More

    ಸರ್ಕಾರಿ ಶಾಲೆಯೆಂಬ ಕೀಳರಿಮೆ ಬಿಡಿ

    ಎನ್.ಆರ್.ಪುರ: ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಪ್ರತಿಯೊಬ್ಬರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು ಎಂದು ಪಿಎಸ್‌ಐ ಬಿ.ಎಸ್.ನಿರಂಜನ್ ಗೌಡ ತಿಳಿಸಿದರು.

    ಶುಕ್ರವಾರ ಶೆಟ್ಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಶೋಷಿತ ವರ್ಗದಿಂದ ಬಂದ ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆದು ದೇಶದ ಸಂವಿಧಾನ ಬರೆದರು. ಅವರ ಆಶಯದಂತೆ ನಾವು ಬದುಕಬೇಕು ಎಂದರು.
    ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ಶಾಲಾ ವಾರ್ಷಿಕೋತ್ಸವ ಮಕ್ಕಳಿಗೆ ಹಬ್ಬವಿದ್ದಂತೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಲಿದೆ ಎಂದು ಹೇಳಿದರು.
    ರಾಜ್ಯ ಮಟ್ಟದ ಅನಿತಕೌಲ್ ಪ್ರಶಸ್ತಿ ಪುರಸ್ಕೃತ ಶೆಟ್ಟಿಕೊಪ್ಪ ಶಾಲೆ ಶಿಕ್ಷಕಿ ರಾಧಾಮಣಿ, ದಾನಿಗಳಾದ ಇಂದಿರಮ್ಮ, ಎನ್.ಎಂ.ಕಾಂತರಾಜು, ಪಿಎಸ್‌ಐ ನಿರಂಜನ್‌ಗೌಡ, ರಾಗಮಯೂರಿ ಅಕಾಡೆಮಿ ಮುಖ್ಯಸ್ಥೆ ಅಂಕಿತಾ ಪ್ರಜ್ವಲ್, ಗಾಂಧಿ ಗ್ರಾಮದ ಕೆ.ಎನ್.ನಾಗರಾಜು, ವಾಣಿ ನರೇಂದ್ರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
    ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಗದೀಶ್, ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ಎ.ಬಿ.ಮಂಜುನಾಥ್, ಪೂರ್ಣಿಮಾ, ಲಿಲ್ಲಿ, ಚಂದ್ರಶೇಖರ್, ಅಶ್ವಿನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿ ಸಿ.ತಿಮ್ಮೇಶ್, ಗೀತಾ, ಮಂಜಪ್ಪ, ಸಿಆರ್‌ಪಿ ತಿಮ್ಮಮ್ಮ, ಮುಖ್ಯಶಿಕ್ಷಕಿ ಪುಟ್ಟಮ್ಮ, ಬರ್ಕ್‌ಮನ್ ಪ್ರೌಢಶಾಲೆ ಮುಖ್ಯಶಿಕ್ಷಕ ವಿ.ಡಿ.ಜಾನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts