ಬೇಯಿಸಿದ ಮೊಟ್ಟೆಗಳನ್ನು ಎಷ್ಟೊತ್ತು ಇಟ್ಟಿರಬಹುದು? ತಪ್ಪದೇ ತಿಳಿಯಿರಿ ಈ ಉಪಯುಕ್ತ ಮಾಹಿತಿ | Boiled Eggs

ಮೊಟ್ಟೆ ಬೆಂದ ಎಷ್ಟು ಗಂಟೆಯೊಳಗೆ ಇದನ್ನು ಸೇವನೆ ಮಾಡುತ್ತಾರೆ ಎಂಬುದು ತುಂಬಾ ಮುಖ್ಯ. ಕಾರಣ, 2 ಗಂಟೆಗೂ ಹೆಚ್ಚು ಸಮಯವಾದರೆ, ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಸ್ಥಳವಾಗಬಹುದು. ಒಮ್ಮೆ ಬೇಯಿಸಿದ ನಂತರ, ಮೊಟ್ಟೆಗಳು ತಮ್ಮ ರಕ್ಷಣಾತ್ಮಕ ಹೊರ ಪದರವನ್ನು ಕಳೆದುಕೊಳ್ಳುತ್ತವೆ.
 Boiled Eggs
ಬೇಯಿಸಿದ ಮೊಟ್ಟೆಗಳನ್ನು ಎಷ್ಟೊತ್ತು ಇಟ್ಟಿರಬಹುದು? ತಪ್ಪದೇ ತಿಳಿಯಿರಿ ಈ ಉಪಯುಕ್ತ ಮಾಹಿತಿ | Boiled Eggs
Published on: 

Boiled Eggs: ಹೊಟ್ಟೆ ಮೊಟ್ಟೆಯಲ್ಲ. ಇಡೀ ದೇಹಕ್ಕೆ ಬೇಕಿದೆ ಮೊಟ್ಟೆಯಲ್ಲಿರುವ ಹೇರಳವಾದ ಪ್ರೋಟಿನ್​ ಅಂಶಗಳು. ಅದರಲ್ಲೂ, ಈ ಬೇಯಿಸಿದ ಮೊಟ್ಟೆಗಳು ಪೌಷ್ಟಿಕ ಮತ್ತು ಅತ್ಯುತ್ತಮ ಮೂಲ ಎನ್ನಲಾಗಿದೆ. ಆರೋಗ್ಯಕರ ಆಹಾರದ ಭಾಗವಾಗಿ ಬೇಯಿಸಿದ ಮೊಟ್ಟೆಗಳನ್ನು ಪ್ರತಿದಿನ ಸೇವಿಸುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಿದ್ದು, ತಿನ್ನುವ ವಿಷಯದಲ್ಲಿ ಹಲವರಿಗೆ ಗೊತ್ತಿಲ್ಲದ ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ ತಿಳಿಯಿರಿ.

ವಾಕಿಂಗ್​, ವ್ಯಾಯಾಮ, ಜಿಮ್​ ಎಂದು ಡಯಟ್​ ಆಹಾರಕ್ಕೆ ಬದ್ಧವಾಗಿರುವ ಅನೇಕ ಮಂದಿ, ದಿನನಿತ್ಯ ಒಂದರಿಂದ 5 ಬೇಯಿಸಿದ ಮೊಟ್ಟೆಗಳನ್ನು ತಿನ್ನುತ್ತಾರೆ. ಹೀಗೆ ಸೇವಿಸುವವರು, ಮೊಟ್ಟೆ ಬೆಂದ ಎಷ್ಟು ಗಂಟೆಯೊಳಗೆ ಇದನ್ನು ಸೇವನೆ ಮಾಡುತ್ತಾರೆ ಎಂಬುದು ತುಂಬಾ ಮುಖ್ಯ. ಕಾರಣ, 2 ಗಂಟೆಗೂ ಹೆಚ್ಚು ಸಮಯವಾದರೆ, ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಸ್ಥಳವಾಗಬಹುದು. ಒಮ್ಮೆ ಬೇಯಿಸಿದ ನಂತರ, ಮೊಟ್ಟೆಗಳು ತಮ್ಮ ರಕ್ಷಣಾತ್ಮಕ ಹೊರ ಪದರವನ್ನು ಕಳೆದುಕೊಳ್ಳುತ್ತವೆ.

ಹೀಗಾಗಿ, ಮೊಟ್ಟೆಗಳನ್ನು ಕುದಿಸಿದ ಬಳಿಕ ಹೆಚ್ಚು ಕಾಲ ಇರಿಸಿದರೆ, ಅವು ಕೆಡಲು ಪ್ರಾರಂಭಿಸುತ್ತದೆ. ಆಹಾರದಿಂದ ಹರಡುವ ರೋಗಗಳನ್ನು ತಡೆಗಟ್ಟಲು ಬೇಯಿಸಿದ ಮೊಟ್ಟೆಗಳನ್ನು ಹೇಗೆ ಬಳಸುವುದು ಮತ್ತು ಸಂಗ್ರಹಿಸುವುದು ಎಂಬುದನ್ನು ಮೊದಲು ಸರಿಯಾಗಿ ತಿಳಿಯಿರಿ. ಮೊಟ್ಟೆಯನ್ನು ಬೇಯಿಸಿದಾಗ, ಅದರ ನೈಸರ್ಗಿಕ ರಕ್ಷಣಾತ್ಮಕ ಹೊರಪೊರೆ ಸಿಪ್ಪೆಯಾಗಿ ಸುಲಿಯುತ್ತದೆ. ನೀವಿದನ್ನು ಗಮನಿಸಿದ್ದರೆ ನಿಮಗೆ ಸುಲಭವಾಗಿ ಅರ್ಥವಾಗಲಿದೆ.

ಹೊರಪೊರೆ ಸಿಪ್ಪೆಯಾಗಿ ಸುಲಿದಾಗ ಬ್ಯಾಕ್ಟೀರಿಗಳು ಮೊಟ್ಟೆಯನ್ನು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಬೇಯಿಸಿದ ಮೊಟ್ಟೆಗಳನ್ನು ಕೋಣೆಯ ಉಷ್ಣಾಂಶದಲ್ಲಿ ಇರಿಸಿದಾಗ, ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಇದು ಆಹಾರ ವಿಷದ ಅಪಾಯವನ್ನು ಹೆಚ್ಚಿಸುತ್ತದೆ ಅಥವಾ ಪುಡ್​ ಪಾಯ್ಸನಿಂಗ್ ಆಗಬಹುದು. ಬೇಯಿಸಿದ ಮೊಟ್ಟೆಗಳನ್ನು ಕೋಣೆಯ ಉಷ್ಣಾಂಶದಲ್ಲಿ ನಿರ್ದಿಷ್ಟ ಅವಧಿಗಿಂತ ಹೆಚ್ಚು ಕಾಲ ಇಡಬಾರದು. ಮೊಟ್ಟೆಗಳನ್ನು ಕುದಿಸಿದ ಎರಡು ಗಂಟೆಗಳ ಒಳಗೆ ತಿನ್ನುವುದು ಸೂಕ್ತ ಎನ್ನಲಾಗಿದೆ.

Also Read
ಇನ್ನೂ ಮುಗಿದಿಲ್ಲ... 17 ವರ್ಷದ ಕ್ರಿಕೆಟ್​ ಕರಿಯರ್​ಗೆ ಗುಡ್​ಬೈ ಹೇಳಿದ ಯುಜ್ವೇಂದ್ರ ಚಾಹಲ್! ಆದ್ರೆ, ಹೀಗಿದೆ ಅಸಲಿ​ ಟ್ವಿಸ್ಟ್ | ​Yuzvendra Chahal
 Boiled Eggs

ಸುತ್ತುವರಿದ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದರೆ, ಕುದಿಯುವ ಒಂದು ಗಂಟೆಯೊಳಗೆ ಮೊಟ್ಟೆಗಳನ್ನು ತಿನ್ನುವುದು ಸುರಕ್ಷಿತ ಎಂದು ವಿವರಿಸಲಾಗಿದೆ. ಮೊಟ್ಟೆಯನ್ನು ಸೇವಿಸುವ ಮೊದಲು ಸದಾ ಪರೀಕ್ಷಿಸಿ. ಬೇಯಿಸಿದ ಮೊಟ್ಟೆಯು ದುರ್ವಾಸನೆ, ಸಲ್ಫರಸ್ ಅಥವಾ ಇತರೆ ವಾಸನೆಯಿಂದ ಕೂಡಿದ್ದರೆ, ಅದನ್ನು ಅಲ್ಲಿಂದ ಅಲ್ಲಿಗೆ ಬಿಟ್ಟುಬಿಡಿ. ಹಾಳಾದ ಮೊಟ್ಟೆಗಳನ್ನು ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net