More

    ಹಳ್ಳಿಗಳ ಸಮಸ್ಯೆ ನಿವಾರಣೆಗೆ ಯುವಕರು ಶ್ರಮಿಸಲಿ

    ಕಲಘಟಗಿ: ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಅರಿತು ಅವುಗಳ ನಿವಾರಣೆಗೆ ಯುವ ಸಮೂಹ ಮುಂದಾಗಬೇಕು ಎಂದು ಕೆಎಂಎಫ್ ನಿರ್ದೇಶಕಿ ಗೀತಾ ಮರಲಿಂಗಣ್ಣವರ ಹೇಳಿದರು.

    ತಾಲೂಕಿನ ಬಗಡಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಿಶ್ರಿಕೋಟಿ ಶಿವಪ್ಪಣ್ಣ ಜಿಗಳೂರ ಪಪೂ ಕಾಲೇಜ್ ಏರ್ಪಡಿಸಿದ್ದ ಎನ್​ಎಸ್​ಎಸ್ ವಿಶೇಷ ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮತನಾಡಿದರು.

    ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂಧಿಜಿ ಅವರ ಗ್ರಾಮ ಸ್ವರಾಜ್ಯದ ಕನಸಿನ ಕೂಸು. ಶಿಬಿರಾರ್ಥಿಗಳು ಶಿಬಿರದ ಸದುಪಯೋಗ ಪಡೆದು, ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

    ಹಿರಿಯ ಶಿಕ್ಷಕ ಎಂ.ಎ. ಶಿರಗುಪ್ಪಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರೀಯ ಭಾವೈಕ್ಯ, ಸಹಾಯ, ಸಹಕಾರ ಮನೋಭಾವ ಬೆಳೆಸುತ್ತದೆ ಎಂದರು.

    ಕಸಾಪ ತಾಲೂಕು ಅಧ್ಯಕ್ಷ ಈಶ್ವರ ಜವಳಿ ಮಾತನಾಡಿ, ಗ್ರಾಮೀಣ ಭಾರತದ ನವನಿರ್ವಣ ಯುವಕರಿಂದ ಸಾಧ್ಯವಿದೆ. ವ್ಯಸನಮುಕ್ತ ಸಮಾಜ ನಿರ್ವನ ಮಾಡಿ, ಎಲ್ಲರೂ ಸುಂದ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

    ಸಹಕಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಾನಂದ ಹುರಕಡ್ಲಿ ಮಾತನಾಡಿ, ಎನ್​ಎಸ್​ಎಸ್ ಶಿಬಿರದ ಶಿಬಿರದ ಯಶಸ್ಸಿಗೆ ಗ್ರಾಮಸ್ಥರು ಸಹಕರಿಸಬೇಕು ಎಂದರು.

    ಪ್ರಾಚಾರ್ಯ ಸುರೇಶ ಮರಲಿಂಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಸದಸ್ಯ ನಿಂಗಪ್ಪ ದಾಸಪ್ಪನವರ, ಕಾಳಪ್ಪ ಬಡಿಗೇರ, ಈರಯ್ಯ ಹಿರೇಮಠ, ಬಸಲಿಂಗಪ್ಪ ದೊಡ್ಡಬಸಣ್ಣವರ, ಎಸ್.ಪಿ. ಹನಮಣ್ಣವರ, ಪ್ರವೀಣ ನಿಚ್ಚಳದ, ಪ್ರಕಾಶ ತುಕ್ಕಪ್ಪನವರ, ಕಲ್ಲಪ್ಪ ಶಿರಕೋಳ ಇತರರಿದ್ದರು. ಶಿಬಿರಾಧಿಕಾರಿ ಪಿ.ಟಿ. ಲಮಾಣಿ, ರೇಣುಕಾ ಹೊನ್ನಮ್ಮನವರ, ಸವಿತಾ ಕಾರ್ಯಕ್ರಮ ನಿರ್ವಹಿಸಿದರು.

    ಶಿಬಿರದಲ್ಲಿಂದು: ಶಿಬಿರದಲ್ಲಿ ಅ. 15ರಂದು ಬೆಳಗ್ಗೆ 7ಗಂಟೆಗೆ ಬಸಲಿಂಗಪ್ಪ ದೊಡ್ಡಬಸಣ್ಣವರ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 10.30ಕ್ಕೆ ಕಲಘಟಗಿಯ ಸುನೀಲಕುಮಾರ ಕಮ್ಮಾರ ಅವರಿಂದ ಹಳೆಯ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ. ಮದ್ಯಾಹ್ನ 3.30ಕ್ಕೆ ಮಕ್ಕಳ ಹಕ್ಕುಗಳ ಕುರಿತು ಬಿ.ವೈ. ಪಾಟೀಲ ಅವರಿಂದ ಉಪನ್ಯಾಸ. ಸಂಜೆ 6ಗಂಟೆಗೆ ಕರ್ನಾಟಕ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಎಂ.ಆರ್. ತೋಟಗಂಟಿ ಅವರಿಂದ ಜಾನಪದ ಸಂಜೆ ಕಾರ್ಯಕ್ರಮ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts