More

    ರಾಮಲಲ್ಲಾನನ್ನು ಸ್ವಾಗತಿಸಲು ಸಜ್ಜಾಗೋಣ

    ಸೇಡಂ: ನೂರಾರು ವರ್ಷದ ಇತಿಹಾಸವಿರುವ ರಾಮ ಮಂದಿರದ ನಿರ್ಮಾಣದ ಕನಸು ಸಾಕಾರಗೊಂಡಿದ್ದು, ರಾಮಲಲ್ಲಾನನ್ನು ಸಂಭ್ರಮದಿಂದ ಸ್ವಾಗತಿಸಲು ನಾವೆಲ್ಲರೂ ಸಜ್ಜಾಗಬೇಕಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.

    ಕುರಕುಂಟಾದಲ್ಲಿ ವಿಶ್ವ ಹಿಂದು ಪರಿಷತ್, ಬಿಜೆಪಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ನೂರಾರು ಕೋಟಿ ಹಿಂದುಗಳ ಹೋರಾಟ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ತಲೆ ಎತ್ತುತ್ತಿದೆ. ಇದಕ್ಕಾಗಿ ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಸ್ಮರಿಸಿದರು.

    ಪ್ರತಿ ಮನೆಗೂ ಶ್ರೀರಾಮ ಆಶೀರ್ವಾದ ತಲುಪಲಿ ಎಂಬ ಉದ್ದೇಶದಿಂದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂತ್ರಾಕ್ಷತೆ ವಿತರಣೆ ಕಾರ್ಯ ಮಾಡುತ್ತಿದೆ. ಎಲ್ಲರೂ ಭಕ್ತಿಯಿಂದ ಅಕ್ಷತೆ ಸ್ವೀಕರಿಸಿ, ರಾಮನ ಕೃಪೆಗೆ ಪಾತ್ರರಾಗಬೇಕು. ಜ.೨೨ರಂದು ಪ್ರತಿಯೊಬ್ಬರೂ ಮನೆಗಳಲ್ಲಿ ಕನಿಷ್ಠ ೫ ದೀಪ ಹಚ್ಚುವ ಮೂಲಕ ದೀಪಾವಳಿ ಆಚರಿಸಬೇಕು ಎಂದು ಕರೆ ನೀಡಿದರು.

    ಸಾನ್ನಿಧ್ಯ ವಹಿಸಿ ಮಾತನಾಡಿದ ಕೊತ್ತಲ ಬಸವೇಶ್ವರ ದೇವಸ್ಥಾನದ ಶ್ರೀ ಸದಾಶಿವ ಸ್ವಾಮೀಜಿ, ಬಹು ವರ್ಷಗಳ ಕನಸು ಇದೀಗ ನನಸಾಗುವ ಸಂದರ್ಭ, ನಮ್ಮ ಕಾಲ ಘಟ್ಟದಲ್ಲಿ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರ ಸುದೈವ. ರಾಜ್ಯದ ೧೫ ಮಠಾಧೀಶರಿಗೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದ್ದು, ಅದರಲ್ಲಿ ನಾನು ಒಬ್ಬನಾಗಿದ್ದೇನೆ ಎಂದು ಹೇಳಿದರು.

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರವೀಣ್ ಕುಲಕರ್ಣಿ ಮಾತನಾಡಿದರು. ಪ್ರಮುಖರಾದ ರಾಜಶೇಖರ ಮುಗಳಿ, ವಿಶ್ವನಾಥರೆಡ್ಡಿ ಪಾಟೀಲ್, ಶರಣಪ್ಪ ಕೊಳ್ಳಿ, ಮಲ್ಲಿಕಾರ್ಜುನ ಮುಗಳಿ, ವೀರಣ್ಣ ಮಂತಟ್ಟಿ, ರಾಮಯ್ಯಗೌಡ, ಸಂಗಪ್ಪ ಕುಂಬಾರ, ವೆಂಕಟೇಶ ಸಾಹುಕಾರ, ಸಂತೋಷಕುಮಾರ ಪೂಜಾರಿ, ನಾಗಶೆಟ್ಟಿ, ತುಳಸಿರಾಮ ಪವಾರ್, ರಾಜಶೇಖರಯ್ಯಸ್ವಾಮಿ ಇತರರಿದ್ದರು.

    ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಅನೀಲರೆಡ್ಡಿ ಸಂಗೇಪಲ್ಲಿ ಸ್ವಾಗತಿಸಿದರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ ಪಾಟೀಲ್ ನಿರೂಪಣೆ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts