

ಒಣ ಕೊಬ್ಬರಿ ನಿತ್ಯ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?.
ಮೂಳೆಗಳ ಬಲಗೊಳ್ಳುವಿಕೆ, ಮಲ ಬದ್ಧತೆ ನಿವಾರಣೆಗೆ ಸಹಕಾರಿ ಕೊಬ್ಬರಿ.
ಜಿಮ್, ವ್ಯಾಯಾಮ ಮಾಡುವವರು ನಿತ್ಯ ತಿಂದರೆ ಉತ್ತಮ ಫಲಿತಾಂಶ ಸಿಗೋದು ಗ್ಯಾರಂಟಿ
Health Benefits Of Eating Dried Coconut: ಚಳಿಗಾಲದಲ್ಲಿ ಸಾಮಾನ್ಯವಾಗಿ ಹಸಿವು ಹೆಚ್ಚಾಗುತ್ತದೆ. ಆ ಕಾರಣದಿಂದ ಕೆಲವರು ಆರೋಗ್ಯ ದೃಷ್ಟಿಯಿಂದ ಕರಿದ ತಿಂಡಿಯನ್ನು ಬಿಟ್ಟು, ಡ್ರೈ ಫ್ರೂಟ್ಸ್, ಹಣ್ಣು, ಕೊಬ್ಬರಿ ತಿನ್ನುತ್ತಾರೆ. ಇನ್ನೂ ಕೆಲವರು ಅಂಗಡಿಯಲ್ಲಿ ಸಿಗುವ ಕುರುಕಲು ತಿಂಡಿಯನ್ನು ತಂದು ತಿನ್ನುತ್ತಾರೆ. ಸಹಜವಾಗಿ ಅಂಗಡಿ ತಿನಿಸು ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಆದರೆ, ಕೊಬ್ಬರಿ ಕತೆ ಏನು?
ಹೌದು ಹಲವರಲ್ಲಿ ಕಾಡುವ ಪ್ರಶ್ನೆ ಎಂದರೆ ಕೊಬ್ಬರಿ ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತಾ? ಈ ಸಮಯದಲ್ಲಿ ಕೊಬ್ಬರಿ ತಿನ್ನುವುದು ಎಷ್ಟು ಸರಿ, ದೇಹದಕ್ಕೆ ಶಕ್ತಿ ನೀಡುತ್ತಾ ಎನ್ನುವುದು. ಇಂದು ಯಾರು ಕೊಬ್ಬರಿ ತಿನ್ನುವುದು ಬೆಸ್ಟ್, ಯಾರು ಮುನ್ನೆಚ್ಚರಿಗೆವಹಿಸಬೇಕು ಎನ್ನುವುದನ್ನು ವಿವರಿಸಲಾಗಿದೆ.
ಒಣಗಿದ ಕೊಬ್ಬರಿಯಲ್ಲಿ ಫೈಬರ್, ಪ್ರೊಟೀನ್, ಖನಿಜ ಇರುತ್ತದೆ. ಇದು ದೇಹಕ್ಕೆ ಹೆಚ್ಚು ಕೊಬ್ಬು ಒದಗಿಸುತ್ತದೆ. ನಿತ್ಯ ತಮ್ಮ ದೇಹವನ್ನು ವ್ಯಾಯಾಮ ಸೇರಿದಂತೆ ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರು ದೈನಂದಿನ ಆಹಾರದ ಜೊತೆಗೆ ಕೊಬ್ಬರಿ ತಿನ್ನಬಹುದು. ಆದರೆ, ನೆನಪಿಡಿ ತೆಂಗಿನ ಕಾಯಿ ಕ್ಯಾಲೋರಿ ಹೆಚ್ಚಿಸಲು ಕಾರಣವಾಗಬಹುದು.
ಒಣಗಿದ ತರಕಾರಿಯಲ್ಲಿ ಮ್ಯಾಂಗನೀಸ್, ತಾಮ್ರದಂತಹ ಖನಿಜವಿದೆ. ಇದು ಮೂಳೆ ಆರೋಗ್ಯ,ಸಂಯೋಜಕ ಅಂಶ ವೃದ್ಧಿಸಲು, ಚಯಾಪಚಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಮೂಳೆ ಬಲ ಪಡಿಸಲು ಕೊಬ್ಬರಿ ಮಾತ್ರವಲ್ಲ ಕ್ಯಾಲ್ಸಿಯಂ, ವಿಟಮಿನ್ ಡಿ, ವ್ಯಾಯಾಮ ಮಾಡುವ ಅಗತ್ಯ ಇರುತ್ತದೆ.
ಬದಲಾದ ಜೀವನ ಶೈಲಿ, ಗಂಟೆ ಗಟ್ಟಲೇ ಕಂಪ್ಯೂಟರ್ ಮುಂದೆ ಕೂರುವ ಸ್ಥಿತಿಯು ಜೀರ್ಣಕ್ರಿಯೆಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಅಲ್ಲದೇ, ಕರುಳಿನ ಚಲನೆಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಇದರಿಂದ ಮಲಬದ್ಧತೆ ಕಾಡುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಕೊಬ್ಬರಿ ಸೇವನೆ ಮಾಡಬಹುದು. ಇದು ಮಲವನ್ನು ಮೃದುಗೊಳಿಸಿ ಸರಾಗ ಮಲವಿಸರ್ಜನೆಗೆ ಸಹಾಯ ಮಾಡುತ್ತದೆ.
ಕೆಲವರಿಗೆ ಕೊಬ್ಬರಿ ಸೇವನೆಯು ಹೊಟ್ಟೆ ಉಬ್ಬರ ಹಾಗೂ ಜೀರ್ಣಕ್ರಿಯೆ ಸಮಸ್ಯೆಯನ್ನುಂಟು ಮಾಡಬಹುದು. ಇಂತಹ ಸಮಸ್ಯೆ ಕಂಡುಬರುವವರು ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಆನಂತರ ಕೊಬ್ಬರಿ ತಿನ್ನುವುದು ಮುಂದುವರೆಸಿ.
ರೋಗನಿರೋಧಕ ಶಕ್ತಿ ಕೊಬ್ಬರಿಯಲ್ಲಿ ಕೆಲವು ಖನಿಜ, ಉತ್ಕರ್ಷಣ ನಿರೋಧಕ ಸಂಯುಕ್ತವಿದೆ,. ಇದು ಚಯಾಪಚಯ ಕ್ರಿಯೆಗೆ ಸಹಕಾರಿ. ಒಣಗಿದ ತೆಂಗಿನಕಾಯಿ ಮಾತ್ರ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪರೋಕ್ಷವಾಗಿ ಉತ್ತೇಜಿಸುತ್ತದೆ. ಇದರೊಂದಿಗೆ ನಿಮ್ಮ ಸಮತೋಲಿತ ಆಹಾರ ಮುಖ್ಯವಾಗುತ್ತದೆ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.