More

    ದೇವದಾಸಿ ಅನಿಷ್ಟ ಪದ್ಧತಿ ನಿರ್ಮೂಲನೆಯಾಗಲಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಹೇಳಿಕೆ

    ಕುಷ್ಟಗಿ: ದೇವದಾಸಿ ಪದ್ಧತಿ ಅನಿಷ್ಟ ಪದ್ಧತಿಯಾಗಿದ್ದು, ನಿರ್ಮೂಲನೆಯಾಗಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಹೇಳಿದರು. ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಪಟ್ಟಣದ ವೀರಮಹೇಶ್ವರ ಸಮುದಾಯ ಭವನದಲ್ಲಿ ವಿಮುಕ್ತ ದೇವದಾಸಿಯರಿಗಾಗಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಮೀಕ್ಷೆ ಪ್ರಕಾರ ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರು ಅನಿಷ್ಟ ಪದ್ಧತಿಗೆ ಒಳಗಾಗಿದ್ದಾರೆ. ದೌರ್ಜನ್ಯ ಇನ್ನಿತರ ತೊಂದರೆಗೊಳಗಾಗಿ ಎಲ್ಲರಂತೆ ಜೀವನ ನಡೆಸಲು ಸಾಧ್ಯವಾಗದೆ ಪಶ್ಚಾತಪ ಪಡುತ್ತಿದ್ದಾರೆ. ಈ ಪದ್ಧತಿ ನಿರ್ಮೂಲಗೆ ಕಾನೂನು ಜಾರಿಗೆ ತರಲಾಗಿದ್ದರೂ ಬಹುತೇಕರಿಗೆ ಕಾನೂನಿನ ಅರಿವಿಲ್ಲದಂತಾಗಿದೆ. ಅರಿವು ಮೂಡಿಸುವ ಸಂಬಂಧ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

    ದೇವದಾಸಿ ಸಮರ್ಪಣೆ ನಿಷೇಧ ತಿದ್ದುಪಡಿ ಅಧಿನಿಯಮ 2009ರ ವಿಶ್ಲೇಷಣೆ ಕುರಿತು ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾ ಅನುಷ್ಠಾನಾಧಿಕಾರಿ ಮರಿಯಪ್ಪ ಮುಳ್ಳೂರು ಮಾತನಾಡಿದರು. ಕಾನೂನು ಸೇವೆಗಳ ಪ್ರಾಧಿಕಾರಿಗಳ ಅಧಿನಿಯಮ 1987 ಕುರಿತು ವಕೀಲೆ ಲತಾ ಸ್ಥಾವರಮಠ ಮಾತನಾಡಿದರು.

    ಸರ್ಕಾರಿ ಸಹಾಯಕ ಅಭಿಯೋಜಕ ಎಲ್.ರಾಯನಗೌಡ, ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾ ಅನುಷ್ಠಾನಾಧಿಕಾರಿ ಮರಿಯಪ್ಪ ಮುಳ್ಳೂರು, ವಕೀಲರಾದ ಲತಾ ಸ್ಥಾವರಮಠ, ಆನಂದ್ ಡೊಳ್ಳಿನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts