More

    ಕೊಳ್ಳುವವರಿಲ್ಲದೆ ಟೊಮ್ಯಾಟೊ ನೆಲಕ್ಕೆ ಸುರಿದ ಬೆಳೆಗಾರರು

    ಕುಷ್ಟಗಿ: ಟೊಮ್ಯಾಟೊ ಬೆಲೆ ಪಾತಾಳಕ್ಕಿಳಿದಿದ್ದು, ಖರೀದಿಸುವವರೇ ಇಲ್ಲದಂತಾಗಿ ರೈತರು ತಾವು ಬೆಳೆದ ಟೊಮ್ಯಾಟೊ ಹಣ್ಣುಗಳನ್ನು ಗುರುವಾರ ನೆಲಕ್ಕೆ ಸುರಿದರು.

    ತಾಲೂಕಿನಲ್ಲಿ 300ಹೆಕ್ಟೇರ್‌ನಷ್ಟು ಟೊಮ್ಯಾಟೊ ಬೆಳೆಯಲಾಗಿದೆ. ಅತಿ ಹೆಚ್ಚು ಟೊಮ್ಯಾಟೊ ಮಾರುಕಟ್ಟೆಗೆ ಬರುತ್ತಿದ್ದು, ಬೇಡಿಕೆ ಇಲ್ಲದಂತಾಗಿದೆ. 20 ಕಿಲೋ ಟೊಮ್ಯಾಟೊ ಬಾಕ್ಸ್‌ಗೆ 20-30 ಬೆಲೆ ಸಿಗುತ್ತಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಕೊಳ್ಳುವವರೂ ಇಲ್ಲದಂತಾಗಿ ವಿವಿಧ ಗ್ರಾಮಗಳಿಂದ ಬಂದ ರೈತರು ತಾವು ತಂದ ಉತ್ಪನ್ನವನ್ನು ಮಾರುಕಟ್ಟೆಯ ನೆಲದ ಮೇಲೆ ಸುರಿದು ತೆರಳುತ್ತಿದ್ದಾರೆ.

    ಟೊಮ್ಯಾಟೊಗೆ ಬೆಲೆ ಸಿಗದೆ ಮಾರುಕಟ್ಟೆಯಲ್ಲೇ ಸುರಿಯಬೇಕಾಯಿತು. ಅಲ್ಲಿ ಸುರಿಯಲು ಆಕ್ಷೇಪ ವ್ಯಕ್ತವಾಗಿದ್ದರಿಂದ ಮಾರುಕಟ್ಟೆ ಏಜೆಂಟರು ಬಾಡಿಗೆ ವಾಹನ ವ್ಯವಸ್ಥೆ ಮಾಡಿದ್ದರಿಂದ ಊರ ಹೊರಗಿನ ಹಳ್ಳದಲ್ಲಿ ಸುರಿಯಬೇಕಾಯಿತು. ಸಂಸ್ಕರಣೆಗೂ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಮಾಟಲದಿನ್ನಿ ರೈತ ಶಿವರಾಜ ಅರಸು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts