More

  ಗುತ್ತಿಗೆದಾರರು ಗುಣಮಟ್ಟ ಕಾಪಾಡಲಿ

  ಚಿಕ್ಕೋಡಿ: ಕಾಮಗಾರಿ ಗುಣಮಟ್ಟದಿಂದ ನಿರ್ಮಿಸುವ ಮೂಲಕ ಗುತ್ತಿಗೆದಾರರು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

  ತಾಲೂಕಿನ ಖಜಗೌಡನಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 13 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ, 10 ಲಕ್ಷ ರೂ. ವೆಚ್ಚದಲ್ಲಿ ಮಜಲಟ್ಟಿಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಕಟ್ಟಡದ ನವೀಕರಣ ಹಾಗೂ 17 ಲಕ್ಷ ರೂ.ವೆಚ್ಚದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

  ಸದಾಶಿವ ಘೋರ್ಪಡೆ, ವಿಜಯ ಕೋಠಿವಾಲೆ, ಸುಭಾಷ ಕರೋಲಿ, ರಾಜು ನಾಯಿಕ, ಮಾರುತಿ ಖೋತ, ವಿಠ್ಠಲ ಬಾರಕೇರ, ಪಾಪು ಚೌಗಲಾ, ಬಸವರಾಜ ರಾಜಗೌಡರ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ವೀಣಾ ಮನಗೂಳಿ, ಮುಖ್ಯ ಶಿಕ್ಷಕ ಪ್ರಮೋದ ಪೋತದಾರ, ವೈದ್ಯಾಧಿಕಾರಿ ಡಾ.ರೋಹಿಣಿ ಕಿಣಗೆ, ಭೀಮು ತಳವಾರ, ಶಿವಗೌಡ ಪಾಟೀಲ, ಸುರೇಶ ಕೇಸ್ತಿ, ಅಭಿಯಂತ ಜೆ.ಎಸ್. ಕಾಮಕರ, ನಿಹಾಲ ಮಾಳಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts