ಶತ್ರುಗಳಿಂದ ತಪ್ಪಿಸಿಕೊಳ್ಳಲು ತೆವಳೋದಿಲ್ಲ, ಚಕ್ರದಂತೆ ಉರುಳುತ್ತೆ ಈ ಹಾವು; ಇಲ್ಲಿದೆ 'ರೋಲರ್​​ ಸ್ನೇಕ್'​ನ ರೋಚಕ ವಿಚಾರ.. Dwarf Reed Snake

ಶತ್ರುಗಳಿಂದ ತಪ್ಪಿಸಿಕೊಳ್ಳಲು ತೆವಳೋದಿಲ್ಲ, ಚಕ್ರದಂತೆ ಉರುಳುತ್ತೆ ಈ ಹಾವು; ಇಲ್ಲಿದೆ 'ರೋಲರ್​​ ಸ್ನೇಕ್'​ನ ರೋಚಕ ವಿಚಾರ.. Dwarf Reed Snake
Published on: 
  • ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಚಕ್ರದಂತೆ ಉರುಳುವ ರೋಲರ್​ ಸ್ನೇಕ್​ ಹಾವುಗಳು.

  • ಸುಮಾರು 2.29 ಮೀ. ಗಂಟೆಗೆ 9 ಮೈಲಿ ವೇಗದಲ್ಲಿ ದೇಹವನ್ನು ಚಕ್ರವಾಗಿಸಿಕೊಂಡು ಉರುಳುತ್ತದೆ.

  • ಸ್ಯೂಡೋರಾಬ್ಡಿಯನ್ ಲಾಂಗಿಸೆಪ್ಸ್ , ಡ್ವಾರ್ಫ್ ರೀಡ್ ಸ್ನೇಕ್ ಇದಕ್ಕಿರುವ ಮೂಲ ಹೆಸರು.

ಪಗ್ಡುಂಡಿ ಸಫಾರಿಸ್​​​​ ಸಂಸ್ಥೆಯು ತನ್ನ ವೆಬ್​ಸೈಟ್​​ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಈ ಪ್ರಪಂಚದಾದ್ಯಂತ 4 ಸಾವಿರಕ್ಕೂ ಹೆಚ್ಚು ಪ್ರಬೇಧ ಹಾವುಗಳಿವೆ. ಭಾರತದಲ್ಲಿ 300ರಿಂದ 500 ಪ್ರಭೇದದ ಹಾವುಗಳು ಇರಬಹುದು. ಸರ್ಪ್​​, ಹಾವು, ಸರ್ಪ, ಪಾಮು, ಸಾಪ್​​, ಪಾಂಬು ಹೀಗೆ ಭಾರತೀಯ ಭಾಷೆಗಳಲ್ಲಿ ನಾನಾ ರೀತಿಯಲ್ಲಿ ಕರೆಸಿಕೊಳ್ಳುವ ಇವುಗಳ ಹೆಸರು ನಮಗೆ ತಿಳಿದಿರುವುದು ಬೆರಳೆಣಿಕೆ ಮಾತ್ರ.

ಹೆಬ್ಬಾವು, ಕಾಳಿಂಗ, ಮಂಡಲ ಹಾವು, ಕೆರೆ ಹಾವು, ಅನಾಕೊಂಡ, ನಾಗರ ಹಾವು, ಹಸಿರು ಹಾವು ಇಷ್ಟು.. ಮಾತ್ರ. ಈ ಹಾವುಗಳು ಸಾಮಾನ್ಯವಾಗಿವಕ್ರರೇಖೆಯಲ್ಲಿ ಚಲಿಸುತ್ತವೆ ಎಂದು ಗೊತ್ತು..ಆದರೆ, ಸಾಮಾನ್ಯವಾಗಿ ಹಾವುಗಳು ತೆವಳುತ್ತಾ ಅಥವಾ ಸರ್ಪಲಾಕಾರದಲ್ಲಿ ಚಲಿಸುವುದನ್ನು ನಾವು ನೋಡಿರುತ್ತೇವೆ. ಆದರೆ, ಉರುಳುತ್ತಲೇ ಅತ್ಯಂತ ವೇಗವಾಗಿ ಚಲಿಸುವ ಅಪರೂಪದ ಹಾವಿದೆ ಎನ್ನುವುದು ನಿಮಗೆ ಗೊತ್ತಿದೆಯೇ?

ಎಲ್ಲೆಲ್ಲಿ ಇವುಗಳ ವಾಸಸ್ಥಾನ

ಹೌದು, ಆಗ್ನೇಯಾ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಡ್ವಾರ್ಫ್ ರೀಡ್ ಸ್ನೇಕ್ ಇದನ್ನು ಸ್ಯೂಡೋರಾಬ್ಡಿಯನ್ ಲಾಂಗಿಸೆಪ್ಸ್ ವೈಜ್ಞಾನಿಕವಾಗಿ ಕರೆಯಲಾಗುತ್ತದೆ. ಇದರ ಗಾತ್ರ 11 ರಿಂದ 28 ಸೆ.ಮೀಟರ್​ನಷ್ಟು ಚಿಕ್ಕದು. ಇದು ದಕ್ಷಿಣ ಥೈಲ್ಯಾಂಡ್​​, ಮಲೇಷ್ಯಾ, ಸಿಂಗಾಪುರ್​​, ಇಂಡೋನೇಷ್ಯಾದಲ್ಲಿ ಕಾಣಸಿಗುತ್ತದೆ. ಇವು ಕ್ಯಾಲಮಾರಿಯಾ ಕುಲಕ್ಕೆ ಸೇರಿದ್ದಾಗಿದೆ. ಇದನ್ನು ರೋಲರ್​ ಸ್ನೇಕ್​ ಎಂತಲೂ ಕರೆಯಲಾಗುತ್ತದೆ.

Also Read
ಮೀನಿನಂತೆ ಕಾಣುವ ಡಾಲ್ಫಿನ್​ ಮೀನಲ್ಲ; ಮನುಷ್ಯರೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗುವ ಇವು ಯಾವ ಪ್ರಭೇದಕ್ಕೆ ಸೇರಿದ್ದು?..Dolphin
ಶತ್ರುಗಳಿಂದ ತಪ್ಪಿಸಿಕೊಳ್ಳಲು ತೆವಳೋದಿಲ್ಲ, ಚಕ್ರದಂತೆ ಉರುಳುತ್ತೆ ಈ ಹಾವು; ಇಲ್ಲಿದೆ 'ರೋಲರ್​​ ಸ್ನೇಕ್'​ನ ರೋಚಕ ವಿಚಾರ.. Dwarf Reed Snake

ತಂಗುವ ಸ್ಥಳ ಯಾವುದು?

ಡ್ವಾರ್ಫ್ ರೀಡ್ ಹಾವು ಸಂಪೂರ್ಣ ವಿಷಕಾರಿ ಹಾವಲ್ಲ. ಇದರ ಮೈ ಬಣ್ಣ ಕಂದು ಬಣ್ಣದಿಂದ ಕೂಡಿರುತ್ತದೆ. ಕಾಮನ ಬಿಲ್ಲಿನಂತಹ ಶೈನಿಂಗ್​ ಚರ್ಮವನ್ನು ಇವು ಹೊಂದಿರುತ್ತದೆ. ಹೊಟ್ಟೆಯು ರೇಷ್ಮೆ ಬಣ್ಣ ಅಥವಾ ಬಿಳಿ ಬಣ್ಣದಲ್ಲಿರುತ್ತದೆ. ಇವು ಮನುಷ್ಯರಿಗೆ ಹಾನಿ ಮಾಡೋದಿಲ್ಲ. ಇದು ಹೆಚ್ಚಾಗಿ ಕಾಡಿನಲ್ಲಿ ಬಿದ್ದ ಎಲೆಗಳ ರಾಶಿಯಲ್ಲಿ ಅಥವಾ ಮರದ ದಿಮ್ಮಿಗಳ ಅಡಿಯಲ್ಲಿ ತಂಗುತ್ತವೆ.

ಅಪಾಯ ಎನಿಸಿದಾಗ ಹೀಗೆ ಮಾಡುತ್ವೆ

ಡ್ವಾರ್ಫ್​ ರೀಡ್​ ಹಾವು ಬೇರೆ ಬೇರೆ ಪ್ರಾಣಿಗಳಿಂದ ಅಥವಾ ತಮಗೆ ಅಪಾಯ ಒದಗಿ ಬಂದಿದೆ ಎಂದು ಮಾಹಿತಿ ಸಿಕ್ಕುತ್ತಲೇ ದೇಹವನ್ನು ಚಕ್ರವಾಗಿ ಮಾಡಿಕೊಂಡು ಸುತ್ತುಕೊಂಡು ಸ್ಥಳದಿಂದ ಪರಾರಿಯಾಗುತ್ತದೆ. ಸುಮಾರು 2.29 ಮೀ. ಗಂಟೆಗೆ 9 ಮೈಲಿ ವೇಗದಲ್ಲಿ ದೇಹವನ್ನು ಚಕ್ರವಾಗಿಸಿಕೊಂಡು ಸಂಚರಿಸುತ್ತದೆ ಎನ್ನಲಾಗಿದೆ.

ಸಾಮಾನ್ಯ ಹಾವುಗಳ ಬಗ್ಗೆ

ಹಾವುಗಳು ಸರೀಸೃಪ ವರ್ಗಕ್ಕೆ ಸೇರುವ ಕಶೇರುಕ ಪ್ರಾಣಿಗಳು. ಇವುಗಳ ದೃಷ್ಟಿ ಮಂದ ಆದರೆ, ನಾಲಿಗೆಯು ಎಲ್ಲವನ್ನು ಗ್ರಹಿಸುತ್ತದೆ. ಇವುಗಳಿಗೆ ಕಾಲು, ಎದೆಮೂಳೆ ಅಥವಾ ಮೂತ್ರ ಕೋಶ ಇಲ್ಲ. ಹಾವುಗಳು ಬೆನ್ನು ಮೂಳೆ ಮಾತ್ರ ಹೊಂದಿರುತ್ತದೆ. ಸಾಮಾನ್ಯವಾಗಿ ಹಾವುಗಳು ಇಲಿ, ಪಕ್ಷಿ ಹಾಗೂ ಕಪ್ಪೆಗಳನ್ನು ತಿನ್ನುತ್ತದೆ. ಹೀಗಾಗಿ ರೈತರ ಮಿತ್ರ ಎಂತಲೂ ಇವುಗಳನ್ನು ಕರೆಯಲಾಗುತ್ತದೆ. (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net