More

    ವರುಣನ ಅಬ್ಬರಕ್ಕೆ 25 ಮನೆಗಳು ಕುಸಿತ: ಟೆಂಗುಂಟಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಕುಟುಂಬ

    ಕುಷ್ಟಗಿ: ತಾಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ರಸ್ತೆಗಳಲ್ಲಿ ಕೊರಕಲು ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡರೆ, ಎರಡು ದಿನ ಸುರಿದ ಮಳೆಗೆ ವಿವಿಧೆಡೆ 25 ಮನೆಗಳು ಬಿದ್ದಿವೆ.

    ಟೆಂಗುಂಟಿ ಗ್ರಾಮದ ರಾಜಪ್ಪ ಬಾಳಪ್ಪ ಮಾದರ್ ಎನ್ನುವವರ ಮನೆ ಭಾಗಶಃ ಬಿದ್ದಿದ್ದು, ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ರಾತ್ರಿ ಮಳೆಯ ತೀವ್ರತೆ ಹೆಚ್ಚುತ್ತಿದ್ದಂತೆ ಕಲ್ಲು ಮಣ್ಣು ಉದುರಿದ ಶಬ್ದ ಕೇಳಿ ಮನೆಯಲ್ಲಿ ಮಲಗಿದ್ದ ಕುಟುಂಬದ 10 ಸದಸ್ಯರು ದಿಢೀರನೇ ಹೊರಬಂದಿದ್ದಾರೆ. ಕ್ರಮೇಣ ಮನೆಯ ಛತ್ತು ಕುಸಿದು ಗೋಡೆಗಳೂ ಭಾಗಶಃ ಬಿದ್ದಿವೆ. ಇದರಿಂದ ಮನೆಯವರು ನಿರಾಶ್ರಿತರಾಗಿದ್ದಾರೆ.

    ಕಂದಾಯ ಇಲಾಖೆ ನೀಡಿರುವ ಮಾಹಿತಿಯಂತೆ ಸೋಮವಾರ ತಾವರಗೇರಾದಲ್ಲಿ 84 ಮಿಮೀ., ಕಿಲಾರಹಟ್ಟಿ 79.6, ದೋಟಿಹಾಳ 22.4, ಕುಷ್ಟಗಿ 22, ಹನುಮಸಾಗರ 14.1 ಹಾಗೂ ಹನುಮನಾಳ ವ್ಯಾಪ್ತಿಯಲ್ಲಿ 12.6 ಮಿಲಿ ಮೀಟರ್ ಮಳೆ ಸುರಿದಿದೆ.

    ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, 25 ಮಣ್ಣಿನ ಮನೆಗಳು ಬಿದ್ದಿವೆ. ಕಳೆದ ಸೆಪ್ಟೆಂಬರ್ ಕೊನೆಯ ವರೆಗೆ 183 ಮನೆಗಳು ಬಿದ್ದಿದ್ದು, ಆ ಎಲ್ಲ ಫಲಾನುಭವಿಗಳಿಗೆ ಪರಿಹಾರ ವಿತರಿಸಲಾಗಿದೆ.
    | ಗುರುರಾಜ ಛಲವಾದಿ, ತಹಸೀಲ್ದಾರ್, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts