More

    ಹಲಗಾ-ಮಚ್ಛೆ ಬೈಪಾಸ್ ನಿರ್ಮಾಣ ವಿರೋದಿಸಿ ಬುಧವಾರವೂ ರೈತರ ಪ್ರತಿಭಟನೆ

    ಬೆಳಗಾವಿ: ಹೊರವಲಯದಲ್ಲಿರುವ ಹಲಗಾ-ಮಚ್ಛೆ ಬೈಪಾಸ್ ನಿರ್ಮಾಣ ವಿರೋಸಿ ಬುಧವಾರವೂ ರೈತರ ಪ್ರತಿಭಟನೆ ಮುಂದುವರಿದಿದೆ. ಭೂ ಸ್ವಾೀನ ಕೈಬಿಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಷದ ಬಾಟಲ್ ಹಿಡಿದು, ನೇಣು ಕುಣಿಕೆಗೆ ತಲೆಯೊಡ್ಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಬೈಪಾಸ್ ನಿರ್ಮಾಣ ಸ್ಥಳಕ್ಕೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಅಕಾರಿಗಳು, ಗುತ್ತಿಗೆದಾರರು ಪೊಲೀಸರ ಭದ್ರತೆಯಲ್ಲಿ ಕಾಮಗಾರಿ ಆರಂಭಿಸಲು ಮುಂದಾದ ವೇಳೆ ರೈತರು ಜೆಸಿಬಿ ಮುಂದೆ ಮಲಗಿ ಪ್ರತಿಭಟನೆ ನಡೆಸಿದ್ದರು. ಆದರೆ, ಅಕಾರಿಗಳು ಕಾಮಗಾರಿಯಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ ಬುಧವಾರವೂ ಪ್ರತಿಭಟನೆ ಮುಂದುವರಿಸಿದ್ದಾರೆ. ಬೈಪಾಸ್ ರಸ್ತೆ ನಿರ್ಮಾಣ ಕೈಬಿಡಬೇಕು. ಲವತ್ತಾದ ಕೃಷಿಭೂಮಿ ಸ್ವಾೀನ ಕೈಬಿಡಬೇಕು ಎಂದು ಜಿಲ್ಲಾಕಾರಿ, ಸಚಿವರಿಗೆ ಮೇಲಿಂದ ಮೇಲೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ, ಹೆದ್ದಾರಿ ಪ್ರಾಕಾರದ ಅಕಾರಿಗಳು ಒತ್ತಾಯಪೂರ್ವಕವಾಗಿ ಜಮೀನು ಸ್ವಾೀನಪಡಿಸಿಕೊಂಡಿದ್ದಾರೆ ಎಂದು ರೈತರು ದೂರಿದರು. ಸುಮಿತ್ರಾ ಅನಗೋಳಕರ, ಮಲ್ಲಿಕಾ ವಾಗಿ, ಅಂಬಿಕಾ ಪರದೇಶಿ, ಸವಿತಾ ಬಿರ್ಜೆ, ಸುರೇಖಾ
    ಬಾಳೇಕುಂದರಗಿ, ಜಯಶ್ರೀ ಗುರಣ್ಣವರ, ಪ್ರಕಾಶ ನಾಯಕ ಇತರರು ಇದ್ದರು.

    ಉಪವಿಭಾಗಾಕಾರಿ ಕಚೇರಿಯಲ್ಲಿ ಸಭೆ ಇಂದು

    ಹಲಗಾ- ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾೀನ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ೆ. 11ರಂದು ಬೆಳಗಾವಿ ಉಪ ವಿಭಾಗಾಕಾರಿ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿದೆ. ರೈತರು, ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಸೇರಿ ಸಂಬಂಸಿದ ಎಲ್ಲ ಇಲಾಖೆಗಳ ಅಕಾರಿಗಳನ್ನು ಸಭೆಗೆ ಕರೆಯುವುದಾಗಿ ಅಕಾರಿಗಳು ಭರವಸೆ ನೀಡಿದ್ದಾರೆ ಎಂದು ರೈತಪರ ಹೋರಾಟಗಾರರಾದ ಜಯಶ್ರೀ ಗುರಣ್ಣವರ, ಪ್ರಕಾಶ ನಾಯಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts