ಬೇಳೆ ಬೇಯಿಸುವಾಗ ಕುಕ್ಕರ್‌ನಿಂದ ನೀರು ಹೊರಬರುತ್ತಿದೆಯೇ? ಈ ಸಮಸ್ಯೆ ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್..Cooking Dal

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಬೇಳೆ ಬೇಯಿಸಿ ಆಹಾರ ತಯಾರಿಸುವುದು ರೂಢಿಯಾಗಿರುತ್ತದೆ
  • ಅನೇಕ ಮನೆಯಲ್ಲಿ ಬೇಳೆ ಬೇಯಿಸುವುದು ದೊಡ್ಡ ತಲೆನೋವಾಗಿರುವುದು ಕಂಡು ಬರುತ್ತದೆ
  • ಕುಕ್ಕರ್​ನಲ್ಲಿ ಬೇಳೆಯನ್ನು ಬೇಯಿಸುವುವಾಗ ಅದರಿಂದ ಬರುವ ನೀರು ರುಚಿಯನ್ನು ಹಾಳು ಮಾಡುತ್ತದೆ
Cooking Dal: ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಬೇಳೆ ಬೇಯಿಸಿ ಆಹಾರ ತಯಾರಿಸುವುದು ರೂಢಿಯಾಗಿರುತ್ತದೆ. ಆದಾಗ್ಯೂ, ಅನೇಕ ಮನೆಯಲ್ಲಿ ಬೇಳೆ ಬೇಯಿಸುವುದು ದೊಡ್ಡ ತಲೆನೋವಾಗಿರುವುದು ಕಂಡು ಬರುತ್ತದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕೂಡ ಈ ಸಮಸ್ಯೆಗೆ ಒಳಗಾಗಿರುತ್ತಾಳೆ. ಕುಕ್ಕರ್​ನಲ್ಲಿ ಬೇಳೆಯನ್ನು ಬೇಯಿಸುವುವಾಗ ಅದರಿಂದ ಬರುವ ನೀರು ರುಚಿಯನ್ನು ಹಾಳು ಮಾಡುವುದಲ್ಲದೇ, ಸುಟ್ಟ ಗಾಯಳಿಗೂ ಕಾರಣವಾಗುತ್ತದೆ.
ಕುಕ್ಕರ್‌ನಿಂದ ಬೇಳೆ ಸೋರದಂತೆ ತಡೆಯಲು ನೀವು ಬಳಸಬಹುದಾದ ಕೆಲವು ಸರಳ ತಂತ್ರಗಳನ್ನು ಹುಡುಕುತ್ತಿದ್ದರೆ, ಸೆಲೆಬ್ರಿಟಿ ಬಾಣಸಿಗ ರಣವೀರ್ ಬ್ರಾರ್ ಅವರ ಸಲಹೆಗಳನ್ನು ತೆಗೆದುಕೊಳ್ಳಿ. ಇದು ಬೇಳೆ ಬೇಯಿಸಲು ತಲೆಕೆಡಿಸಿಕೊಳ್ಳುವವರಿಗೆ ಸಹಾಯವಾಗಬಹುದು.
ಮುಖ್ಯ ಹಂತಗಳೆಂದರೆ ನೀವು ಕುಕ್ಕರ್​ನಲ್ಲಿ ಬೇಳೆ ಬೇಯಿಸುವಾಗ ಮೊದಲು ವಿಶಲ್​ ಇರುವ ಜಾಗಕ್ಕೆ ಸ್ವಲ್ಪ ತುಪ್ಪ ಹಚ್ಚಿರಿ. ಹಾಗೆಯೇ ಬೇಳೆ ಬೇಯುತ್ತಿರುವಾಗ ಕುಕ್ಕರ್‌ನಲ್ಲಿರುವ ನೀರಿಗೆ ಸ್ವಲ್ಪ ತುಪ್ಪ ಸೇರಿಸುವುದರಿಂದ ಕುಕ್ಕರ್​ನಿಂದ ಬೇಳೆ ಹೊರಬರುವುದಿಲ್ಲ.
ಬೇಳೆ ಬೇಯಿಸುವ ಮೊದಲು ನೀರಿಗೆ ತುಪ್ಪ ಹಾಕುವುದರಿಂದ ಬೇಳೆ ನೀರು ನೊರೆ ಬರದಂತೆ ತಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಕುಕ್ಕರ್​ನಿಂದ ಬೇಳೆ ನೊರೆ ಹೊರಸೂಸಿ ಅಡುಗೆ ಮನೆ ಕೊಳಕಾಗದಂತೆ ತಡೆಯುತ್ತದೆ.
ಮೇಲೆ ತಿಳಿಸಿರುವ ವಿಧಾನಗಳನ್ನು ಬಳಸುತ್ತಿದ್ದರೂ ನಿಮ್ಮ ಕುಕ್ಕರ್​ನಿಂದ ನೀರು ಹೊರಬರುತ್ತಿದ್ದರೆ ನೀವು ಈ ವಿಚಾರದ ಬಗ್ಗೆ ಗಮನ ಹರಿಸುವುದು ಉತ್ತಮ. ಬೇಳೆ ಬೇಯಿಸುವಾಗ ಜನರು ಅಗತ್ಯಕ್ಕಿಂತ ಹೆಚ್ಚಾಗಿ ನೀರನ್ನು ಸೇರಿಸುತ್ತಾರೆ. ಇದರಿಂದ ಕುಕ್ಕರ್​ ವಿಶಲ್​ ಹಾಕುವಾಗ ಅದರಿಂದ ನೀರು ಹೊರಬರುತ್ತದೆ. ಹಾಗಾಗಿ ಅಳತೆಗೆ ತಕ್ಕಂತೆ ನೀರು ಹಾಕುವುದು ಉತ್ತಮವಾಗಿದೆ.
ನೀರನ್ನು ಹೊರತುಪಡಿಸಿ, ಕೆಲವೊಮ್ಮೆ ನೀವು ಕುಕ್ಕರ್‌ನ ಮುಚ್ಚಳವು ಸರಿಯಾಗಿ ಮುಚ್ಚುವುದಿಲ್ಲ, ಇದರಿಂದಾಗಿ ನೀರು ಹೊರಗೆ ಸೋರಿಕೆಯಾಗುತ್ತದೆ. ಮತ್ತೊಂದು ಕಾರಣವೆಂದರೆ, ಕುಕ್ಕರಿನಲ್ಲಿರುವ ರಬ್ಬರ್​ ಸವೆದು ಹೋಗಿರುತ್ತದೆ. ಇದರಿಂದಲೂ ಬೇಳೆ ನೀರು ಹೊರ ಚೆಲ್ಲುತ್ತಿರುತ್ತದೆ. ನಿಮ್ಮ ಕುಕ್ಕರ್​ ಏನಾದರೂ ಈ ಸಮಸ್ಯೆಯನ್ನು ಹೊಂದಿದ್ದರೆ, ಈ ಕೂಡಲೇ ಎಲ್ಲವನ್ನೂ ಸರಿಪಡಿಸಿಕೊಳ್ಳಿ. ನಂತರ ಬೇಳೆ ಬೇಯಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net