More

    ಅಕ್ರಮ ಅಂಗಡಿಗಳ ತೆರವು ; ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಪ್ರಕರಣ ದಾಖಲು ಪುರಸಭೆ ಮುಖ್ಯಾಧಿಕಾರಿ ಎಚ್ಚರಿಕೆ

    ಕುಣಿಗಲ್: ಪಟ್ಟಣದ ತುಮಕೂರು ರಸ್ತೆಯ ುಟ್‌ಪಾತ್ ಮೇಲೆ ಅಕ್ರಮವಾಗಿ ಇಟ್ಟುಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ತೆರವುಗೊಳಿಸಿದರು.

    ಅಂಗಡಿಗಳ ತೆರವು ಸಂಬಂಧ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ 13ನೇ ವಾರ್ಡ್‌ನ ಸದಸ್ಯೆ ಕೆ.ಆರ್.ಜಯಲಕ್ಷ್ಮೀ ವಿಷಯ ಪ್ರಸ್ತಾಪಿಸಿ ಪರಿಸರ ಇಂಜಿನಿಯರ್ ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಅಂಗಡಿಗಳನ್ನು ತೆರವುಗೊಳಿಸಲಾಯಿತು.

    ಪಿಎಲ್‌ಡಿ ಬ್ಯಾಂಕ್ ಪಕ್ಕದ ಕಾಂಗ್ರೆಸ್ ಕಚೇರಿ ನಿವೇಶನ, ಕೃಷಿ, ಪಶು ಸಂಗೋಪನಾ ಇಲಾಖೆಯ ಎದುರು ಹಲವು ವರ್ಷಗಳಿಂದ ವ್ಯಾಪಾರಿಗಳು ಕೋಳಿ, ಟೀ ಅಂಗಡಿ, ಡಿಟಿಪಿ ಸೆಂಟರ್ ಸೇರಿ ವಿವಿಧ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಇದರಿಂದ ಈ ಭಾಗದಲ್ಲಿ ವಾಹನಗಳು ಹಾಗೂ ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್, ಕಂದಾಯ ಅಧಿಕಾರಿ ಜಗರೆಡ್ಡಿ, ಪರಸರ ಇಂಜಿನಿಯರ್ ಚಂದ್ರಶೇಖರ್ ನೇತೃತ್ವದ ಸಿಬ್ಬಂದಿ ವ್ಯಾಪಾರಿಗಳ ತೀವ್ರ ವಿರೋಧದ ನಡುವೆ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದರು. ಇದರಿಂದ ರೊಚ್ಚಿಗೆದ್ದ ವ್ಯಾಪಾರಿಗಳು ಪಟ್ಟಣದ ವಿವಿಧೆಡೆ ಕಾನೂನು ಬಾಹಿರವಾಗಿ ಇಟ್ಟುಕೊಂಡಿರುವ ಬಲಾಢ್ಯರ ಅಂಗಡಿಗಳನ್ನು ತೆರವುಗೊಳಿಸದೆ ಬಡವರ ಅಂಗಡಿಗಳನ್ನು ತೆರವುಗೊಳಿಸಲು ಬಂದಿದ್ದೀರಾ ಎಂದು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು.

    ಸಾರ್ವಜನಿಕರ ಹಿತದೃಷ್ಟಿಯಿಂದಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ, ಎಲ್ಲರೂ ನಮಗೆ ಒಂದೇ, ಕಾನೂನು ವಿರುದ್ಧವಾಗಿ ಯಾರೇ ನಡೆದುಕೊಂಡರೂ ಅವರ ಅಂಗಡಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿ ಎಚ್ಚರಿಕೆ ನೀಡಿದರು.

    ಕಾರ್ಯಚರಣೆಗೆ ಅಡ್ಡಿ: ಕಂದಾಯ ಅಧಿಕಾರಿ ಜಗರೆಡ್ಡಿ, ಪರಸರ ಇಂಜಿನಿಯರ್ ಚಂದ್ರಶೇಖರ್, ಆರೋಗ್ಯ ಕಿರಿಯ ಸಹಾಯಕಿ ಮಮತಾ ಅವರು ಸಿಬ್ಬಂದಿ ಹಾಗೂ ಜೆಸಿಬಿಯೊಂದಿಗೆ ಅಂಗಡಿ ತೆರವಿಗೆ ಮುಂದಾದರು. ಆದರೆ ವ್ಯಾಪಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾರ‌್ಯಾಚರಣೆಗೆ ಅಡ್ಡಿಪಡಿಸಿದರು. ಬಳಿಕ ಅಲ್ಲಿಗೆ ಬಂದ ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್, ಅಂಗಡಿಗಳ ತೆರವಿಗೆ ವಾರದ ಮುಂಚೆ ತಿಳಿಸಲಾಗಿದೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿ ಕಾರ‌್ಯಾಚರಣೆ ಮುಂದುವರಿಯಿತು.

    ಜೆಸಿಬಿಗೆ ಅಡ್ಡಲಾಗಿ ಮಲಗಿದ ಅಂಗವಿಕಲರು: ಮಾರಮ್ಮದೇವಿ ಸೈಬರ್ ಸೆಂಟರ್ ಕಬ್ಬಿಣದ ಪೆಟ್ಟಿ ಅಂಗಡಿಯನ್ನು ಜೆಸಿಬಿ ಮೂಲಕ ಅಧಿಕಾರಿಗಳು ತೆರವುಗೊಳಿಸಲು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಇಬ್ಬರು ಅಂಗವಿಕಲರು ಹಲವು ವರ್ಷಗಳಿಂದ ಇದನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಇದು ಬಿಟ್ಟರೆ ನಮಗೆ ಬೇರೆ ಮಾರ್ಗವಿಲ್ಲ, ಹಾಗಾಗಿ ಅಂಗಡಿ ತೆರವುಗೊಳಿಸಲು ಬಿಡುವುದಿಲ್ಲ ಎಂದು ಜೆಸಿಬಿಗೆ ಅಡ್ಡಲಾಗಿ ಮಲಗಿ ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಒಬ್ಬರು ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡಿದರೆ ಬೇರೆಯವರು ಇಟ್ಟುಕೊಳ್ಳುತ್ತಾರೆ. ಹಾಗಾಗಿ ಕಾರ್ಯಾಚರಣೆಗೆ ಸಹಕರಿಸಿ, ನಿಮಗೆ ಅನ್ಯಾಯವಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿ, ಅಂಗಡಿ ತೆರವುಗೊಳಿಸಿದರು.

    ಅಂಗಡಿ ತೆರವು ಕಾರ್ಯಾಚರಣೆ ಇಲ್ಲಿಗೆ ನಿಲ್ಲುವುದಿಲ್ಲ, ಮುಂದಿನ ದಿನದಲ್ಲಿ ಪಟ್ಟಣದ ವಿವಿಧ ಭಾಗಗಳಲ್ಲಿ ುಟ್‌ಪಾತ್ ಮೇಲೆ ಇಟ್ಟಿರುವ ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸಲಾಗುವುದು, ಇದಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕು, ಅಧಿಕಾರಿಗಳು ಇಂದು ಬರುತ್ತಾರೆ, ನಾಳೆ ಹೋಗುತ್ತಾರೆ. ಆದರೆ, ಇಲ್ಲಿ ಇರುವ ಜನರು ನಿಮ್ಮ ಊರು ಅಭಿವೃದ್ಧಿಯಾಗಬೇಕು. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಲ್ಲಿನ ನಾಗರಿಕರ ಮೇಲಿದೆ.
    ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts