More

    ಯೋಜನೆ ಸದುಪಯೋಗವಾಗಲಿ

    ನರಗುಂದ: ರೈತರ ಹಿತ ಕಾಪಾಡುವ ಸಲುವಾಗಿ ಸರ್ಕಾರದಿಂದ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ತಾಲೂಕಿನ ಅರ್ಹ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಖಾನಾಪೂರ ಗ್ರಾಮದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಮಹಾತ್ಮ ಗಾಂಧಿ ಸಮುದಾಯ ಭವನ ಕಟ್ಟಡ ನಿರ್ವಣ, 25.25 ಲಕ್ಷ ರೂ. ವೆಚ್ಚದ ಜಲಜೀವನ ಮಿಷನ್ ಯೋಜನೆ ಕಾಮಗಾರಿಗೆ ಭೂಮಿಪೂಜೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆರಂಭಿಸಲಾದ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಜಲಜೀವನ ಮಿಷನ್ ಯೋಜನೆ ಜಾರಿಗೆ ತಂದಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯಡಿ ಖಾನಾಪೂರದ ಎಲ್ಲ 191 ಮನೆಗಳಿಗೆ ಪೈಪ್​ಲೈನ್ ಹಾಗೂ ಉಚಿತವಾಗಿ ನಲ್ಲಿಗಳ ಜೋಡಣೆ ಮಾಡಲಾಗುವುದು ಎಂದರು.

    ಉಮೇಶಗೌಡ ಪಾಟೀಲ, ಕೆ.ಜಿ. ಸಾಲಿಮಠ, ಎಂ.ಎಚ್. ತಿಮ್ಮನಗೌಡ್ರ, ಪ್ರೇಮಾ ತಿಮ್ಮನಗೌಡ್ರ, ಮಂಜು ಮೆಣಸಗಿ, ವಿ.ಎಸ್. ಸಾಲಿಮಠ, ಅನಿಲ ಧರಿಯಣ್ಣವರ, ಗುರಪ್ಪ ಆದೆಪ್ಪನವರ, ಬಿ.ಎಸ್. ಪಾಟೀಲ, ಬಾಬಣ್ಣ ಹಿರೇಹೊಳಿ, ಟಿ.ಎಚ್. ಮದಗುಣಕಿ, ಚಂದ್ರು ದಂಡಿನ, ರೇಣವ್ವ ಮದಗುಣಕಿ, ವಿಜಯಲಕ್ಷ್ಮೀ ಪಂಚಗಾಂವಿ, ಲಾಲಸಾಬ್ ಅರಗಂಜಿ, ಎಂ.ಎಸ್. ಪಾಟೀಲ, ಎಸ್.ಬಿ. ಕರಿಗೌಡ್ರ, ಪ್ರಕಾಶ ತಿರಕನಗೌಡ್ರ, ಎಸ್.ಎನ್. ಕಗಧಾಳ, ಎಸ್.ವಿ. ಪಾಟೀಲ, ವೆಂಕನಗೌಡ ಮಲ್ಲನಗೌಡ್ರ, ಎಂ.ಡಿ. ತೂಗುಣಸಿ, ಮಲ್ಲಪ್ಪ ಮೇಟಿ, ಶಂಕರಗೌಡ ಯಲ್ಲಪ್ಪಗೌಡ್ರ, ಅನಿಲಕುಮಾರ ಜಗತ್ತಾಪ, ಬಿ.ಎಸ್. ಪೊಲೀಸ್​ಪಾಟೀಲ, ಎಂ.ಬಿ. ಕಗಧಾಳ ಇತರರು ಉಪಸ್ಥಿತರಿದ್ದರು.

    10 ಕಡೆ ಖರೀದಿ ಕೇಂದ್ರ

    ಹಿಂಗಾರು ಹಂಗಾಮಿನ ರೈತರ ಪ್ರತಿ ಕ್ವಿಂಟಾಲ್ ಎಫ್​ಎಕ್ಯೂ ಗುಣಮಟ್ಟದ ಕಡಲೆಯನ್ನು 5100 ರೂಪಾಯಿ ಬೆಂಬಲ ಬೆಲೆ ನೀಡಿ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದಿಂದ ಖರೀದಿಸಲಾಗುತ್ತದೆ. ಇದಕ್ಕಾಗಿ ತಾಲೂಕಿನ ಚಿಕ್ಕನರಗುಂದ, ಸುರಕೋಡ, ಶಿರೋಳ, ಸಂಕಧಾಳ, ಜಗಾಪೂರ, ಕೊಣ್ಣೂರ ಮತ್ತು ನರಗುಂದದ ಎಪಿಎಂಸಿ ಪ್ರಾಂಗಣ ಸೇರಿ ಒಟ್ಟು 10 ಕಡೆ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಖಾನಾಪೂರ ಗ್ರಾಮದಲ್ಲಿ ಬೆಂಬಲಬೆಲೆ ಖರೀದಿ ಕೇಂದ್ರ ಪ್ರಾರಂಭಿಸುವುದರಿಂದ ಈ ಭಾಗದ ಹದಲಿ, ಗಂಗಾಪೂರ, ರಡ್ಡೇರನಾಗನೂರ ಗ್ರಾಮಗಳ ಸಾವಿರಾರು ರೈತರಿಗೆ ಅನುಕೂಲವಾಗಲಿದೆ. ಕೇಂದ್ರದಲ್ಲಿ ಕಡಲೆ ಮಾರಲು ಬಯಸುವ ರೈತರು ಯಾವುದೇ ಕಾರಣಕ್ಕೂ ತಮ್ಮ ಪಹಣಿ ಪತ್ರಿಕೆಗಳನ್ನು ವ್ಯಾಪಾರಸ್ಥರ ಕೈಗೆ ನೀಡಬಾರದು. ರೈತರನ್ನು ಹೊರತುಪಡಿಸಿ ಮಧ್ಯವರ್ತಿಗಳು ಅಥವಾ ವರ್ತಕರು ಖರೀದಿ ಕೇಂದ್ರದಲ್ಲಿ ಕಡಲೆ ಮಾರಾಟಕ್ಕೆ ಮುಂದಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts