More

    ಕೊಪ್ಪ ತಾಲೂಕಿನಲ್ಲಿ ಬಿಜೆಪಿ ಮೇಲುಗೈ

    ಕೊಪ್ಪ: ತಾಲೂಕಿನ 21 ಗ್ರಾಪಂಗಳ 191 ಸ್ಥಾನಗಳ ಪೈಕಿ 114ರಲ್ಲಿ ಬಿಜೆಪಿ ಬೆಂಬಲಿತರು, 73ರಲ್ಲಿ ಕಾಂಗ್ರೆಸ್ ಬೆಂಬಲಿತರು, ಇತರರು ನಾಲ್ಕು ಸ್ಥಾನಗಳಲ್ಲಿ ಗೆಲುವು ಕಂಡಿದ್ದಾರೆ. ಈ ಮೂಲಕ ಬಿಜೆಪಿ ಬೆಂಬಲಿತರು 14 ಗ್ರಾಪಂ, ಕಾಂಗ್ರೆಸ್ 4 ಗ್ರಾಪಂ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ. 2 ಗ್ರಾಪಂನಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ ಹಾಗೂ ಒಂದು ಗ್ರಾಪಂನಲ್ಲಿ ಅತಂತ್ರ ಸ್ಥಿತಿ ನಿರ್ವಣವಾಗಿದೆ.

    ಹಿರೇಕೊಡಿಗೆ, ಭಂಡಿಗಡಿ, ಹರಿಹರಪುರ, ಕೊಪ್ಪ ಗ್ರಾಮಾಂತರ, ಶಾನುವಳ್ಳಿ, ಅಸಗೋಡು, ಬಿಂತ್ರವಳ್ಳಿ, ಹರಂದೂರು, ಮರಿತೊಟ್ಟಲು, ನರಸೀಪುರ, ತುಳುವಿನಕೊಪ್ಪ, ಜಯಪುರ, ಅತ್ತಿಕೊಡಿಗೆ, ನುಗ್ಗಿ ಗ್ರಾಪಂಗಳಲ್ಲಿ ಸರಳ ಬಹುಮತ ಪಡೆದ ಬಿಜೆಪಿ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.

    ಕಾಂಗ್ರೆಸ್ ಬೆಂಬಲಿತರು ಕೆಸವೆ, ನಿಲುವಾಗಿಲು, ಗುಡ್ಡೇತೋಟ, ಅಗಳಗಂಡಿ ಗ್ರಾಪಂಗಳಲ್ಲಿ ಸರಳ ಬಹುಮತ ಪಡೆದಿದ್ದು ಗದ್ದುಗೆ ಏರಲಿದ್ದಾರೆ. ಹಿರೇಗದ್ದೆ ಹಾಗೂ ಚಾವಲ್ಮನೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರು ಸಮಬಲ ಸಾಧಿಸಿದ್ದಾರೆ. ಭುವನಕೋಟೆ ಗ್ರಾಪಂನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ತಲಾ ಮೂರು ಸ್ಥಾನಗಳಲ್ಲಿ, ಓರ್ವ ಬಿಎಸ್​ಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಎಸ್​ಪಿ ಅಭ್ಯರ್ಥಿ ಯಾವ ಪಕ್ಷದ ಕೈಹಿಡಿಯುತ್ತಾರೋ ಅವರು ಗದ್ದುಗೆ ಹಿಡಿಯಲಿದ್ದಾರೆ.

    ಗುಡ್ಡೇತೋಟ, ಅಗಳಗಂಡಿ, ನಿಲುವಾಗಿಲಿನಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಹರಿಹರಪುರ, ಅಸಗೋಡು, ಮರಿತೊಟ್ಟಲು, ಜಯಪುರ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಈ ಹಿಂದೆ ಹಿರೇಗದ್ದೆಯಲ್ಲಿ ಕಾಂಗ್ರೆಸ್ ಹಾಗೂ ಚಾವಲ್ಮನೆಯಲ್ಲಿ ಬಿಜೆಪಿ ಅಧಿಕಾರ ಹೊಂದಿತ್ತು. ಈ ಬಾರಿ ಎರಡೂ ಪಕ್ಷ ಸಮಬಲ ಸಾಧಿಸಿವೆ. ಬಿಜೆಪಿ ಅಧಿಕಾರದಲ್ಲಿ ಇದ್ದ ಭುವನಕೋಟೆಯಲ್ಲಿ ಅತಂತ್ರ ಸ್ಥಿತಿ ಉಂಟಾಗಿದೆ. ಕಾಂಗ್ರೆಸ್ ಶಾಸಕರಿದ್ದರೂ ಗ್ರಾಪಂನಲ್ಲಿ ಪಕ್ಷದ ವರ್ಚಸ್ಸು ಕ್ಷೀಣಿಸಿರುವುದು ಪಕ್ಷದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಾಗಿದೆ.

    ಹೆಚ್ಚು ಅಂತರದ ಗೆಲುವು: ಹಿರೇಕೊಡಿಗೆ ಗ್ರಾಪಂನ ಬೊಳಾಪುರ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತನಾಗಿ ಸ್ಪರ್ಧಿಸಿದ್ದ ತ್ರಿಪುರೇಂದ್ರ (647) ಅವರು, ಪ್ರತಿಸ್ಪರ್ಧಿ ಗಿರೀಶ್ (190) ಅವರನ್ನು 457 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ. ತಾಲೂಕಿನಲ್ಲೇ ಅತಿ ಹೆಚ್ಚು ಅಂತರದ ಗೆಲುವು ದಾಖಲಿಸಿದ ಅಭ್ಯರ್ಥಿ ಇವರಾಗಿದ್ದಾರೆ.

    ಸತತ 5ನೇ ಬಾರಿ ಗೆಲುವು: ಹರಂದೂರು ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲದಿಂದ ಸ್ಪರ್ಧೆ ಮಾಡಿದ್ದ ಎಂ.ಸಿ.ಅಶೋಕ್ ಸತತ ಐದನೇ ಬಾರಿ ಆಯ್ಕೆಯಾಗುವ ಮೂಲಕ ಗ್ರಾಪಂಗೆ ಮತ್ತೆ ಪ್ರವೇಶ ಮಾಡಿದ್ದಾರೆ.

    ಕ್ಲೀನ್ ಸ್ವೀಪ್: 7 ಸದಸ್ಯ ಬಲದ ತುಳುವಿನಕೊಪ್ಪ ಗ್ರಾಪಂ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲಿತರು ಖಾತೆ ತೆರೆಯುವಲ್ಲಿ ವಿಫಲರಾಗಿದ್ದಾರೆ.

    ಲಾಟರಿ ಅದೃಷ್ಟ: ಗುಡ್ಡೆತೋಟ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಹಾಲಪ್ಪ ಹಾಗೂ ಕಾಂಗ್ರೆಸ್ ಬೆಂಬಲಿತ ಪ್ರಶಾಂತ್ ತಲಾ 122 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು. ನಂತರ ಚುನಾವಣಾಧಿಕಾರಿ ಲಾಟರಿ ಎತ್ತಿದ್ದಾಗ ಪ್ರಶಾಂತ್ ಅವರಿಗೆ ಅದೃಷ್ಟ ಒಲಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts