More

    ರೋಗ ತಡೆಗಟ್ಟಲು ಜಾಗೃತಿ ಅಗತ್ಯ- ತಾಪಂ ಎಡಿ ವೆಂಕಟೇಶ ವಂದಾಲ್ ಹೇಳಿಕೆ

    ಕುಕನೂರು: ಸಾಂಕ್ರಾಮಿಕ ರೋಗ ತಡೆಗಟ್ಟಲು ಜಾಗೃತಿವಹಿಸುವುದು ಅತ್ಯಗತ್ಯ ಎಂದು ತಾಪಂ ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲ್ ಹೇಳಿದರು. ಭಾನಾಪುರ ಗ್ರಾಪಂನಲ್ಲಿ ಆರೋಗ್ಯ ಅಮೃತ ಅಭಿಯಾನ ಮತ್ತು ಜಲ ಸಂಜೀವಿನಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಆರೋಗ್ಯಯುತ ಜೀವನ ನಡೆಸುವುದು ಎಲ್ಲರ ಅಭಿಲಾಷೆಯಾಗಿರುತ್ತದೆ. ಸಾರ್ವಜನಿಕರು ಪ್ರಾಥಮಿಕ ಹಂತದಲ್ಲಿ ರೋಗವನ್ನು ಗುರುತಿಸಿದೆ ಕಾಯಿಲೆಗಳಿಂದ ಬಳಲುವಂತಾಗಿದೆ. ಜನರ ಆರೋಗ್ಯಮಟ್ಟ ಸುಧಾರಿಸಲು ಅಭಿಯಾನ ಆರಂಭಿಸಲಾಗಿದೆ ಎಂದರು.

    ಮಕ್ಕಳಲ್ಲಿ, ವೃದ್ಧ್ದರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಹೀಗಾಗಿ ಪ್ರತಿಯೊಬ್ಬರು ಆರೋಗ್ಯ ತಪಾಸಣೆಗೆ ಒಳಗಾಗಬೇಕು. ರಕ್ತ ಹೀನತೆ, ರಕ್ತದೊತ್ತಡ, ತಾಯಿಯಂದಿರ ಮರಣ, ಶಿಶುಗಳ ಮರಣ ತಡೆಗೆ ಪೌಷ್ಟಿಕ ಆಹಾರ ಸೇವಿಸಬೇಕೆಂದು ಸಲಹೆ ನೀಡಿದರು.

    ಪಿಡಿಒ ಅಡಿವೆಪ್ಪ ಯಡಿಯಾಪುರ, ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಆರೋಗ್ಯ ಇಲಾಖೆ ಅಧಿಕಾರಿ ಅವಿತಾ ಪಾಟೀಲ್, ಶಿಕ್ಷಕರಾದ ಸಂಗಪ್ಪ ಗಾಣಿಗೇರ, ಕೆಎಚ್‌ಪಿಟಿ ಸಂಸ್ಥೆಯ ಉಮಾ ಮಳಿಮಠ, ಕೃಷಿ ಫೌಂಡೇಷನ್ ಸಂಸ್ಥೆಯ ಸಂಯೋಜಕಿ ವಿಜಯಲಕ್ಷ್ಮೀ ನಾಗರಾಜ ಕುರುಗೋಡ, ಪ್ರಮುಖರಾದ ಲಿಂಗರಡ್ಡೆಪ್ಪ, ನಾಗಪ್ಪ ಅಗಸಿಮುಂದಿನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts