

ಪ್ಲಾಸ್ಟಿಕ್, ಸ್ಟೀಲ್, ಮರದ ಮಣೆ ತರಕಾರಿ ಕಟ್ ಮಾಡಲು ಯಾವುದು ಬೆಸ್ಟ್?
ಪ್ಲಾಸ್ಟಿಕ್ ಮಣೆ ಮೇಲೆ ತರಕಾರಿ, ಮಾಂಸ ಕತ್ತರಿಸುವುದರಿಂದ ಏನಾಗುತ್ತದೆ?
ಚಾಪಿಂಗ್ ಬೋರ್ಡ್ಗಳನ್ನು ಸ್ವಚ್ಛಗೊಳಿಸುವುದು ಹೇಗೆ?
Wooden vs Plastic Cutting Board: ಹಣ್ಣು, ತರಕಾರಿ, ಮಾಂಸ, ಸೊಪ್ಪು, ಹಸಿ ಚಿಕನ್, ಈರುಳ್ಳಿ, ಕೆಲವೊಮ್ಮೆ ಬ್ರೆಡ್ ಕತ್ತರಿಸಲು ನಾವು ಚಾಪಿಂಗ್ ಬೋರ್ಡ್ ಬಳಕೆ ಮಾಡುತ್ತೇವೆ. ಇತ್ತೇಚೆಗೆ ಆರೋಗ್ಯ ದೃಷ್ಟಿಯಿಂದಾಗಿ ಹಲವರು ಸ್ಟೀಲ್ ಮತ್ತು ಮರದ ಬೋರ್ಡ್ ಬಳಕೆ ಮಾಡುತ್ತಿದ್ದಾರೆ. ಇಂದಿಗೂ ಹಲವು ಕಡೆಯಲ್ಲಿ ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್ ಅನ್ನೇ ಬಳಕೆ ಮಾಡಲಾಗುತ್ತದೆ. ಆದರೆ, ಆರೋಗ್ಯದ ದೃಷ್ಟಿಯಿಂದ ಇದರ ಬಳಕೆ ಎಷ್ಟು ಸರಿ. ಪ್ಲಾಸ್ಟಿಕ್, ಮರ, ಸ್ಟೀಲ್ ಚಾಪಿಂಗ್ ಬೋರ್ಡ್ನಲ್ಲಿ ಸ್ವಚ್ಛವಾಗಿರೋದು ಯಾವುದು? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಕೆಲವರು ಚಾಪಿಂಗ್ ಬೋರ್ಡ್ ಬಳಕೆ ಮಾಡಿದ ನಂತರ ಅದನ್ನು ಕೇವಲ ನೀರಿನಲ್ಲಿ ತೊಳೆದು ಪಕ್ಕಕ್ಕೆ ಇಟ್ಟು ಬಿಡುತ್ತಾರೆ. ಆದರೆ, ಅದರಲ್ಲಿ ಬ್ಯಾಕ್ಟೀರಿಯಾ ಮಾತ್ರ ಹಾಗೆ ಉಳಿದುಕೊಂಡು ಬಿಡುತ್ತದೆ. ಇದನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇದ್ದಾಗ, ಅಥವಾ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾ ಅದರಲ್ಲೇ ಉಳಿದುಕೊಂಡಾಗ ಬೇರೆಯದ್ದಕ್ಕೂ ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಅಡುಗೆ ಮಾಡಿ ತಿನ್ನುವ ಮೊದಲು..ಸಮಸ್ಯೆ ಎಲ್ಲಿಂದ ಆರಂಭವಾಗುತ್ತದೆ ಎನ್ನುವ ಮೂಲವನ್ನು ಪತ್ತೆ ಹಚ್ಚುವುದು ಮುಖ್ಯ.
ರಟ್ಗರ್ಸ್ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಪ್ರಾಧ್ಯಾಪಕ ಡೊನಾಲ್ಡ್ ಶಾಫ್ನರ್ ಅವರ ಪ್ರಕಾರ ಪ್ಲಾಸ್ಟಿಕ್ ಮತ್ತು ಮರದ ಚಾಪಿಂಗ್ ಬೋರ್ಡ್ ಇವೆರಡೂ ಬಳಸಲು ಸುರಕ್ಷಿತವೇ ಹಾಗೂ ಇವರು ಮೇಲ್ಮೈಗಳ ನಡುವೆ ಬ್ಯಾಕ್ಟೀರಿಯಾಗಳು ಹೇಗೆ ಚಲಿಸುತ್ತವೆ ಎಂಬುದನ್ನು ವಿವರಿಸಿದ್ದಾರೆ.
ಮರದ ಬೋರ್ಡ್ ಮೇಲೆ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಆದರೆ, ಪ್ಲಾಸ್ಟಿಕ್ ಮೇಲೆ ತರಕಾರಿ ಕಟ್ ಮಾಡುವಾಗ ಆಗುವ ಗೀರುಗಳ ಸಂಧಿಯಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಹಾರ ಸುರಕ್ಷತಾ ಸಂಶೋಧಕ ಡೀನ್ ಕ್ಲೈವರ್ ಅವರು ನಡೆಸಿದ ಸಂಶೋಧನೆ ಮೂಲಕ ತಿಳಿದು ಬಂದಿದೆ. ಪ್ಲಾಸ್ಟಿಕ್ ಬೋರ್ಡ್ಗಳನ್ನು ಸ್ವಚ್ಛಗೊಳಿಸುವುದು ಸುಲಭ ಆದರೆ, ಇಲ್ಲಿ ಬ್ಯಾಕ್ಟೀರಿಯಾಗಳನ್ನು ಆಶ್ರಯ ಪಡೆದುಕೊಳ್ಳುತ್ತವೆ ಎಂದಿದ್ದಾರೆ.
ಮರ ಅಥವಾ ಪ್ಲಾಸ್ಟಿಕ್ ಬೋರ್ಡ್ ಬಳಕೆ ಮಾಡುವ ಬದಲಾಗಿ ಕಾಂಪೋಸಿಟ್ ಅಥವಾ ಬಿದಿರಿನ ಚಾಪಿಂಗ್ ಬೋರ್ಡ್ ಬಳಕೆ ಮಾಡುವುದು ಉತ್ತಮ ಆಯ್ಕೆ ಎನ್ನಲಾಗುತ್ತದೆ, ಮರದ ನಾರು ಮತ್ತು ರೆಸಿನ್ ಸೇರಿಸಿ ತಯಾರಿಸಲಾದ ಇದು ನೀರು ಮತ್ತು ವಾಸನೆಯನ್ನು ಹೀರಿಕೊಳ್ಳೋದಿಲ್ಲ. ಇದೊಂದು ನೈಸರ್ಗಿಕ ಆಯ್ಕೆಯಾಗಿದೆ.
ಸೊಪ್ಪು, ಮಾಂಸ ಸೇರಿದಂತೆ ಹಲವು ಪದಾರ್ಥ ಕತ್ತರಿಸುವ ಚಾಪಿಂಗ್ ಬೋರ್ಡ್ ಅನ್ನು ಬೆಚ್ಚಗಿನ, ಸಾಬೂನು ನೀರಿನಿಂದ ತೊಳೆದು ಬೋರ್ಡ್ ಅನ್ನು ಗಾಳಿಯಲ್ಲಿ ಒಣಗಲು ಬಿಡಿ.
ಮರದ ಬೋರ್ಡ್ಗಳನ್ನು ಕೈಯಿಂದಲೇ ತೊಳೆಯಬೇಕು, ಏಕೆಂದರೆ ಡಿಶ್ವಾಶರ್ ಅಥವಾ ಸಿಂಕ್ನಲ್ಲಿ ದೀರ್ಘಕಾಲ ನೆನೆಸುವುದರಿಂದ ಅದರ ಬಳಕೆ ಮಾಡುವುದು ಸರಿಯಲ್ಲ.
ಹಸಿ ಮಾಂಸ ಮತ್ತು ತರಕಾರಿ/ಹಣ್ಣುಗಳಿಗೆ ಪ್ರತ್ಯೇಕ ಬೋರ್ಡ್ಗಳನ್ನು ಇಟ್ಟುಕೊಳ್ಳುವುದು ಆಹಾರ ಸುರಕ್ಷತಾ ದೃಷ್ಟಿಯಿಂದ ಸರಿಯಾದ ಆಯ್ಕೆ.
ಅಡುಗೆಮನೆಯ ಕೌಂಟರ್ನಲ್ಲಿ ಸುಂದರವಾಗಿ ಕಾಣುತ್ತವೆಯಾದರೂ, ಪ್ಲಾಸ್ಟಿಕ್ಗಿಂತ ಮರಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿದೆ.
ರಾತ್ರಿಯ ಬೆಳ್ಳುಳ್ಳಿಯ ವಾಸನೆ ಬೋರ್ಡ್ನಲ್ಲಿ ಉಳಿದಿದ್ದರೆ, ಬೇಕಿಂಗ್ ಸೋಡಾ ಮತ್ತು ನೀರಿನ ಪೇಸ್ಟ್ನಿಂದ ಉಜ್ಜಿ, ತೊಳೆದು ಸಂಪೂರ್ಣವಾಗಿ ಒಣಗಲು ಬಿಡಿ
ಬೋರ್ಡ್ ಅನ್ನು ಯಾವಾಗ ಬದಲಾಯಿಸಬೇಕು ಎಂಬುದಕ್ಕೆ ಕಠಿಣ ನಿಯಮವಿಲ್ಲ. ನೋಡಲು ಸ್ವಚ್ಛಗೊಳಿಸುವುದು ಕಷ್ಟವಾದಾಗ ಬಿಸಾಡಿ ವಕ್ರವಾದ ಬೋರ್ಡ್ಗಳನ್ನು, ಆಹಾರದಲ್ಲಿ ಸೇರಬಹುದಾದ ಆಳವಾದ ಗೆರೆಗಳು ಅಥವಾ ಸಣ್ಣ ಸುರುಳಿಗಳನ್ನು ಹೊಂದಿರುವ ಪ್ಲಾಸ್ಟಿಕ್ ಬೋರ್ಡ್ಗಳನ್ನು, ಹಾಗೂ ಬಿರುಕು ಬಿಟ್ಟ ಅಥವಾ ಬೂಷ್ಟಿನ ಕಪ್ಪು ಕಲೆಗಳು ಕಾಣಿಸಿಕೊಂಡ ಮರದ ಬೋರ್ಡ್ಗಳನ್ನು ಇಟ್ಟುಕೊಳ್ಳಬೇಡಿ, (ಏಜೆನ್ಸೀಸ್).