More

    ಕುವೈತ್ ರಾಜ ಶೇಖ್​ ಸಬಾ ಅಲ್​ ಅಹಮದ್​ ಇನ್ನಿಲ್ಲ…

    ಕುವೈತ್​: ಕುವೈತ್​ನ ರಾಜ ಶೇಖ್​ ಸಬಾ ಅಲ್​ ಅಹಮದ್ ಅಲ್ ಜೇಬರ್ ಅಲ್ ಸಬಾ (91) ಮಂಗಳವಾರ ನಿಧನ ಹೊಂದಿದರು. ಅನಾರೋಗ್ಯ ನಿಮಿತ್ತ ಜುಲೈನಲ್ಲಿ ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.

    ವೈಸ್​ ಮ್ಯಾನ್​ ಆಫ್​ ದ ರೀಜಿಯನ್​ ಎಂದೇ ಖ್ಯಾತರಾಗಿದ್ದ ಅವರು ಆಧುನಿಕ ಕುವೈತ್​ನ ವಿದೇಶಿ ನೀತಿಯ ಜನಕ ಎಂದೂ ಖ್ಯಾತರಾಗಿದ್ದರು. ಇವರು 250 ವರ್ಷಗಳ ಕಾಲ ಆಡಳಿತ ನಡೆಸಿದ್ದ ಕುವೈತ್​ ಕುಟುಂಬದ 15ನೇ ನಾಯಕರಾಗಿದ್ದರು. ಪ್ರಧಾನಿ ಆಗಿದ್ದ ಅವರು 1963ರಿಂದ 2003ರ ವರೆಗೆ ವಿದೇಶ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು.

    ಶೇಖ್ ಸಬಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಕುವೈತ್ ರಾಜ್ಯ ಹಾಗೂ ಅರಬ್ ಜಗತ್ತು ಮಹಾನ್ ನಾಯಕನನ್ನು ಕಳೆದುಕೊಂಡಿದೆ. ಭಾರತದ ಒಳ್ಳೆಯ ಗೆಳೆಯ ಆಗಿದ್ದ ಅವರು ಜಗತ್ತಿನ ಶ್ರೇಷ್ಠ ದಾರ್ಶನಿಕರೂ ಆಗಿದ್ದರು. ದ್ವಿಪಕ್ಷೀಯ ಸಂಬಂಧಗಳ ವಿಷಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂಬುದಾಗಿ ಮೋದಿ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts