More

    ಸರ್ಕಾರದ ಸವಲತ್ತುಗಳು ಸದುಪಯೋಗವಾಗಲಿ

    ಎನ್.ಆರ್.ಪುರ: ಸರ್ಕಾರ ಹೈನುಗಾರಿಕೆಗೆ ಉತ್ತೇಜನ ನೀಡಲು ಅನೇಕ ಸವಲತ್ತುಗಳನ್ನು ನೀಡುತ್ತಿದ್ದು, ರೈತರು ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
    ಶಾಸಕರ ಕಚೇರಿಯಲ್ಲಿ ಪಶು ಇಲಾಖೆಯಿಂದ ಜಾನುವಾರುಗಳಿಗೆ ನೀಡಿದ ರಬ್ಬರ್ ನೆಲಹಾಸು ವಿತರಿಸಿ ಮಾತನಾಡಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎನ್.ಆರ್.ಪುರದಲ್ಲಿ 20 ಹಾಗೂ ಖಾಂಡ್ಯ ಭಾಗದ 5 ರೈತರು ಸೇರಿ ತಾಲೂಕಿನಲ್ಲಿ ಒಟ್ಟು 25 ರಬ್ಬರ್ ನೆಲ ಹಾಸುಗಳನ್ನು ನೀಡಲಾಗಿದೆ. ಒಬ್ಬ ಲಾನುಭವಿಗೆ ತಲಾ ಎರಡು ರಬ್ಬರ್ ನೆಲಹಾಸುಗಳನ್ನು ನೀಡಲಾಗಿದೆ. ಒಂದಕ್ಕೆ 2799 ರೂ.ಗಳನ್ನು ಮಾತ್ರ ಲಾನುಭವಿಗಳು ಪಾವತಿಸಬೇಕು. ಇನ್ನೊಂದು ನೆಲಹಾಸನ್ನು ಉಚಿತವಾಗಿ ನೀಡಲಾಗಿದೆ. ಈಗಾಗಲೇ ಕೊಪ್ಪ, ಶೃಂಗೇರಿ ತಾಲೂಕುಗಳಲ್ಲಿ ವಿತರಣೆಯಾಗಿದೆ. ಈ ರಬ್ಬರ್ ನೆಲ ಹಾಸುಗಳು ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
    ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಸದಸ್ಯ ಸೈಯದ್‌ವಸೀಂ, ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ನರೇಂದ್ರ, ಬಿನು, ಮುಖಂಡರಾದ ಈಚಿಕೆರೆ ಸುಂದರೇಶ್, ಎಸ್.ಡಿ.ರಾಜೇಂದ್ರ, ಶ್ರೀಧರಪಾನಿ, ಶಿವಣ್ಣ, ಪಶುವೈದ್ಯ ಡಾ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts