ದಕ್ಷಿಣ ಭಾರತೀಯರು ಸಕ್ಕರೆ ಖಾಯಿಲೆಗೆ ಹೆಚ್ಚಾಗಿ ತುತ್ತಾಗುತ್ತಾರೆ! ವೈದ್ಯರು ಹೇಳಿದ್ದೇನು ಗೊತ್ತಾ?..Diabetes

diabetes
diabetes
Published on
ನವದೆಹಲಿ: ಉತ್ತರ ಭಾರತದವರನ್ನು ಹೋಲಿಸಿದರೆ ದಕ್ಷಿಣ ಭಾರತೀಯರಲ್ಲಿ ಸಕ್ಕರೆ ಖಾಯಿಲೆ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿದೆ. ( Diabetes ) ಜನರ ತೂಕ ಮತ್ತು ಎತ್ತರ ಸಮವಾಗಿದ್ದರೂ ಸಹ ಏಕೆ ದಕ್ಷಿಣ ಭಾರತೀಯರಲ್ಲಿಯೇ ಅಧಿಕವಾಗಿ ಸಕ್ಕರೆ ಖಾಯಿಲೆ ( Diabetes ) ಪತ್ತೆಯಾಗುತ್ತಿದೆ? ಎಂಬ ಪ್ರಶ್ನೆಗೆ ಡಾ. ಸ್ವಾತಿ ಭಟ್ ತಮ್ಮ ಇನ್​ಸ್ಟಾಗ್ರಾಮ್​​​ ಖಾತೆಯಲ್ಲಿ ಕಾರಣ ಮತ್ತು ಪರಿಹಾರವನ್ನುಹಂಚಿಕೊಂಡಿದ್ದಾರೆ.
ಇಲ್ಲಿ ತೂಕ ಮತ್ತು ಎತ್ತರ ಎರಡೂ ಈ ಪ್ರದೇಶದ ಜನರಲ್ಲಿ ಸಮಾನವಾಗಿ ಇದ್ದರೂ ಸಹ ಇಬ್ಬರ ಆಹಾರ ಪದ್ದತಿಯಲ್ಲಿ ವ್ಯಾತ್ಯಾಸ ಇದೆ. ಇದೇ ಕಾರಣದಿಂದಾಗಿ ದಕ್ಷಿಣ ಭಾರತೀಯರು ಅಧಿಕಾವಾಗಿ ಸಕ್ಕರೆ ಖಾಯಿಲೆಗೆ ತ್ತುತ್ತಾಗುತ್ತಿದ್ದಾರೆ ಎಂದು ಡಾ. ಸ್ವಾತಿ ಭಟ್ ತಿಳಿಸುತ್ತಾರೆ.
ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರಕ್ರಮವು ಪಾಲಿಶ್ ಮಾಡಿದ ಬಿಳಿ ಅಕ್ಕಿ ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದೆ, ಮತ್ತು ಅನೇಕರು ದಿನಕ್ಕೆ ಮೂರು ಬಾರಿ ಕಾರ್ಬೋಹೈಡ್ರೇಟ್-ಪ್ರಬಲ ಊಟವನ್ನು ತಿನ್ನುತ್ತಾರೆ, ಗ್ಲೈಸೆಮಿಯಾವನ್ನು ಸಮತೋಲನಗೊಳಿಸಲು ಕಡಿಮೆ ಪ್ರೋಟೀನ್‌ಗಳು ಅಥವಾ ಫೈಬರ್‌ಗಳು ಇದು ಕಾಲಾನಂತರದಲ್ಲಿ ಅಸ್ಥಿರ ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಕಾರಣವಾಗಬಹುದು ಎಂದು ಅವರು ಸೂಚಿಸುತ್ತಾರೆ.
ದಕ್ಷಿಣ ಭಾರತದವರು ಮೂರು ಹೊತ್ತು ಸೇವಿಸುವ ಆಹಾರದಲ್ಲಿ ಪ್ರೋಟಿನ್ ಅಂಶ ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವ ಪ್ರಮಾಣ ಇರುತ್ತದೆ. ಆದರೆ ಕಾರ್ಬೋಹೈಡ್ರೇಟ್ ದಕ್ಷಿಣ ಭಾರತೀಯರ ರಕ್ತದಲ್ಲಿ ಹೇರಳವಾಗಿದೆ.
ದಕ್ಷಿಣ ಭಾರತೀಯರು ಹೆಚ್ಚಾಗಿ ಅನ್ನ, ಪರೋಟಾ ಇವುಗಳನ್ನೇ ಪ್ರಮುಖ ಖಾಧ್ಯವಾಗಿ ಸ್ವೀಕರಿಸುವುದರಿಂದ ಕೊಬ್ಬಿನಾಂಶವು ಹೊಟ್ಟೆಯ ಭಾಗದಲ್ಲಿ ಶೇಕರಣೆಗೊಂಡು ಗ್ಲೂಕೋಸ್ ಅಂಶವನ್ನು ಅಧಿಕವಾಗಿ ಉತ್ಪಾದನೆ ಮಾಡುವುದರಿಂದ ದಕ್ಷಿಣ ಭಾರತೀಯರಲ್ಲಿ ಸಕ್ಕರೆ ಖಾಯಿಲೆ ಅಪಾಯ ಅಧಿಕವಾಗಿತ್ತದೆ.
ದಕ್ಷಿಣ ಭಾರತೀಯರು ನೋಡಲು ಆರೋಗ್ಯವಂತರಾಗಿ ಕಂಡರು ಸಹ ಅವರಲ್ಲಿ ಸಕ್ಕರೆ ಖಾಯಿಲೆ ಸಂಭತಿತ ರೋಗಗಳಿಂದ ಅವರು ಬಳಲುತ್ತಿರುತ್ತಾರೆ. ಇದನ್ನು ಸರಿಪಡಿಸಿಕೊಳ್ಳಲು ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಸಾಕು ಎನ್ನುತ್ತಾರೆ ಡಾ. ಸ್ವಾತಿ.
ಆಹಾರದಲ್ಲಿ ಯಾವ ಬದಲಾವಣೆ ಮಾಡಿಕೊಳ್ಳಬೇಕು?
ಮೊದಲು ಸೇವಿಸುವ ಆಹಾರವು ಶುಚಿಯಾಗಿದ್ದು, ಸಾಂಪ್ರದಾಯಿಕ ಆಹಾರವಾದ ಅನ್ನ ಮತ್ತು ಅದರ ಉತ್ಪನ್ನಗಳ ಬದಲು ಸಲಾಡ್, ರೊಟ್ಟಿ, ದಾಲ್, ಮೊಸರು ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಹಾಗೆಯೇ ಪ್ರೊಟೀನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಮೊಟ್ಟೆ, ಮೀನು ಮತ್ತು ಮಾಂಸಗಳನ್ನು ಸೇವಿಸಬೇಕು, ಸಸ್ಯಹಾರಿಗಳಾಗಿದ್ದರೆ ಪನ್ನೀರ್ ಮತ್ತು ಟೋಪುಗಳನ್ನು ಸೇವಿಸಬಹುದು ಎಂದು ಸಲಹೆ ನೀಡಿದ್ದಾರೆ.
ವ್ಯಾಯಾಮಗಳನ್ನು ಊಟದ ಜೊತೆಗೆ ಸಾಕಷ್ಟು ಪ್ರೋಟೀನ್ ಸೇವಿಸುವುದು ಮುಖ್ಯವಾಗುತ್ತದೆ. ಇದು ಸಾಂಪ್ರದಾಯಿಕ ಆಹಾರಗಳನ್ನು ತ್ಯಜಿಸುವುದರ ಬಗ್ಗೆ ಅಲ್ಲ, ಆದರೆ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿಡಲು ಮತ್ತು ನಿಮ್ಮ ಆರೋಗ್ಯವನ್ನು ರಕ್ಷಿಸಲು ಸಮತೋಲನಗೊಳಿಸುವುದು ಮುಖ್ಯವಾಗಿರುತ್ತದೆ.
ಮೊಸರು, ದಾಲ್, ಸಾಂಬಾರ್, ಪನೀರ್ ಅಥವಾ ಮೊಟ್ಟೆಗಳಂತಹ ಪ್ರೋಟೀನ್ ಮೂಲದೊಂದಿಗೆ ಊಟವನ್ನು ಪ್ರಾರಂಭಿಸಬೇಕು. ಸಲಾಡ್ ಅಥವಾ ಸಾಂಬಾರ್ ರೂಪದಲ್ಲಿ ತರಕಾರಿಗಳನ್ನು ಸೇರಿಸುವುದರಿಂದ ಫೈಬರ್ ಹೆಚ್ಚಾಗುತ್ತದೆ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಕಾರ್ಬೋಹೈಡ್ರೇಟ್‌ಗಳನ್ನು ಹೆಚ್ಚು ಜಾಗೃತವಾಗಿ ಭಾಗಗಳಾಗಿ ವಿಂಗಡಿಸುವುದು ಸಹಾಯಕವಾಗಿದೆ. ದೋಸೆ ಅಥವಾ ಇಡ್ಲಿಯಂತಹ ಹುದುಗಿಸಿದ ಆಹಾರಗಳನ್ನು ತಿನ್ನುವುದನ್ನು ಮುಂದುವರಿಸಬಹುದು, ಆದರೆ ಪ್ರೋಟೀನ್-ಭರಿತ ಚಟ್ನಿಗಳು, ಪೋಡಿಗಳು ಅಥವಾ ಬೇಳೆ ಆಧಾರಿತ ಭಕ್ಷ್ಯಗಳೊಂದಿಗೆ ಅವುಗಳನ್ನು ಜೋಡಿಸುವುದರಿಂದ ತ್ವರಿತ ಸಕ್ಕರೆ ಏರಿಕೆಯನ್ನು ತಡೆಯುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net