More

    ಜಯಿಸಬಲ್ಲೆ ಎಂಬ ಆತ್ಮವಿಶ್ವಾಸ ಎಲ್ಲರಲ್ಲಿರಲಿ; ವಿದ್ಯಾರ್ಥಿಗಳಿಗೆ ಸಂಡೂರು ಶಾಸಕ ಈ.ತುಕಾರಾಮ್ ಸಲಹೆ; ಪುಸ್ತಕ ವಿತರಣೆ ಕಾರ್ಯಕ್ರಮ

    ಸಂಡೂರು: ಎಲ್ಲ ರಂಗದಲ್ಲೂ ಜಯಿಸಬಲ್ಲೆ ಎಂಬ ಆತ್ಮವಿಶ್ವಾಸ ಗಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಶಾಸಕ ಈ.ತುಕಾರಾಮ್ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಪುಸ್ತಕ ವಿತರಣೆ ಹಾಗೂ ವಿವಿಧ ಉಪಕರಣಗಳ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.

    ಪದವಿ ನಂತರ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಸಿದ್ಧರಾಗಿ ಪಿಜಿ ಮಾಡಲು ಪೂರ್ವತಯಾರಿಗೆ ಬೇಕಾದ ಕೋಚಿಂಗ್ ಪಡೆದುಕೊಳ್ಳಬೇಕು. ಅದಕ್ಕೆ ಕಾಲೇಜಿನ ಉಪನ್ಯಾಸಕರು ಮಾರ್ಗದರ್ಶನ ನೀಡಬೇಕು. ಅಗತ್ಯ ಸಹಕಾರ ಒದಗಿಸಲಾಗುವುದು ಎಂದರು. ಸಂಡೂರು ಪದವಿ ಕಾಲೇಜು ಬಳ್ಳಾರಿ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿರುವಂತೆ ಮಾಡಬೇಕಿದೆ. ವಿದ್ಯಾರ್ಥಿನಿಯರು ಉನ್ನತ ವ್ಯಾಸಂಗಕ್ಕೆ ಮುಂದಾಗಬೇಕು. ಬೇಗ ಮದುವೆ ಮಾಡುವುದು ಬೇಡ ಎಂದು ಪಾಲಕರಿಗೆ ತಿಳಿಹೇಳಬೇಕು. ನಾನು ಕೂಡ ಪದವಿ ಶಿಕ್ಷಣ ಪಡೆದ ನಂತರ ಕೆಲಸಕ್ಕೆ ಸೇರಿದ್ದರೆ ಈ ಹಂತಕ್ಕೆ ಬರಲು ಆಗುತ್ತಿರಲಿಲ್ಲ. ಹಾಗಾಗಿ ಉನ್ನತ ಶಿಕ್ಷಣ ಪಡೆಯಿರಿ ಎಂದರು.

    ಯಾರೂ ಕೂಡ ಹಳ್ಳಿಗಳಲ್ಲಿ ಆರೋಗ್ಯ ಸಮಸ್ಯೆಯಿಂದ ತೊಂದರೆ ಅನುಭವಿಸಬಾರದು ಎಂಬ ಕಾರಣಕ್ಕೆ ಪ್ರತಿ ಹಳ್ಳಿಗೂ ಆಂಬುಲೆನ್ಸ್‌ಗಳನ್ನು ಕೊಡಲಾಗಿದೆ. ತಾಲೂಕಿನಲ್ಲಿ ತಿಂಗಳಲ್ಲಿ ಲಕ್ಷಾಂತರ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕಾಗಿ ವಷರ್ಕ್ಕೆ 3 ಕೋಟಿ 40 ಲಕ್ಷ ರೂ. ವ್ಯಯಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳ ಪಟ್ಟಿ ಮಾಡಿ, ಅವುಗಳನ್ನು ಇನ್ನೂ 15 ದಿನಗಳಲ್ಲೇ ಒದಗಿಸುವ ಕೆಲಸ ಮಾಡುವೆ ಎಂದರು.
    ಎನ್‌ಎಂಡಿಸಿ ಕಂಪನಿಯ ಪ್ರೊಡಕ್ಷನ್ ವಿಭಾಗದ ಜ.ಮ್ಯಾನೇಜರ್ ರಾಮಯ್ಯನ್ ಮಾತನಾಡಿ, ಶಾಸಕರು ತಮ್ಮ ಕಂಪನಿಯೊಂದಿಗೆ ಚರ್ಚಿಸಿ ಅನೇಕ ಸಮಾಜಮುಖಿ ಕೆಲಸಗಳಿಗೆ ಒತ್ತಡ ಹಾಕುತ್ತಾರೆ. ಅದರಲ್ಲೂ ಮಹಿಳಾ ಸಬಲೀಕರಣ ಹಾಗೂ ಬಾಲಕಿಯರ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಾರೆ ಎಂದರು.

    ವಿದ್ಯಾರ್ಥಿಗಳಾದ ದೊಡ್ಡಪ್ಪ, ಭುವನೇಶ್ವರಿ, ಶಶಿಕಲಾ ಮಾತನಾಡಿ, ಕಾಲೇಜಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳ ಕುರಿತು ಶಾಸಕರಿಗೆ ಮನವರಿಕೆ ಮಾಡಿದರು. ಪ್ರಾಚಾರ್ಯ ಡಾ.ಹುಚ್ಚೂಸಾಬ್, ಶಂಕರೇಗೌಡ ಮಾತನಾಡಿದರು. ಉಪನ್ಯಾಸಕಿ ಡಾ.ರೇಖಾ ನಿರ್ವಹಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts