More

    ಅರ್ಹ ಫಲಾನುಭವಿಗಳ ಆಯ್ಕೆಗೆ ಆದ್ಯತೆ : ಗ್ರಾಪಂ ಪಿಡಿಒ ವೈಜನಾಥ ಸಾರಂಗಮಠ ಹೇಳಿಕೆ

    ಕುಕನೂರು: ವಸತಿ ಯೋಜನೆಯಡಿ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳ ಆಯ್ಕೆಗೆ ಆದ್ಯತೆ ನೀಡಲಾಗುವುದು ಎಂದು ಗ್ರಾಪಂ ಪಿಡಿಒ ವೈಜನಾಥ ಸಾರಂಗಮಠ ಹೇಳಿದರು.

    ಭಾನಾಪುರ ಗ್ರಾಮದ ದ್ಯಾಮವ್ವನ ಗುಡಿಯಲ್ಲಿ ಗುರುವಾರ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು. ಮನೆ ಇಲ್ಲದ ಕುಟುಂಬಕ್ಕೆ ಸರ್ಕಾರ ಡಾ.ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡುವಂತೆ ಸೂಚಿಸಿದೆ. ಹೀಗಾಗಿ ಪಂಚಾಯಿತಿ ಗ್ರಾಮಗಳಲ್ಲಿ ಸಭೆ ನಡೆಸುವ ಮನೆ ಇಲ್ಲದವರನ್ನು ಆಯ್ಕೆ ಮಾಡಲಾಗುತ್ತಿದೆ. ಈವರೆಗೆ ಸರ್ಕಾರದಿಂದ ಯಾವುದೇ ವಸತಿ ಯೋಜನೆ ಪಡೆಯದ ಫಲಾನುಭವಿಗಳು ಅಗತ್ಯ ದಾಖಲೆ ಸಲ್ಲಿಸಬೇಕು.

    ಗ್ರಾಪಂ ವ್ಯಾಪ್ತಿಯಲ್ಲಿ ಸಾಮಾನ್ಯ-52, ಎಸ್ಸಿ12, ಎಸ್ಟಿ-5, ಅಲ್ಪಸಂಖ್ಯಾತ-1 ಸೇರಿ ಒಟ್ಟು 75 ಮನೆಗಳು ಮಂಜೂರಾಗಿವೆ. ಇದರಲ್ಲಿ ಭಾನಾಪುರ ಗ್ರಾಮಕ್ಕೆ ಸಾಮಾನ್ಯ-10, ಎಸ್ಸಿ-4, ಎಸ್ಟಿ-1 ಹಾಗೂ ಅಲ್ಪಸಂಖ್ಯಾತ-1 ಮನೆ ಬಂದಿದೆ ಎಂದರು. ಗ್ರಾಪಂ ಅಧ್ಯಕ್ಷೆ ಪವಿತ್ರಾ ಪ್ರಕಾಶ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ನೀಲಕಂಠಯ್ಯ ಸಸಿಮಠ, ರಾಮಣ್ಣ ಕೋಮಲಾಪುರ, ರೇಣುಕಾದೇವಿ ತಳವಾರ, ಪ್ರಮುಖರಾದ ಮುತ್ತಣ್ಣ ಕವಲೂರು, ವಿರೂಪಾಕ್ಷಪ್ಪ ಅಂಗಡಿ, ಶಿವಪುತ್ರಪ್ಪ ಮುದ್ಲಾಪುರ, ಪರಶುರಾಮ ಮಡಿವಾಳ, ಫಕೀರಸ್ವಾಮಿ ಮಂಡಲಗೇರಿ, ರಾಜಾಸಾಬ್, ಗಂಗಾಧರಯ್ಯ ಲಕಮಾಪುರಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts