ನವರಾತ್ರಿ ಹಬ್ಬಕ್ಕೆ ದಿನಗಣನೆ; ಯಾವ ದಿನ, ಯಾವ ಬಣ್ಣದ ಉಡುಪು ಧರಿಸಬೇಕು?..Navratri

ನವರಾತ್ರಿ ಹಬ್ಬಕ್ಕೆ ದಿನಗಣನೆ; ಯಾವ ದಿನ, ಯಾವ ಬಣ್ಣದ ಉಡುಪು ಧರಿಸಬೇಕು?..Navratri
Published on: 

ನವರಾತ್ರಿಯು ಹಿಂದೂ ಸಂಪ್ರದಾಯಗಳಲ್ಲಿ ಒಂದು ಮಹತ್ವದ ಹಬ್ಬವಾಗಿದೆ. 9 ದಿನ ದೇವಿಯ 9 ರೂಪಗಳನ್ನು ಭಕ್ತರು ಶ್ರದ್ಧೆ-ಭಕ್ತಿ ವಿನಯದಿಂದ ಪೂಜಿಸುತ್ತಾರೆ. ಈ ಹಬ್ಬವನ್ನು ವರ್ಷಕ್ಕೆ ನಾಲ್ಕು ಬಾರಿ ಆಚರಿಸಲಾಗುತ್ತದೆ. ಒಂದು ಚೈತ್ರ, ಮಾಘ ಮತ್ತು ಆಷಾಢ ಗುಪ್ತ ನವರಾತ್ರಿ ಹಾಗೂ ಶಾರದೀಯ ನವರಾತ್ರಿ ಎಂದು ಆರಾಧಿಸಲಾಗುತ್ತದೆ.

ಈ ವರ್ಷ ಅಕ್ಟೋಬರ್​ 11ರಿಂದ ಅಕ್ಟೋಬರ್​ 19ರವರೆಗೂ ಶಾರದೀಯ ನವರಾತ್ರಿಯನ್ನು ಆಚರಿಸಲಾಗುತ್ತದೆ. ಈ ಒಂಬತ್ತು ದಿನ ಹಗಲಿ ಮತ್ತು ರಾತ್ರಿ ವೇಳೆ ಭಕ್ತರು ದೇವಿಗೆ ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತಾರೆ. ದುರ್ಗಾ ದೇವಿಯನ್ನು ಪೂಜೆ ಮಾಡುತ್ತಾರೆ. ದೇವಿಯನ್ನು ಮೆಚ್ಚಿಸಲು ಬಣ್ಣಗಳು ಪ್ರಮುಖ ಪಾತ್ರವಹಿಸುವ ಕಾರಣ, 9 ಬಣ್ಣದ ಬಟ್ಟೆಯನ್ನು 9 ದಿನ ಧರಿಸಿ ದೇವಿಗೆ ಪೂಜೆ ಮಾಡುವುದು ಪದ್ಧತಿ.

ನವರಾತ್ರಿ ಮೊದಲದಿನದಿಂದ ಕೊನೇ ದಿನದವರೆಗೂ ಯಾವ ಬಣ್ಣದ ಬಟ್ಟೆ ಧರಿಸಬೇಕು. ಪ್ರತಿ ದಿನ ಪೂಜಿಸುವ ದಿನಾಂಕ, ದಿನ, ತಿಥಿ ಮತ್ತು ದೇವಿಯನ್ನು ಪೂಜಿಸುವ ಮಹತ್ವದ ಪೂಜಾ ಸಿದ್ಧತೆಗಳು ಅಥವಾ ಹಬ್ಬದ ಕಾರ್ಯಕ್ರಮದ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

  • ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು

  • ಅಕ್ಟೋಬರ್​ 11

  • ನವರಾತ್ರಿ 1ನೇ ದಿನ; ಕೇಸರಿ

  • ದೇವತೆ: ಶೈಲ ಪುತ್ರಿ ದೇವಿ

ನವರಾತ್ರಿಯ ಮೊದಲ ದಿನವನ್ನು ಶೈಲಪುತ್ರಿ ದೇವಿಗೆ ಅರ್ಪಿಸಲಾಗುತ್ತದೆ. ಈ ದಿನ ಕೇಸರಿ ಬಣ್ಣದ ಬಟ್ಟೆ ತೊಟ್ಟು ದೇವಿಗೆ ಪೂಜೆಯನ್ನು ಅರ್ಪಿಸಲಾಗುತ್ತೆ. ತ್ರಿಶೂಲ ಮತ್ತು ಕಮಲವನ್ನು ಹಿಡಿದ ದೇವಿ ಹಾಗೂ ಗೂಳಿಯ ಮೇಲೆ ಸವಾರಿ ಚಿತ್ರಿಸಲಾಗಿದೆ.ಕಿತ್ತಳೆ ಬಣ್ಣವು ಉಷ್ಣತೆ, ಶಕ್ತಿಯ ಸಂಕೇತವಾಗಿದೆ.

  • ಅಕ್ಟೋಬರ್​ 12

  • ನವರಾತ್ರಿ 2ನೇ ದಿನ; ಬಿಳಿ

  • ದೇವತೆ: ಬ್ರಹ್ಮಚಾರಿಣಿ

ನವರಾತ್ರಿ 2ನೇ ದಿನವನ್ನು ಬ್ರಹ್ಮಚಾರಿಣಿ ದೇವಿಗೆ ಅರ್ಪಿಸಲಾಗುತ್ತದೆ. ಬ್ರಹ್ಮಚಾರಿಣಿ ದೇವಿಯು ಪಾರ್ವತಿ ದೇವಿಯ ತಪಸ್ವಿ ಸ್ವರೂಪ ಎನ್ನುವ ನಂಬಿಕೆ ಇದೆ. ಈ ದಿನ ಬಿಳಿ ಬಣ್ಣದ ಬಟ್ಟೆ ತೊಟ್ಟು ದೇವಿಗೆ ಪೂಜಾ ವಿಧಿವಿಧಾನವನ್ನು ಅರ್ಪಿಸಲಾಗುತ್ತದೆ. ದೇವಿಯ ಆರಾಧನೆ ಪಾವಿತ್ರ್ಯ ಮತ್ತು ಶಾಂತಿಯ ಸಂಕೇತವಾಗಿದೆ.

  • ಅಕ್ಟೋಬರ್​ 13

  • ನವರಾತ್ರಿ 3ನೇ ದಿನ; ಕೆಂಪು

  • ದೇವತೆ: ಮಾತೆ ಚಂದ್ರಘಂಟಾ

ಮಾತೆ ಚಂದ್ರಘಂಟಾ ದೇವಿಯು ಹಣೆ ಅಥವಾ ತಲೆಯ ಮೇಲೆ ಅರ್ಧ ಚಂದ್ರಾಕಾರವನ್ನು ಹೊಂದಿರುತ್ತಾಳೆ. ದೇವಿಗೆ ಹತ್ತು ಕೈಗಳಿದ್ದು, ವಿವಿಧ ಆಯುಧಗಳನ್ನು ಹೊಂದಿರುತ್ತಾಳೆ. ಈ ದಿನ ಕೆಂಪು ಬಣ್ಣ ಬಳಕೆ ಮಾಡಲಾಗುತ್ತದೆ. ಇದು ಧೈರ್ಯ ಮತ್ತು ಶಕ್ತಿಯ ಸಂಕೇತವಾಗಿದೆ.

  • ಅಕ್ಟೋಬರ್​ 14

  • ನವರಾತ್ರಿ 4ನೇ ದಿನ; ನೀಲಿ

  • ದೇವತೆ: ಕೂಷ್ಮಾಂಡಾ ಮಾತೆ

ಕೂಷ್ಮಾಂಡ ದೇವಿಯನ್ನು ಈ ಕೂಷ್ಮಾಂಡ ದೇವಿಯನ್ನು ಬ್ರಹ್ಮಾಂಡದ ಸೃಷ್ಟಿಕರ್ತೆ ಎಂದು ನಂಬಲಾಗುತ್ತದೆ. ರಾಯಲ್​ ನೀಲಿ ಬಣ್ಣವು ಶ್ರೀಮಂತತೆಯ ಪ್ರತೀಕ. ಶಾಂತಿ, ಸ್ಥಿರತೆಯನ್ನು ಈ ಬಣ್ಣ ಹೊತ್ತು ತರುತ್ತದೆ ಎನ್ನುವುದು ನಂಬಿಕೆ. ರೋಮಾಂಚಕ ನೋಟವನ್ನು ತರುತ್ತದೆ. ಭಕ್ತರು ದಿನದ ಹಬ್ಬಗಳಿಗೆ ರಾಯಲ್-ನೀಲಿ ಸೀರೆಗಳು, ಲೆಹೆಂಗಾಗಳು, ಕುರ್ತಾಗಳು ಅಥವಾ ಪರಿಕರಗಳನ್ನು ಆಯ್ಕೆ ಮಾಡಬಹುದು.

  • ಅಕ್ಟೋಬರ್ 15

  • ನವರಾತ್ರಿ 2026 ದಿನ 5 — ಹಳದಿ

  • ದೇವತೆ: ಸ್ಕಂದಮಾತಾ

ನವರಾತ್ರಿ 2026 ಐದನೇ ದಿನವು ಭಕ್ತರು ಕಾರ್ತಿಕೇಯನ ತಾಯಿ ಸ್ಕಂದಮಾತೆಯನ್ನು ಆರಾಧಿಸುತ್ತಾರೆ. ತನ್ನ ಮಗನಾದ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯನನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವ ದೇವಿಯೇ ಸ್ಕಂದ ಮಾತೆ. ಹಳದಿ ಬಣ್ಣವು ಹೊಳಪು, ಆಶಾವಾದ ಮತ್ತು ಸಂತೋಷದೊಂದಿಗೆ ಸಂಬಂಧ ಹೊಂದಿದೆ. ಇದು ಹಬ್ಬದ ಉಡುಪುಗಳಿಗೆ ಜನಪ್ರಿಯ ಆಯ್ಕೆಯಾಗಿದೆ.

  • ಅಕ್ಟೋಬರ್ 16

  • ನವರಾತ್ರಿ 2026 ದಿನ 6 — ಹಸಿರು

  • ದೇವತೆ: ಕಾತ್ಯಾಯನಿ

ನವರಾತ್ರಿಯ ಆರನೇ ದಿನ ದುರ್ಗಾ ದೇವಿಯ ಪ್ರತೀಕವಾದ ಮಾತೆ ಕ್ಯಾತ್ಯಾಯಿನಿಯನ್ನು ಪೂಜಿಸಲಾಗುತ್ತದೆ. ಕತಾಯನ ಮಹರ್ಷಿಗೆ ಮಗಳಾಗಿ ಜನಿಸಿದ ಕಾರಣ ಕ್ಯಾತ್ಯಾಯಿನಿ ಎನ್ನುವ ಹೆಸರು ಬಂತು. ನಾಲ್ಕು ಭುಜ, ಸಿಂಹವಾಹಿನಿ, ಎಡ ಕೈಯಲ್ಲಿ ಕತ್ತಿ, ಕಮಲದ ಹೂ ಹಾಗೂ ಬಲಗೈ ಮುದ್ರೆ ಹಿಡಿದಿರುತ್ತಾರೆ. ಈ ದಿನ ಹಸಿರು ಬಣ್ಣ ತೊಟ್ಟು ದೇವಿಯನ್ನು ಆರಾಧಿಸಿ. ಹಸಿರು ಬಣ್ಣವು ಪ್ರಕೃತಿ, ಬೆಳವಣಿಗೆ ಮತ್ತು ತಾಜಾತನವನ್ನು ಪ್ರತಿನಿಧಿಸುತ್ತದೆ.

  • ಅಕ್ಟೋಬರ್ 17

  • ನವರಾತ್ರಿ 2026 ದಿನ 7 — ಬೂದು

  • ದೇವತೆ: ಕಾಳರಾತ್ರಿ

ಕಾಳರಾತ್ರಿ ದೇವಿಯು ನವದುರ್ಗೆಯರಲ್ಲಿ ಒಬ್ಬರಾಗಿ ಪೂಜಿಸಲಾಗುತ್ತದೆ. ದೇವಿಗೆ ಮೂರು ಕಣ್ಣು, ನಾಲ್ಕು ಕೈ ಹಾಗೂ ಕೈಯಲ್ಲಿ ಖಡ್, ಮತ್ತೊಂದು ಕೈಯಲ್ಲಿ ಕಬ್ಬಿಣದ ಆಯುಧವಿದೆ. ಕತ್ತೆಯು ದೇವಿಯ ವಾಹನ ಈ ದಿನ ಭಕ್ತರು ಬೂದು ಬಣ್ಣದ ಬಟ್ಟೆ ತೊಟ್ಟು ದೇವಿಗೆ ಆರಾಧಿಸುತ್ತಾರೆ. ದುಷ್ಟಶಕ್ತಿಗಳು, ಭೂತ-ಪ್ರೇತಗಳು ನಾಶ ಮಾಡುವ ಪ್ರತೀಕ ಎಂದು ನಂಬಲಾಗಿದೆ,.

ಅಕ್ಟೋಬರ್ 18

ನವರಾತ್ರಿ 2026 ದಿನ 8 —ನೇರಳೆ

ದೇವತೆ: ಮಹಾಗೌರಿ

ನವರಾತ್ರಿಯ ಎಂಟನೇ ದಿನವು ನವದುರ್ಗೆಯರ ಎಂಟನೇ ರೂಪವಾದ ಮಹಾಗೌರಿಯನ್ನು ಆರಾಧಿಸುತ್ತಾರೆ. ಬಿಳಿ ಎತ್ತು ಮಹಾಗೌರಿಯ ವಾಹನ. ರಾಜಮನೆತನ, ಭಕ್ತಿ, ಆಧ್ಯಾತ್ಮಿಕ ಆಳ, ಉದಾತ್ತತೆಯನ್ನು ಈ ನೇರಳೆ ಬಣ್ಣವು ಸೂಚಿಸುತ್ತದೆ.

  • ಅಕ್ಟೋಬರ್ 19

  • ನವರಾತ್ರಿ 2026 ದಿನ 9 — ನವಿಲು ಹಸಿರು

  • ದೇವತೆ: ಸಿದ್ಧಿದಾತ್ರಿ

ನವರಾತ್ರಿಯ ಒಂಬತ್ತನೇ ಮತ್ತು ಕೊನೆಯ ದಿನವನ್ನು ನವದುರ್ಗೆಯರ ಒಂಬತ್ತನೇ ರೂಪವಾದ ಸಿದ್ಧಿಧಾತ್ರಿಯ ಪೂಜೆಗೆ ಅರ್ಪಿಸಲಾಗಿದೆ. ಹೆಸರೇ ಸೂಚಿಸಿದಂತೆ ಶಕ್ತಿ ಮತ್ತು ಸಾಧನೆಯನ್ನು ನೀಡುವ ದೇವಿ ಎಂದು. ದೇವಿ ನಾಲ್ಕು ಕೈ ಹೊಂದಿದ್ದು, ಶಂಖ, ಚಕ್ರ, ಗದೆ ಮತ್ತು ತಾವರೆ ಹೂವನ್ನು ಹಿಡಿದಿದ್ದಾಳೆ. ಅಕ್ಟೋಬರ್ 20 ರಂದು ವಿಜಯದಶಮಿ/ದಸರಾವನ್ನು ಆಚರಿಸಲಾಗುತ್ತದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net