

ಡಾರ್ಕ್ ಚಾಕೋಲೇಟ್ ಮಾತ್ರ ತಿನ್ನುವ ಬದಲು, ವೈದ್ಯರ ಸಲಹೆಯೊಂದಿಗೆ ವಿಭಿನ್ನ ಪೌಷ್ಟಿಕಾಂಶದೊಂದಿಗೆ ಸೇವಿಸಿ.
ಬ್ಲೂ ಬೆರಿ, ಚೀಸ್, ಬ್ಲಾಕ್ ಚಾಕೋಲೇಟ್ ಜೊತೆಗೆ ಡಾರ್ಕ್ ಚಾಕೋಲೇಟ್ ತಿನ್ನುವುದರಿಂದಾಗುವ ಪ್ರಯೋಜನವೇನು?.
ಡಾರ್ಕ್ ಚಾಕೋಲೇಟ್ ದೇಹಕ್ಕೆ ಆಂಟಿ ಆಕ್ಸಿಡೆಂಟ್ ಅನ್ನು ಒದಗಿಸುತ್ತದೆ.
Dark Chocolate Pair It With these food: ಇತ್ತೀಚೆಗೆ ಚಾಕೋಲೇಟ್ ಪ್ರಿಯರು..ಡೈರಿ ಮಿಲ್ಕ್, ಕಿಟ್ ಕ್ಯಾಟ್ ಬದಲಿಗೆ ಡಾರ್ಕ್ ಚಾಕೋಲೇಟ್ಗಳತ್ತ ಒಗ್ಗಿಕೊಳ್ಳುತ್ತಿದ್ದಾರೆ. ರೀಲ್ಸ್ಗಳ ಮೂಲಕ ಆರೋಗ್ಯದ ಮೇಲೆ ದಿನದಿಂದ ದಿನಕ್ಕೆ ಹೆಚ್ಚು ಮುತುವರ್ಜಿವಹಿಸಿಕೊಳ್ಳುತ್ತಿದ್ದಾರೆ. ಡಾರ್ಕ್ ಚಾಕ್ಲೇಟ್ ನೆಚ್ಚಿಕೊಳ್ಳುವವರಿಗೆ ಗುಡ್ನ್ಯೂಸ್ ಸಿಕ್ಕಿದೆ. ಅದೇನೆಂದರೆ ಕೆಲವೊಂದು ಆಹಾರದ ಜೊತೆ ತಿಂದರೆ, ಇದರ ಪರಿಣಾಮ ದೇಹದ ಮೇಲೆ ಉತ್ತಮವಾಗಿ ಬೀರಲಿದೆ ಎಂದು.
ಹೌದು, ವೈದ್ಯ ದೀಪಿಕ್ಷಾ ಜೈನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಡಾರ್ಕ್ ಚಾಕ್ಲೇಟ್ ಅನ್ನು ಕೇವಲ ಒಂಟಿಯಾಗಿ ತಿನ್ನುವ ಬದಲು, ವಿಭಿನ್ನ ಪೌಷ್ಟಿಕಾಂಶಗಳನ್ನು ನೀಡುವ ಇತರ ಆಹಾರಗಳೊಂದಿಗೆ ಸೇರಿಸಿ ತಿಂದರೆ ಇನ್ನೂ ಹೆಚ್ಚಿನ ಲಾಭವಿದೆ ಎನ್ನಲಾಗುತ್ತದೆ.
ದೀಪಿಕ್ಷಾ ಜೈನ್ ಅವರು ಹೇಳುವಂತೆ ಡಾರ್ಕ್ ಚಾಕೋಲೇಟ್ ಬ್ಲೂ ಬೆರಿಯೊಟ್ಟಿಗೆ ಸೇರಿಸಿ ತಿನ್ನಬಹುದು. ಇದು ಉರಿಯೂತ ನಿವಾರಕ ಗುಣಲಕ್ಷಣ, ಆಂಟಿಆಕ್ಸಿಡೆಂಟ್‌ಗಳು ಹೆಚ್ಚಾಗುವಂತೆ ಕೆಲಸ ಮಾಡುತ್ತದೆ. ಡಾರ್ಕ್ ಚಾಕೊಲೇಟ್ ಫ್ಲೇವನಾಯ್ಡ್‌ಗಳು ಇರುವ ಕಾರಣ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ಇದರಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚಾಗುವಂತೆ ಮಾಡುತ್ತದೆ. ಮೆದುಳಿನ ಆರೋಗ್ಯ ಬೆಂಬಲಿಸಲು ಸಹಕರಿಸುತ್ತದೆ.
ಹಾಲು ಅಥವಾ ಸಕ್ಕರೆ ಇಲ್ಲದ ಡಾರ್ಕ್ ಚಾಕೋಲೇಟ್ ಒಳ್ಳಯ ಕಾಂಬಿನೇಷನ್. ಬ್ಲ್ಯಾಕ್ ಕಾಫಿಯು ಆಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳನ್ನು ಹೊಂದಿದ್ದರೆ, ಡಾರ್ಕ್ ಚಾಕೊಲೇಟ್ ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ. ವೈಯಕ್ತಿಕವಾಗಿ ಈ ಕಾಂಬಿನೇಷನ್ ಹೆಚ್ಚು ಇಷ್ಟ ಎಂದು ಅವರು ಹೇಳಿಕೊಂಡಿದ್ದಾರೆ.
ರಾತ್ರಿ ಮಲಗುವಾಗ ಕೆಲವೊಮ್ಮೆ ಹಸಿವಾಗುತ್ತದೆ. ಹೀಗಾಗಿ ಆನ್ಲೈನ್ನಲ್ಲಿ ಅನಾರೋಗ್ಯಕರ ಆಹಾರ ಆರ್ಡರ್ ಮಾಡ್ತೇವೆ. ಆದರೆ ಅದರ ಬದಲಾಗಿ ಹೊಟ್ಟೆ ತುಂಬಿಸುವ ಸ್ನ್ಯಾಕ್ ಸೇವನೆ ಮಾಡಬಹುದು. ಬಾದಾಮಿ ಅಥವಾ ಪಿಸ್ತಾದೊಂದಿಗೆ ಡಾರ್ಕ್ ಚಾಕೋಲೇಟ್ ಸೇವನೆ ಮಾಡಬಹುದು. ಈ ಖನಿಜವು ಸ್ನಾಯು ಮತ್ತು ನರಗಳ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಿದ್ರೆ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಚೀಸ್ ಜೊತೆಗೆ ಡಾರ್ಕ್ ಚಾಕೋಲೇಟ್ ತಿನ್ನೋದು ಅಭಾಸ ಎನಿಸಬಹುದು. ಆದರೆ, ಈಗ ಅದೆಸ್ಟೋ ಮಂದಿ ಇಂತಹ ಕಾಂಬಿನೇಷನ್ಗೆ ಒಗ್ಗಿಕೊಂಡಿದ್ದಾರೆ. ಚೀಸ್ ದೇಹಕ್ಕೆ ಪ್ರೊಟೀನ್ ಒದಗಿಸಿದೆ, ಡಾರ್ಕ್ ಚಾಕೋಲೇಟ್ ಆಂಟಿಆಕ್ಸಿಡೆಂಟ್‌ಗಳು ಮತ್ತು ನಾರಿನಂಶವನ್ನು ಒದಗಿಸುತ್ತದೆ, (ಏಜೆನ್ಸೀಸ್).