ನಿಮ್ಮ ಬಾಯಿ, ತಿನ್ನುವ ವಿಧಾನವನ್ನು ಯಾರೋ ಗಮನಿಸುತ್ತಿದ್ದಾರೆಂದ್ರೆ ಮುಜುಗರವಾಗುತ್ತಾ?: ನಿಮ್ಮ ಈ ನಡತೆಯನ್ನ ಹೀಗಂತಾರೆ ನೋಡಿ..Psychology

ನಿಮ್ಮ ಬಾಯಿ, ತಿನ್ನುವ ವಿಧಾನವನ್ನು ಯಾರೋ ಗಮನಿಸುತ್ತಿದ್ದಾರೆಂದ್ರೆ ಮುಜುಗರವಾಗುತ್ತಾ?: ನಿಮ್ಮ ಈ ನಡತೆಯನ್ನ ಹೀಗಂತಾರೆ ನೋಡಿ..Psychology
Published on: 
  • ಸಾರ್ವಜನಿಕರ ಮಧ್ಯೆ ಕೂತು ತಿನ್ನುವುದು ಸಮಸ್ಯೆಯಲ್ಲ, ಯಾರಾದರೂ ಗಮನಿಸುತ್ತಿದ್ದಾರೆಯೇ ಎನ್ನುವುದೇ ಮೂಲ ಸಮಸ್ಯೆ.

  • ಮುಂದೆ ಕೂತ ವ್ಯಕ್ತಿ, ಬಾಯಿ, ಆಹಾರ, ತಿನ್ನುವ ಭಂಗಿ ಗಮನಿಸುತ್ತಿದ್ದರೆ ಮುಜುಗರವಾಗಿತ್ತಾ?.

  • ಮನೋ ವೈದ್ಯರ ಸಂಶೋಧನೆಯ ಪ್ರಕಾರ ಈ ನಡತೆಯನ್ನ ಸೆಲ್ಫ್-ಫೋಕಸ್ಡ್ ಅಟೆನ್ಷನ್ ಎನ್ನಲಾಗುತ್ತದೆ.

ಇಂಟ್ರೋವರ್ಟ್​​ಗಳು ಮಾತ್ರವಲ್ಲ ಕೆಲವೊಮ್ಮೆ ಎಕ್ಸ್ಟ್ರಾವರ್ಟ್​ಗಳಿಗೂ ಈ ಸಂಗತಿ ಮುಜುಗರವೇ ಹೌದು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಂಕೆ ಇಲ್ಲದೇ ಆಹಾರವನ್ನು ಸೇವಿಸುವವರು ಹೆಚ್ಚಾಗಿ ಇಲ್ಲ. ಅರ್ಧಕ್ಕರ್ಧ ಜನ ಯಾರು ಇಲ್ಲದ ಸಮಯದಲ್ಲಿ ಆಹಾರ ಸೇವಿಸುವುದು ಅಥವಾ ನಮ್ಮ ಮುಂದೆ ಯಾರು ಕುಳಿತುಕೊಳ್ಳದ ಜಾಗವನ್ನೇ ಆರಿಸಿಕೊಳ್ಳುವುದು ಸ್ವಭಾವ. ಅಕಸ್ಮಾತ್​ ಆಗಿ ಎಲ್ಲರೊಂದಿಗೆ ಊಟ ಮಾಡುವ ಸ್ಥಿತಿ ಬಂದಾಗ ಸಾವಿರಾರು ಪ್ರಶ್ನೆಗಳು ನಮ್ಮನ್ನು ಕಾಡುವುದು ನಿಜ. ನಾನು ಸರಿಯಾಗಿ ಅಗಿಯುತ್ತಿದ್ದೇನಾ?, ನನ್ನ ತುಟಿ ಯಾವ ಭಂಗಿಯಲ್ಲಿದೆ. ಅಯ್ಯೋ ನನ್ನ ಕೈ ಪೂರಾ ಸಾರಾಗಿದ್ಯಾಲ್ಲ. ಅಯ್ಯೋ ಇಷ್ಟು ದೊಡ್ಡ ಬಾಯಿ ತೆರೆದೆರೆ ಏನೆಂದು ಕೊಳ್ಳುತ್ತಾರೋ ಎಂದು ಆಲೋಚನೆಗೆ ಬರುವುದು ದಿಟ.

ಸಾಮಾನ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಒಂಟಿಯಾಗಿ ತಿನ್ನುವಾಗ ಇರುವ ಮಜವು ಎಲ್ಲರೊಂದಿಗೆ ಕೂಡಿ ಮಾಡುವಾಗ ಇರೋದಿಲ್ಲ. ಒಟ್ಟಾಗಿ ಊಟ ಮಾಡುವುದಕ್ಕಿಂತ, ಯಾರು ನಮ್ಮನ್ನು ಗಮನಿಸುತ್ತಿಲ್ಲ ಎಂದು ತಿನ್ನುವಾಗ ಮೂಡುವ ಸಮಾಧಾನ ಅಂತಿಂತದ್ದಲ್ಲ. ಇದನ್ನು ಮನೋ ವೈದ್ಯರ ಪ್ರಕಾರ self-consciousness ಅಂದ್ರೆ ಆತ್ಮಪ್ರಜ್ಞೆ ಎನ್ನಲಾಗುತ್ತದೆ. ದಿನನಿತ್ಯ ಮೂಡದ ಈ ಆತ್ಮಪ್ರಜ್ಞೆ ಮುಂದೆ ಯಾರೋ ಇದ್ದಾರೆ, ಯಾರೋ ನಮ್ಮನ್ನೇ ದಿಟ್ಟಿಸುತ್ತಿದ್ದಾರೆ ಎನ್ನುವ ಹೊತ್ತಿಗೆ ನೆನಪಾಗಿ ಬಿಡುತ್ತದೆ.

'ಸೆಲ್ಫ್-ಫೋಕಸ್ಡ್ ಅಟೆನ್ಷನ್'

ನಮ್ಮ ಮುಂದೆ ಯಾರೋ ಅಪರಿಚಿತರು ಅಥವಾ ಕೊಲೀಗ್, ಕಚೇರಿಯ ಕ್ರಷ್ ಇದ್ದಾನೆ ಎಂದ ಮಾತ್ರಕ್ಕೆ ಸಾವಿರಾರು ವಿಚಾರ ತಲೆಗೆ ಬರುತ್ತದೆ. ನಾನು ದೊಡ್ಡದಾಗಿ ಬಾಯಿ ತೆರೆದು ಸೇವಿಸುತ್ತಿದ್ದೀನಾ?, ಬಾಯ್ಗಿಡುತ್ತಿರುವ ತುತ್ತು ದೊಡ್ಡದಾಗಿದ್ಯಾ?, ಆತನಿಗೆ ನಾನು ಹೇಗೆ ಕಾಣುತ್ತಿದ್ದೇನೆ ಎನ್ನುವ ಮೌಲ್ಯಮಾಪನವನ್ನು ಹಾಕಿಕೊಂಡು ಸರಿಯಾಗಿ ಹೊಟ್ಟೆಗೆ ಇಳಿಸಿಕೊಳ್ಳದೆ..ಬಿಡಾಡುತ್ತದೆ.

ಇಂತಹ ಸನ್ನಿವೇಶಗಳನ್ನು ಕಲೆ ಹಾಕಿದ ಮನೋವಿಜ್ಞಾನಿಗಳು ಇದನ್ನು 'ಸೆಲ್ಫ್-ಫೋಕಸ್ಡ್ ಅಟೆನ್ಷನ್' ಎಂದು ಕರೆದಿದ್ದಾರೆ. ಸಾಮಾನ್ಯವಾಗಿ ಅಚಾನಕ್ಕಾಗಿ ಎದುರಾಗುವ ಸನ್ನಿವೇಶಗಳಿಗೆ ಹೇಗಿರಬೇಕು, ಹೇಗಿರಬಾರದು ಎಂದು ನಿರ್ಧರಿಸುವ ಮೂಲಕ ವ್ಯಕ್ತಿ ಜಾಗರೂಕವಾಗಿರಲು ಹೀಗೆ ನಡೆಸದುಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.

Also Read
ಓದೋದಿಲ್ಲ..ಆದ್ರೆ ಕಂಡಾಗೆಲ್ಲ ಪುಸ್ತಕ ಕೊಂಡುಕೊಳ್ತಿದ್ದೀರಾ?; ನಿಮ್ಮ ಈ ಸ್ವಭಾವಕ್ಕೆ ಜಪಾನಿಯರು ಹೀಗಂತಾರೆ ನೋಡಿ..Tsundoku
ನಿಮ್ಮ ಬಾಯಿ, ತಿನ್ನುವ ವಿಧಾನವನ್ನು ಯಾರೋ ಗಮನಿಸುತ್ತಿದ್ದಾರೆಂದ್ರೆ ಮುಜುಗರವಾಗುತ್ತಾ?: ನಿಮ್ಮ ಈ ನಡತೆಯನ್ನ ಹೀಗಂತಾರೆ ನೋಡಿ..Psychology

ನಮ್ಮನ್ನು ಗಮನಿಸದ ಜನರಿರುವ ಜಾಗ ಬೇಕು

ತಮ್ಮ ಆಹಾರ ಸೇವನೆಯ ಪ್ರಮಾಣವನ್ನು ಯಾರಾದರೂ ಗಮನಿಸುತ್ತಿದ್ದಾರೆ ಎಂದು ನಂಬಿದಾಗ ಜನರು ತಮ್ಮ ತಿನ್ನುವ ಅಭ್ಯಾಸವನ್ನು ಬದಲಾಯಿಸಿಕೊಳ್ಳುತ್ತಾರೆಯೇ ಎಂಬುದನ್ನು ಪರಿಶೀಲಿಸಲು ಡಿಸೆಂಬರ್ 2014ರಲ್ಲಿ Appetite ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಗಮನಹರಿಸಿದೆ.

ಎರಡು ರೀತಿಯಲ್ಲಿ ಸನ್ನಿವೇಶ ಕ್ರಿಯೇಟ್ ಮಾಡಲಾಗಿತ್ತು. ಒಂದರಲ್ಲಿ ಸಾಮಾನ್ಯವಾಗಿ ತಿನ್ನುವಾಗ ಯಾರಾದರೂ ಗಮನಿಸುತ್ತಾರೆಯೇ, ಗಮನಿಸಿದಾಗ ಇವರ ವರ್ತನೆ ಹೇಗಿರುತ್ತದೆ ಎಂದು. ಮತ್ತೊಂದು ತಿನ್ನುವ ಪ್ರಮಾಣದ ಬಗ್ಗೆ ಹೇಗೆ ಗಮನವಿಡುತ್ತಾರೆ ಎನ್ನುವ ಬಗ್ಗೆ ಸಂಶೋಧನೆ ನಡೆಸಲಾಗಿತ್ತು.

ಸಾರ್ವಜನಿಕ ಸ್ಥಳದಲ್ಲಿ ಊಟ ಮಾಡುವವರಿಗೆ ಊಟ ಹಂಚಿಕೊಳ್ಳುವುದು, ಗುಂಪಾಗಿ ಕೂತು ಆಹಾರ ಸೇವನೆ ಮಾಡುವುದು ಒಂದು ದೊಡ್ಡ ಸಮಸ್ಯೆಯಲ್ಲ. ಅವರಿಗೆ ಬೇಕಾಗುವುದು ಒಂದೇ ಅವರ ಆಹಾರ ಸೇವನೆ, ಬಾಯಿಯ ಗಾತ್ರ ಗಮನಿಸದೆ ಇದ್ದರೆ ಸಾಕು ಎಲ್ಲಿದ್ದರೂ ನಿಶ್ಚಿಂತೆಯಿಂದ ಸೇವನೆ ಮಾಡುತ್ತಾರೆ. ಒಟ್ಟಾಗಿ ಕೂತು ತಿನ್ನುವುದು ಎಲ್ಲರ ಸಮಸ್ಯೆಯಲ್ಲ..ಕುಳಿತಾಗ ಯಾರೋಬ್ಬರು..ಮತ್ತೊಬ್ಬರನ್ನು ಗಮನಿಸದೆ ತಿನ್ನುವುದು ಮುಖ್ಯ ಎನ್ನುತ್ತಾರೆ ಮನೋ ವೈದ್ಯರು, (ಏಜೆನ್ಸೀಸ್).