More

    ಕೆರೆಗೆ ಸೇರಬೇಕಾದ ನೀರು ಪೋಲು, ಮೆಕ್ಕೆಜೋಳದ ಬೆಳೆ ಜಲಾವೃತ

    ಕುಷ್ಟಗಿ: ಕೆರೆ ತುಂಬಿಸುವ ಯೋಜನೆಗೆ ಪೂರೈಕೆಯಾಗುವ ನೀರಿನ ವಾಲ್ವ್ ತೆರೆದಿದ್ದರಿಂದ ತಾಲೂಕಿನ ಯಲಬುರ್ತಿ ಹೊರವಲಯದ ಜಮೀನೊಂದರಲ್ಲಿ ನೀರು ಪೋಲಾಗುತ್ತಿದೆ.

    ಆಲಮಟ್ಟಿ ಜಲಾಶಯದಿಂದ ತಾಲೂಕಿನ ಕಲಾಲಬಂಡಿಯ ಜಲಸಂಗ್ರಾಹಕ ಪೈಪ್ ಮೂಲಕ ಕೆರೆಗಳಿಗೆ ನೀರು ಹರಿಬಿಡಲಾಗುತ್ತಿದೆ. ಪೈಪ್ ದುರಸ್ತಿ ವೇಳೆ ನೀರು ಹೊರ ಬಿಡಲು ನಾಲೆ ಇರುವೆಡೆ ವಾಲ್ವ್ ಅಳವಡಿಸಲಾಗಿದೆ. ಯಲಬುರ್ತಿಯ ಜಮೀನೊಂದರಲ್ಲಿ ಅಳವಡಿಸಿರುವ ಎರಡು ವಾಲ್ವ್ ತೆರೆದಿದ್ದರಿಂದ ಎರಡು ದಿನಗಳಿಂದ ನೀರು ಪೋಲಾಗುತ್ತಿದ್ದು, ಇದರಿಂದ ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳ ಬೆಳೆ ಜಲಾವೃತವಾಗಿದೆ.

    ವಾಲ್ವ್ ಹುಡುಕಲು ಪ್ರಯಾಸ

    ವಾಲ್ವ್ ಸುತ್ತಲೂ ನೀರು ಸಂಗ್ರಹಗೊಂಡಿದ್ದರಿಂದ ಬಂದ್ ಮಾಡಲು ಬಂದಿದ್ದ ಗುತ್ತಿಗೆ ಕಂಪನಿಯ ಕೆಲಸಗಾರರು ಪ್ರಯಾಸ ಪಡುವಂತಾಯಿತು. ನೀರಿನಲ್ಲಿ ಮುಳುಗಿ ವಾಲ್ವ್ ಹುಡುಕುವಷ್ಟರಲ್ಲಿ ಕೆಲಸಗಾರರು ಸುಸ್ತಾದರು. ನೀರು ಪೂರೈಕೆ ಸ್ಥಗಿತಗೊಳಿಸಿದ ನಂತರವಷ್ಟೆ ವಾಲ್ವ್ ಹುಡುಕಿ ಬಂದ್ ಮಾಡಲು ಸಾಧ್ಯವಾಗುತ್ತದೆ ಎಂದು ಕೆಲಸಗಾರರು ತಿಳಿಸಿದರು.

    ಕೆರೆಗೆ ಸೇರಬೇಕಾದ ನೀರು ಪೋಲು, ಮೆಕ್ಕೆಜೋಳದ ಬೆಳೆ ಜಲಾವೃತ

    ಮಳೆ ಇಲ್ಲದಿರುವುದರಿಂದ ದನಕರುಗಳು ನೀರು ಕುಡಿಯಲೆಂದು ಹಾಗೂ ಕೃಷಿ ಹೊಂಡಗಳನ್ನು ತುಂಬಿಸಿಕೊಳ್ಳಲು ರೈತರೇ ವಾಲ್ವ್ ತೆರೆಯುತ್ತಿದ್ದಾರೆ. ವಾಲ್ವ್ ಬಂದ್ ಮಾಡಲು ಮರೆತು ಇಂತಹ ಅವಘಡಕ್ಕೆ ಕಾರಣರಾಗುತ್ತಾರೆ. ಹೀಗೆ ಮಧ್ಯದಲ್ಲಿ ನೀರು ಪೋಲಾಗುವುದರಿಂದ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗುವುದಿಲ್ಲ. ಯಲಬುರ್ತಿ ಹೊರವಲಯದಲ್ಲಿ ವಾಲ್ವ್ ತೆರೆದಿರುವ ರೈತ ಯಾರು ಎಂಬುದನ್ನು ಪತ್ತೆ ಹಚ್ಚಿ ತಾಕೀತು ಮಾಡಲಾಗುವುದು.
    ರಮೇಶ್, ಕೆಬಿಜೆಎನ್‌ಎಲ್ ಉಪ ವಿಭಾಗದ ಎಇಇ, ಕುಷ್ಟಗಿ

    ಎರಡು ದಿನಗಳಿಂದ ಪೋಲಾದ ನೀರೆಲ್ಲ ಜಮೀನಿಗೆ ನುಗ್ಗಿದ್ದರಿಂದ ಮೆಕ್ಕೆಜೋಳದ ಬೆಳೆ ಜಲಾವೃತಗೊಂಡಿದೆ. ಬೆಳೆ ಕೊಳೆತು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
    ಗಂಗಮ್ಮ ಮ್ಯಾಗೇರಿ, ರೈತ ಮಹಿಳೆ, ಯಲಬುರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts