

ಬಾಯ್ಲ್ಡ್ ಎಗ್, ಹಾಫ್ ಬಾಯ್ಲ್ಡ್ ಆಮ್ಲೇಟ್ ತಿಂದ ಬೇಸರವಾಗಿದ್ಯಾ?
ಮನೆಯಲ್ಲಿಯೇ ಸಿಂಪಲ್ ಆಗಿ ಎಗ್ ಕರಿ ಮಾಡುವ ವಿಧಾನ
ಕಡಿಮೆ ಸಮಯದಲ್ಲಿ ರುಚಿಕರವಾದ ಮೊಟ್ಟೆ ಕರಿ ಮಾಡೋದು ಹೇಗೆ?
ನಿತ್ಯ ಬೆಂದ ಮೊಟ್ಟೆ , ಆಮ್ಲೇಟ್, ಹಾಫ್ ಬಾಯ್ಲ್ಡ್ ಮಾಡಿ ತಿಂದು ಬೇಸರವಾಗಿದ್ಯಾ?. ಹಾಗಿದ್ರೆ ಈ ದಿನ ನಿಮ್ಮ ಬ್ಯಾಚುಲರ್ ಲೈಫ್ನ ಬೋರಿಂಗ್ ಊಟಕ್ಕೆ ಬ್ರೇಕ್ ಹಾಕಿ...ರುಚಿಕರವಾದ ಎಗ್ ಕರಿ ತಯಾರಿಸಿ, ಹೊಟ್ಟೆ ತುಂಬಾ ತಿನ್ನಿ. ಇದು ದೋಸೆ, ರೊಟ್ಟಿ, ಅನ್ನ ಎಲ್ಲದಕ್ಕೂ ಸೈ. ಕಡಿಮೆ ಸಮಯದಲ್ಲಿ ಮೊಟ್ಟೆ ಕರಿ ಮಾಡುವ ರೆಸಿಪಿ ಇಲ್ಲಿದೆ.
ಮೊಟ್ಟೆ: ಬೇಯಿಸಿದ ನಾಲ್ಕು ಮೊಟ್ಟೆ
ಶುಂಠಿ-ಬೆಳ್ಳುಳ್ಳಿ; ರೆಡಿಮೇಡ್ 1 ಚಮಚ
ಹಸಿರು ಮೆಣಸಿನಕಾಯಿ: 2
ಪುದೀನಾ, ಕೊತ್ತಂಬರಿ: ಸ್ವಲ್ಪ
ಗೋಡಂಬಿ
ಒಗ್ಗರಣೆಗೆ; ಕತ್ತರಿಸಿದ ಈರುಳ್ಳಿ, ಟೊಮ್ಯಾಟೋ, ಕಡಲೇ ಹಿಟ್ಟು
ಮಸಾಲೆ ಪುಡಿ; 1/4 ಸ್ಪೂನ್ ಧನಿಯಾ, 1/4 ಸ್ಪೂನ್ ಗರಂ ಮಸಾಲ, ಜೀರಿಗೆ ಪುಡಿ, ಖಾರದ ಪುಡಿ ಒಂದು ಚಮಚ
ಎಣ್ಣೆ: 3-4ಟೇಬಲ್ ಸ್ಪೂನ್
ಉಪ್ಪು; ರುಚಿಗೆ ತಕ್ಕಷ್ಟು
ಅರಿಶಿನ: ಅರ್ಧ ಚಮಚ
ಮೊಟ್ಟೆಯನ್ನು ಕುದಿಸಿ, ಸಣ್ಣದಾಗಿ ಅದರ ಮೇಲೆ ಚಾಕುವಿನಿಂದ ಸ್ಲೈಸ್ ಆಗಿ ಕಟ್ ಮಾಡಿ ಅದನ್ನು ಎಣ್ಣೆ ಉಪ್ಪು, ಖಾರದ ಪುಡಿಹಾಕಿ ಫ್ರೈ ಮಾಡಿ ಪಕ್ಕಕ್ಕೆ ಇಡಿ. ಮಿಕ್ಸಿಗೆ 5-6 ಬೆಳ್ಳುಳ್ಳಿ, ಚೂರು ಶುಂಠಿ, 2 ಹಸಿರು ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ, ಗೋಡಂಬಿ ಹಾಗೂ ಒಂದು ಈರುಳ್ಳಿ ಹಾಕಿ, ರುಬ್ಬಿಟ್ಟುಕೊಳ್ಳಿ
ಈಗ ಬಾಂಡ್ಲಿಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ ಹಾಕಿ, ಈರುಳ್ಳಿ ಮತ್ತು ಟೊಮ್ಯಾಟೋ ಹಾಕಿ ಸ್ಮ್ಯಾಶ್ ಆಗುವವರೆಗೂ ಉರಿದುಕೊಳ್ಳಿ. ಆನಂತರ ಅರಿಶಿನ, ಧನಿಯಾ ಪುಡಿ, ಜೀರಿಗೆ, ಗರಂ ಮಸಾಲ, ಖಾರದ ಪುಡಿ ಹಾಕಿ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿಟ್ಟುಕೊಳ್ಳಿ.
ಕಡಿಮೆ ಬಿಸಿಯಲ್ಲಿ ಫ್ರೈ ಆಗುತ್ತಿರುವ ಈರುಳ್ಳಿ ಹಾಗೂ ಒಗ್ಗರಣ್ಣೆಗೆ ನೀವು ಮೊದಲೇ ಮಾಡಿಟ್ಟ ಗ್ರೇವಿ ಮಿಕ್ಸ್ ಮಾಡಿ ಮತ್ತೆ ಹಸಿ ವಾಸನೆ ಹೋಗುವವರೆಗೂ ಉರಿದುಕೊಳ್ಳಿ, ನಿಮಗೆ ದಪ್ಪ ಗ್ರೇವಿಯ ಅಗತ್ಯವಿದ್ದರೆ ಕೊಂಚ ನೀರನ್ನು ಸೇರಿಸಿಕೊಳ್ಳಿ. ಕೊನೆಯಲ್ಲಿ ಉಪ್ಪು ಎಷ್ಟು ಬೇಕು ಎನ್ನುವುದನ್ನು ನೋಡಿ ಹಾಕಿ. ಈಗ ಬೆಂದ ಗ್ರೇವಿಗೆ ಮೊಟ್ಟೆ ಹಾಕಿ ಕಡಲೆ ಹಿಟ್ಟು ಸಿಂಪಡಿಸಿ. ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ಈಗ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೇರಿಸಿ ಮತ್ತೆ ಅದನ್ನು ಬೇಯಲು ಬಿಡಿ. ಈಗ ನಿಮ್ಮ ಮೊಟ್ಟೆ ಕರಿ ತಿನ್ನಲು ರೆಡಿಯಾಗಿದೆ. ಬಿಸಿ ಚಪಾತಿ, ದೋಸೆ, ಅನ್ನ, ಮುದ್ದೆ ಜೊತೆ ಈ ಕರಿಯನ್ನು ತಿನ್ನಬಹುದು, (ಏಜೆನ್ಸೀಸ್).