More

    VIDEO| ಚಿನಾರ್​ ಕಾರ್ಪ್ಸ್​ನ 49 ನೇ ಕಾರ್ಪ್ಸ್ ಕಮಾಂಡರ್ ಆಗಿ ಲೆಫ್ಟಿನೆಂಟ್ ಜನರಲ್, ಕನ್ನಡಿಗ ಬಿ.ಎಸ್. ರಾಜು ಅಧಿಕಾರ ಸ್ವೀಕಾರ

    ಬೆಂಗಳೂರು: ಲೆಫ್ಟಿನೆಂಟ್ ಜನರಲ್, ಕನ್ನಡಿಗ ಬಿ.ಎಸ್. ರಾಜು ಅವರು ಚಿನಾರ್​ ಕಾರ್ಪ್ಸ್ ನ 49 ನೇ ಕಾರ್ಪ್ಸ್ ಕಮಾಂಡರ್ ಆಗಿ ಮಾರ್ಚ್​ 1ರಂದು ಅಧಿಕಾರ ಸ್ವೀಕರಿಸಿದರು.

    ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್​. ದಿಲ್ಲೊನ್​ ಅವರು ಅಧಿಕಾರ ದಂಡ ಹಸ್ತಾಂತರಿಸಿದರು.

    ಲೆಫ್ಟಿನೆಂಟ್ ಜನರಲ್, ಬಿ.ಎಸ್. ರಾಜು ಅವರು, ಸಮರ್ಪಣಾ ಭಾವ ಮತ್ತು ಪರಿಶ್ರಮದಿಂದ ಕೆಲಸ ಮಾಡುವುದನ್ನು ಮುಂದುವರಿಸಲು ಕರೆ ನೀಡಿದರು. ಇದೇ ವೇಳೆ ಹುತಾತ್ಮ ಯೋಧರಿಗೆ ನಮನಗಳನ್ನು ಸಲ್ಲಿಸಿದರು.

    ವಿಜಯಪುರದ ಸೈನಿಕ್ ಶಾಲೆ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾದ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಅವರು ಡಿಸೆಂಬರ್ 1984ರಲ್ಲಿ ಸೇವೆಗೆ ಸೇರಿದರು. 36 ವರ್ಷಗಳ ಸೇನಾ ಅನುಭವ ಹೊಂದಿದ್ದಾರೆ. ಈ ಅವಧಿಯಲ್ಲಿ ಅವರು ವಿವಿಧ ಸಿಬ್ಬಂದಿ ಮತ್ತು ನೇಮಕಾತಿ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

    ಯುನೈಟೆಡ್ ಕಿಂಗ್‌ಡಮ್​​ನ ವೆಲ್ಲಿಂಗ್ಟನ್ ಮತ್ತು ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಕಾಲೇಜಿನ ಪದವೀಧರ, ಲೆಫ್ಟಿನೆಂಟ್ ಜನರಲ್ ರಾಜು ಅವರು, ಸೇನಾ ಪ್ರಧಾನ ಕಚೇರಿಯಲ್ಲಿ ಪ್ರಮುಖ ನೇಮಕಾತಿಗಳು ಮತ್ತು ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನಲ್ಲಿ ಬೋಧನಾ ನೇಮಕಗಳನ್ನು ಮಾಡಿದ್ದಾರೆ. ಅಲ್ಲದೆ ವೆಲ್ಲಿಂಗ್ಟನ್ ಮತ್ತು ವಿದೇಶದಲ್ಲಿ ಭಾರತೀಯ ಸೇನಾ ತರಬೇತಿ ತಂಡವನ್ನು ಮುನ್ನಡೆಸಿದ ಅನುಭವವಿದೆ.

    ಮತ್ತೊಮ್ಮೆ ಕಾಶ್ಮೀರದಲ್ಲಿ ಸೇವೆ ಸಲ್ಲಿಸಲು ದೊರೆತ ಅವಕಾಶಕ್ಕೆ ಸಂತಸ ವ್ಯಕ್ತಪಡಿಸಿದ ಜನರಲ್ ರಾಜು ಅವರು, ಕಣಿವೆಯ ಇತಿಹಾಸದಲ್ಲಿ ಇದು ಒಂದು ಮಹತ್ವದ ಸಮಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಾವು ಶಾಂತಿ ಮತ್ತು ಸ್ಥಿರತೆಯ ಯುಗಕ್ಕೆ ಕಾಲಿಡುತ್ತೇವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

    ಜನರಲ್ ರಾಜು ಅವರ ಜನ್ಮ ಸ್ಥಳ ದಾವಣಗೆರೆಯಾಗಿದ್ದು, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಗ್ಗವಳ್ಳಿ ಗ್ರಾಮದವರು. ಮಡದಿ ಕರ್ನಾಕದವರೇ ಆದ ಶಕುಂತಲಾ ರಾಜು. ಮಗ ಸಿಂಗಾಪುರದ ನ್ಯಾಷನಲ್​ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರ್​ ಪದವಿ ಪಡೆದಿದ್ದು, ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಮಗಳು ಕೂಡ ಇಂಜಿನಿಯರ್​ ಪದವೀಧರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts