More

    ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಪರ ಕುರುಬರು, ಪರಮೇಶ್ವರ ಪರ ದಲಿತರು ಕೂಗು

    ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ಆಯ್ಕೆಯ ಕಸರತ್ತು ನಡೆಸುತ್ತಿರುವ ನಡುವೆಯೇ ಜಿಲ್ಲೆಯಲ್ಲಿಯೂ ನೆಚ್ಚಿನ ನಾಯಕರ ಪರವಾಗಿ ಅಭಿಮಾನಿಗಳು ಹೈಕಮಾಂಡ್ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.

    ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸುವಂತೆ ವಿವಿಧ ಕುರುಬ ಸಂಘಟನೆಗಳು ಕಾರ್ಯಕರ್ತರು ಸೋಮವಾರ ತುಮಕೂರಿನಲ್ಲಿ ಒಟ್ಟಾಗಿ ಸೇರಿ ಆಗ್ರಹಿಸಿದರೆ, ಮಾಜಿ ಡಿಸಿಎಂ, ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಪರವಾಗಿ ದಲಿತ ಸಂಘಟನೆಗಳು ಬೀದಿಗಳಿದಿವೆ.

    ತುಮಕೂರು ಜಿಲ್ಲಾ ಕುರುಬರ ಸಂಘ, ಕಾಳಿದಾಸ ವಿದ್ಯಾವರ್ಧಕ ಸಂಘ, ಕವಿರತ್ನ ಕಾಳಿದಾಸ ಸಂಘ, ಸಂಗೋಳ್ಳಿ ರಾಯಣ ಯುವ ಸಂಘ ಸೇರಿದಂತೆ ಹಲವು ಕುರುಬ ಸಂಘಟನೆಗಳು ಪ್ರತ್ಯೇಕವಾಗಿ ಸೋಮವಾರ ನಗರದಲ್ಲಿ ಸಿದ್ದರಾಮಯ್ಯ ಪರವಾಗಿ ಘೋಷಣೆಗಳನ್ನು ಕೂಗಿ ಆಗ್ರಹಿಸಿದರು.

    ತುಮಕೂರಿನ ಕಾಳಿದಾಸ ವಿದ್ಯಾವರ್ಧಕ ಸಂಘದ ಮುಂಭಾಗ ಸಮಾವೇಶಗೊಂಡಿದ್ದ ಕುರುಬ ಸಮುದಾಯದ ಮುಖಂಡರು, ಅಧಿಕಾರ ಹಂಚಿಕೆಯಾದರೆ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
    ಕುರುಬ ಸಂಘದ ಮೈಲಾರಪ್ಪ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಬಳಸಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಗೆಲುವು ಪಡೆಯಬೇಕು, ಸಿದ್ದರಾಮಯ್ಯ ಅವರು ಸಿಎಂ ಆಗದಿದ್ದರೆ ಕಾಂಗ್ರೆಸ್‌ಗೆ ಹಿನ್ನೆಡೆಯಾಗಲಿದೆ ಎಂದು ಎಚ್ಚರಿಸಿದರು.

    ಮುಖಂಡರಾದ ಸುರೇಶ್ ,ರಮೇಶ್ ಕನಕದಾಸ ಹಾಗೂ ಸುನಿತ ನಟರಾಜ್ ಮತ್ತಿತರರು ಇದ್ದರು.

    ಪರಂ ಪರ ದಲಿತರ ಕೂಗು
    ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದು ಅವರ ಪರವಾಗಿ ಬೀದಿಗಳಿದು ಪ್ರತಿಭಟನೆ ನಡೆಸಿದರು.
    ನಗರದ ಬಿಜಿಎಸ್ ವೃತ್ತದಲ್ಲಿ ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ನೇತೃತ್ವದಲ್ಲಿ ಸಮಾವೇಶಗೊಂಡಿದ್ದ ಪಾಲಿಕೆ ಸದಸ್ಯರು, ಮುಖಂಡರು ರಾಜ್ಯದಲ್ಲಿ ದಲಿತ ಸಿಎಂ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts