕಿ, ಎಳೆದು, ಅಪಚಾರ ಮಾಡಿರುವುದು ಯಾರಿಗೂ ಒಳ್ಳೆಯದನ್ನು ಈವರೆಗೆ ತಂದಿಲ್ಲ. ’ಚ್ಝ್ಝ ಚ್ಟಛಿ ಛಿಟ್ಠಿಚ್ಝ’ ಎಂದಾಗ, ಹೌದು ’್ಠಠಿ ಛಿಟ್ಠಿಚ್ಝ’ ಎಂದೇ ಅರ್ಥ ಆಗುತ್ತದೆ. ’ಞಟ್ಟಛಿ ಛಿಟ್ಠಿಚ್ಝ’ ಎಂಬ ಅಸಂಬದ್ಧ, ಅನ್ಯಾಯ, ಅಸಹಜ, ಸವಾರೀ ಹಕ್ಕುಗಳನ್ನು ಬ್ರಿಟಿಷರೂ ಇತ್ತು ಹೋದರು. ಆ ಮುನ್ನ ಮೊಗಲರು, ಇನ್ನಿತರ ದಾಳಿಕೋರರೂ ಹೇರಿ, ಆ

    ದುಃಸ್ವಪ್ನ ದಿನಗಳ ಈಗ ತುರ್ತಾಗಿ ಕಳೆಯುವುದಿದೆ. ಸಿಎಎ, ಎನ್​ಆರ್​ಸಿ ಜಾರಿಯಾಗುವುದರಿಂದ ಇಲ್ಲಿರುವವರಿಗೆ ಹಕ್ಕುಗಳು ದೃಢಪಡುತ್ತದೆ. ದೃಢಪಡದಾಗ ಕಾನೂನು ನಿಮ್ಮನ್ನು ಜಾತಿವಾರು, ಮತವಾರು, ಸಮುದಾಯವಾರಾಗಿ ಪರಿಗಣಿಸುವುದಿಲ್ಲ! ಹೊರಗಿಂದ ಬಂದವರಿಗೆ ಬಿಸಿ ತಾಗುವುದು ರಾಷ್ಟ್ರಹಿತಕಾರಕ ಹೆಜ್ಜೆ! ಈಗ ಅಂಥ ಹಲವು ಕೋಟಿ ನುಸುಳರು ಹಲವಾರು ದಶಕಗಳಿಂದ ಬಂದು ನೆಲೆಸಿ, ಅನಧಿಕೃತ ಹಕ್ಕು ಪಡೆದು, ಇಲ್ಲಿನ ಪ್ರಜೆಗಳಿಗೆ ಸಿಗಬೇಕಾದ ಸೌಲಭ್ಯ, ಸವಲತ್ತುಗಳನ್ನು ‘ಸ್ವಾಹಾ’ ಮಾಡುತ್ತ ಇಲ್ಲಿ ಸಂಘರ್ಷ, ಆರ್ಥಿಕ ಹಕ್ಕು ಕಸಿತ, ಉತ್ಪಾದನಾಂಶಗಳ ದುರುಪಯೋಗ, ಆಗುತ್ತ ಒಟ್ಟಾರೆ ದೇಶದ ಸ್ಥಿರತೆ, ಸಮಗ್ರತೆ, ಆರ್ಥಿಕ ಸಮತೋಲನಗಳಿಗೆ ಸವಾಲಾಗುತ್ತಿರುವ ಕಾಲದಲ್ಲಿ ಅಕ್ರಮ ತಡೆಯುವುದು ಅಪರಾಧ, ಅತಿಕ್ರಮ ಆಗಲಾರದು.

    ಬರ್ಟ್ರಾಂಡ್ ರಸೆಲ್ ಎಂಬ ಚಿಂತಕ, ಕ್ರೖೆಸ್ತ ಮತ ತೊರೆದ, ಮುಕ್ತ ಚಿಂತನಶೀಲನೊಬ್ಬ ಐಛಛಿಚಠ ಠಿಜಚಠಿ ಜಚಡಛಿ ಜಚ್ಟಞಛಿಛ ಠಟ್ಚಜಿಛಿಠಿಢ ಎಂಬ ಗ್ರಂಥ ಬರೆದಿದ್ದಾನೆ. ಅಂಥದನ್ನು ನಮ್ಮ ಭಾರತ ಸಮಾಜಕ್ಕೆ ಅನ್ವಯಿಸಿ ನಾನೂ ಬರೆಯಬೇಕೆಂದಿದ್ದೇನೆ. ‘ಜಗತ್ತು ಸೃಷ್ಟಿಯೇ ಆಗಿಲ್ಲವೆಂಬ’, ಐlಞಜ್ಞಿಜಿಠಞ, ಭ್ರಾಂತಿ ಕಲ್ಪನೆಯ ವಾದ, ಮಾಯವಾದ, ಅಸಹಜ ಮೋಕ್ಷ ಮಾರ್ಗಗಳ ಅವಾಸ್ತವ, ದುಷ್ಪರಿಣಾಮಗಳು, ಅತೀ ವ್ಯಕ್ತಿಪೂಜೆ, ಅಸಭ್ಯ ಸಾಮೂಹಿಕ ಆಚರಣೆಗಳು, ಅಬ್ಬರಾರ್ಭಟ, ಆಡಂಬರಗಳ ಜಂಜಾಟದಲ್ಲಿ ಸಾಮೂಹಿಕ ಜನವಂಚನೆ, ಅಶಾಂತಿ ಹಂಚುವ ಅನಪೇಕ್ಷಿತ ಉಪದೇಶಗಳು, ಎಗ್ಗಿಲ್ಲದೆ ಹರಡುತ್ತಿರುವ ಢೋಂಗಿ ಸಂನ್ಯಾಸಿಗಳ ಜಾಲ, ಹಾವಳಿ, ಮುಗ್ಧ ಜನರ ಶೋಷಣೆ, ಅಲ್ಲಿ ಸ್ತ್ರೀಯರ ಹಕ್ಕುಗಳ ಮೊಟಕು, ಶಿಶುಗಳ ಮಾರಾಟ, ನಂಬಿರಿ, ಇದರ ನಾನಾರೂಪಗಳು, ಇವು ಯಾವುವೂ ಸುಧಾರಣೆಗಳಿಂದ ಹೊರಗಿಂದ ಅಳಿಸುವುದಿಲ್ಲ.

    ರಾಜಾರಾಂ ಮೋಹನರಾಯ್, ದಯಾನಂದ, ವಿವೇಕಾನಂದರು ಒಳಗಿಂದ ಪರಿಹರಿಸಿದರು. ಆದಿ ಶಂಕರರು ವಾಮಾಚಾರ, ಕಪಾಲಿಕರ ಹಾವಳಿ ತಡೆಗೆ ಶ್ರಮಿಸಿದರು. ರಾಮಾನುಜರು ಅಸ್ಪ ೃ್ಯತೆಯ ನಿವಾರಣೆಗೆ, ಎಲ್ಲರನ್ನೂ ಭಗವಂತನೆಡೆಗೆ ಕರೆದೊಯ್ಯುವ ಸಾಹಸ ಮಾಡಿದರು. ಬಸವಣ್ಣನವರೂ ದೃಢಪ್ರಯತ್ನ ಮಾಡಿದರು, ಅವಸರದ ಸುಧಾರಣೆ ವಿಫಲವಾಗುತ್ತದೆಯಾಗಿ, ಜನರ ಪರಿವರ್ತನೆ ಮನಃಪ್ರಯತ್ನ ಮೂಲಕ, ಮನಪರಿವರ್ತನೆಯಿಂದ ಮಾತ್ರ ಸಾಧ್ಯ. ಗಮನಿಸಿ: ಮನಪರಿವರ್ತನೆ ಬೇರೆ, ಮತ ಪರಿವರ್ತನೆ ಬೇರೆ. ಗಾಂಧಿಯವರೂ ಯತ್ನಿಸಿ, ಎಡವಿ, ಅಸಹಜ ಸುಧಾರಣೆಗಳಿಂದ ಪ್ರಶ್ನೆಗಳು, ಉಲ್ಬಣಿಸಿದವೇ ಹೊರತು, ಪರಿಹಾರ ಆಗದೆ, ಈಗಣ ಅದರ ಅವಾಂತರ ನೋಡಿದ್ದೀರಿ! ಲಾಭವಾದದ್ದು, ನೆಹ್ರೂ ಪರಂಪರೆಗೆ, ಕಾಂಗ್ರೆಸ್ಸಿಗೆ, ಮತಾಂಧ ಸಮುದಾಯಗಳಿಗೆ, ಕೋಮುವಾದಿಗಳಿಗೆ ಆಗಿ, ಹಿಂದೆ ವಿನೋಬಾ ಅವರ ‘ಭೂದಾನ’ ಯಜ್ಞ ‘ಸವೋದಯವಾದ’ ಅಪಹಾಸ್ಯಕ್ಕೆ ಈಡಾಗಿ, ಊಚ್ಟ್ಚ ಎಂಬ ಪ್ರಹಸನದಂತೆ ಆಗಿದ್ದು, ಜನ ಇನ್ನೂ ಕಣ್ಣು ತೆರೆಯಬೇಕಾಗಿದೆ. ಅದಕ್ಕೆ ಕಾಂಗ್ರೆಸ್ ಅಡ್ಡ, ಕಮ್ಯುನಿಷ್ಟರು ಅಡ್ಡ. ಪಾಕಿಸ್ತಾನದ ಪರ ಸ್ವಾರ್ಥಿ, ಜಾತಿ ರಾಜಕಾರಣಿಗಳೂ ಅಡ್ಡ, ವಿದೇಶೀ ಶಕ್ತಿಗಳೂ ಅಡ್ಡ, ಮಾರಿಕೊಂಡ ಮಾಧ್ಯಮಗಳೂ, ಅಪಪ್ರಚಾರದ ಬಾಡಿಗೆ ಸಂಸ್ಥೆಗಳೂ ಅಡ್ಡ, ಗೊಂದಲವೋ ಗೊಂದಲ!

    ಹಿಂದೆ ಗ್ರೀಕರಲ್ಲಿ ಅರಿಸ್ಟಾಟಲ್ ಎಂಬ ತತ್ತ್ವಜ್ಞಾನಿ ಇದ್ದ. ‘ಮನುಷ್ಯರಲ್ಲಿ ಸ್ತ್ರೀಯರಿಗೆ, ಪುರುಷರಿಗಿಂತ ಕಡಿಮೆ ಹಲ್ಲುಗಳಿವೆ’ ಎಂದು ಬರೆದ! ಅವನಿಗೆ ಇಬ್ಬರು ಹೆಂಡರು! ಒಬ್ಬಳ ಬಾಯನ್ನೂ ತೆರೆದು ನೋಡಿ ಪರೀಕ್ಷಿಸಲಿಲ್ಲ ಎಂದು ರಸೆಲ್ ಬರೆದಿದ್ದಾನೆ. ನೋಡಿ. ಈ ಕಲ್ಪನೆ, ‘ಸ್ತ್ರೀಯರು ಪುರುಷರಿಗಿಂತ ಕಡಿಮೆ’ ಎಂಬುದು ‘ಆದಂ ಈವ್’ ಕಥೆಯ ಸೆಮಿಟಕ್ ಮೂಲದ್ದು. ಅದು ಬುರ್ಖಾ, ತಲಾಖ್, ಸ್ತ್ರೀಯರ ಮಾರಾಟ ಎಂಬ ಅನೇಕ ಮಧ್ಯಯುಗೀನ ಬರ್ಬರ, ಇಂದಿಗೂ ಉಳಿದ ಅವಶೇಷಗಳಾಗಿದೆ! ಈಸಾಯಿ, ಇಸ್ಲಾಮಿಯರು ಇಂಥ ಮತಸಂಕೋಲೆಗಳಿಂದ ಹೊರಬರುವುದು ಯಾವಾಗ? ಬಾರದೆ, ಭಾರತ ಶಾಂತವಾಗಿರುವುದು ಹೇಗೆ ಸಾಧ್ಯ? ತಮಿಳುನಾಡಿನಲ್ಲಿ 50 ವರ್ಷಗಳ ಹಿಂದೆ ರಾಮಸ್ವಾಮಿ ನಾಯರ್ ಎಂಬ ಪೆರಿಯಾರ್, ದ್ರವಿಡವಾದಕ್ಕೆ ಬಲಿಯಾಗಿ, ರಾಮ-ಸೀತೆಯರ ಚಿತ್ರಗಳಿಗೆ ಚಪ್ಪಲಿಯಿಂದ ಹೊಡೆದರು! ಗಣಪತಿ ವಿಗ್ರಹಗಳನ್ನು ಒಡೆದರು. ಬ್ರಾಹ್ಮಣರ ಜುಟ್ಟು, ಜನಿವಾರ ಕತ್ತರಿಸುವ ಬಹಿರಂಗ ಚಳವಳಿ ಮಾಡಿದರು. ಆಗ ಯಾವ ಸರ್ಕಾರವೂ ಅದನ್ನು ಶಿಕ್ಷಿಸಲಿಲ್ಲ! ಈಗ ಅದನ್ನು ಹೇಳಿದ್ದಕ್ಕೆ ರಜನಿಕಾಂತರ ಮೇಲೆ ಬೇತಾಳ ಛೂ!

    ಸತ್ಯವನ್ನೊಪ್ಪದ, ಧರ್ಮಕ್ಕೆ, ವಿಶ್ವನಿಯಮಕ್ಕೆ ತಲೆಬಾಗದ ಜನಾಂಗಗಳೂ, ರಾಷ್ಟ್ರಗಳೂ ಹಾಳಾಗಿವೆ. ಗ್ರೀಸ್, ರೋಮ್ ಈಜಿಪ್ತ್, ಸುಮೆರಿಯಾ, ಮೆಸಪೊಟೇಮಿಯಾ, ಅಲ್ಲದೆ ಇಂದಿನ ಸೋವಿಯೆತ್ ಪ್ರಯೋಗ, ಚೀನಿಯರ ದುರಾಡಳಿತ ಹಾಗೂ ಪಾಕಿಸ್ತಾನದ ಮೊಂಡು, ಮತಗುರುಡು ಎಲ್ಲ ನಿಮ್ಮ ಮುಂದೆಯೇ ಇವೆ. ಭಾರತ ನಂಬಿ ಬಂದ ಧರ್ಮ, ಸುಪರೀಕ್ಷಿತ, ತರ್ಕಶುದ್ಧ, ಇತಿಸಾಹಸಕ್ಕೆ ಬದ್ಧ, ಶುದ್ಧ, ದೃಢ ಆಧಾರವುಳ್ಳದ್ದಾಗಿದ್ದು, ಅಲ್ಲಿ ಇಲ್ಲಿ ಅತಿಕ್ರಮಗಳನ್ನು ನಾವೇ ತೊಡೆಯುವುದು ಇದೆ. ಬೇರೆಯವರಲ್ಲ! ಇಲ್ಲಿನ ಮುಸ್ಲಿಂರು ಸ್ವಶ್ರೇಷ್ಠತೆಯನ್ನು ತೊರೆಯಬೇಕು. ಪ್ರತ್ಯೇಕತಾ ಬುದ್ಧಿಯನ್ನು ತ್ಯಜಿಸಬೇಕು. ಕೇರಳದಲ್ಲಿ ಮಸೀದಿಗಳಲ್ಲಿ ಈಗ ಹಿಂದೂ ವಿವಾಹಗಳನ್ನು ಏರ್ಪಡಿಸುತ್ತಿರುವುದು ಶುಭ. ಚರ್ಚುಗಳಲ್ಲಿ ಗಣೇಶ ಹಬ್ಬ, ಕೃಷ್ಣ ಜಯಂತಿ ಆದರೆ ಹಿತ; ವಿಶಾಲ ಹಿಂದೂ ಗ್ರಹಿಕೆಗಳಲ್ಲಿ ಸೇರ್ಪಡೆಗೆ ಹಿಂಸಾಚಾರರಹಿತ ಗ್ರಹಿಕೆಗಳಿಗೆ ಅವಕಾಶ ಇದೆ.

    ಹಿಂದೂ ಧರ್ಮ ಮುಕ್ತ ಮತ್ತು ಸ್ವಾಗತ ಹೃದಯದವಿಶಾಲ ಬಾಹುಗಳ ಚಾಚಿನಿಂತ ಎಲ್ಲ ಒಳ್ಳೆಯದನ್ನೂ ಗ್ರಹಿಸುವ, ಐc್ಠಜಿಡಛಿ, ಉಟಚ್ಞಛಜ್ಞಿಜ, uಜಿಠಿಜಿಡಛಿ ಮಾದರಿಯ, ಹೃದಯದ ಆಕಾಶದಂತೆ ವಿಶಾಲ, ಗಾಢ. ಇಲ್ಲಿ ಯಾರೂ ಯಾರ ಮೇಲೂ ಸವಾರಿ ಮಾಡಬಾರದ, ಮಾಡಲಾಗದ ಸ್ಥಿತಿ ಬರದ ಹೊರತು ಈಗಿನ ಘರ್ಷಣೆಗಳು ಮಾಯವಾಗುವುದಿಲ್ಲ. ಮುಸ್ಲಿಂ ಧುರೀಣರು ಅನೇಕರು ಒಪು್ಪತ್ತಿದ್ದಾರೆ. ಆದರೆ, ಅಡ್ಡಲಾಗಿರುವ ರಾಜಕೀಯ ಶಕ್ತಿಗಳನ್ನು ಮಟ್ಟ ಹಾಕಬೇಕಾಗಿದೆ. ಅವು ಕೊಬ್ಬಿವೆ, ಹಿಗ್ಗಿವೆ, ರಕ್ತ ಹೀರಿದ ತಿಗಣೆಯಂತೆ, ಹೊಸಕಿದ ಹೊರತು ಸಾಯಲಾರವು. ಎಲ್ಲಿ ಏನೇ ಆದರೂ ಆರೆಸ್ಸೆಸ್, ಬಿಜೆಪಿ ಹೊಣೆ ಎನ್ನುತ್ತ ಹೊಣೆಗೇಡಿಗಳು, ಬೇಜವಾಬಾರ ಹೇಳಿಕೆ ಈಯುತ್ತಿರುವುದು ಶುಭವಲ್ಲ. ಮಂಗಳೂರಿನಲ್ಲಿ ಯಾರೋ ಬಾಂಬ್ ಇಟ್ಟರು. ‘ಇದು ಬಿಜೆಪಿ ಕೆಲಸ’ ಎಂದೊಬ್ಬ ಮಾಜಿಯ ಅಪಪ್ರಲಾಪ! ಇನ್ನೂ ವಿಚಾರಣೆಯೇ ಆಗಿಲ್ಲ! ಕೊಯಮತ್ತೂರು ಬ್ಲಾಸ್ಟ್ ಕೇಸಿನಲ್ಲಿ ಕರ್ನಾಟಕದ ಕೇಂದ್ರ ಮಾಜಿ ಮಂತ್ರಿ ಒಬ್ಬರು ಬಿಜೆಪಿಯದ್ದೇ ಕೈವಾಡ ಎಂದದ್ದು ನೆನಪು! ಇಲ್ಲದಲ್ಲಿ ಭೂತದರ್ಶನ ಎಂಬುದು ಕಂಸನ ಕೊನೆಯ ದಿನಗಳ ಭಯಭ್ರಾಂತ ರೀತಿಯಯ್ಯ!

    ರಾಜಕೀಯ ಎಂಬುದು ಈಗ ರಕ್ತಕ್ಕೆ ಹಪಹಪಿಸುವ ಕಾಡುಮೃಗದ ಚಿತ್ತದಂತೆ ಆಗಿದೆ! ದುರ್ದೈವ! ಕರ್ನಾಟಕದ ಒಬ್ಬ ಮಾಜಿಯನ್ನಂತೂ ನಿಯಂತ್ರಿಸುವವರೇ ಇಲ್ಲ. ಏಕೆ? ಆ ಪಕ್ಷದ ಅನೇಕರದೂ ಅದೇ ಸ್ಥಿತಿ. ಬುದ್ಧಿ ನೇರವಾಗಿಲ್ಲದವರಿಗೆ ವಿಧಾನಸಭೆಯಲ್ಲಿ ಕೆಲಸವಿಲ್ಲ. ಅವರಿಗೆ ಚಿಕಿತ್ಸಾಲಯಗಳಿವೆ. ಮೋದಿ ನೇತೃತ್ವದಲ್ಲಿ ರಾಷ್ಟ್ರ ನವೋದಯ ಯುಗ ಕಾಣುತ್ತಿರುವಾಗ, ಯುವ ಪೀಳಿಗೆ ಎಚ್ಚೆತ್ತಿದೆ. ಹಳಬರ ಕಣ್ಣು ಮುಚ್ಚಿಯೂ, ಶ್ವಾಸ ಎಳೆಯುತ್ತ ಮರುಕಳಿಕೆಯ/ಕಳೆದು ಹೋದ ಅಧಿಕಾರ ದರ್ಪ ಯುಗದ ಕನಸಿನಲ್ಲಿದ್ದಾರೆ. ಇದು ಐಸಿಯು ಪರಿಸ್ಥಿತಿ. ದೇವರು ಯುವ ಭಾರತಕ್ಕೆ ಆಸೆ, ಆಕಾಂಕ್ಷೆ, ಭರವಸೆ, ರಚನಾ ಚಾತುರ್ಯ, ಶಕ್ತಿಯನ್ನು ಈಗ ಅನುಗ್ರಹಿಸಿದ್ದಾನೆ. ಅವರೊಡನೆ ನಾನೂ ಯುವಕನಾಗಿದ್ದೇನೆ. ಒಬ್ಬರು ನನಗೆ ಹೇಳಿದ್ದು-‘ನಿಮ್ಮ ಶರೀರ ವೃದ್ಧ ಆಗಿರಬಹುದು, ಆದರೆ ಮಿದುಳು, ಮನಸ್ಸು ಸದಾ ಯುವಕ’ ಅಂತ. ಹೌದೆ?

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts