More

    ಕೃಷಿ ಉತ್ಪನ್ನ ಮೌಲ್ಯವರ್ಧನೆ ಮಾಡಿ ಮಾರಿದರೆ ಲಾಭ ಹೆಚ್ಚು ಎಂದ ಬೆಂಗಳೂರಿನ ನಬಾರ್ಡ್ ಸಿಜಿಎಂ ನೀರಜ್ ಕುಮಾರ್ ಹೇಳಿಕೆ

    ಕೂಡ್ಲಿಗಿಯಲ್ಲಿ ಕಾಯಕಲ್ಪ ರೈತ ಉತ್ಪಾದಕರ ಸಂಘದ ಮಾರಾಟ ಮಳಿಗೆ ಉದ್ಘಾಟನೆ

    ಕೂಡ್ಲಿಗಿ: ರೈತ ಬೆಳೆದ ಬೆಳೆಗೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಹೆಚ್ಚಿನ ಆದಾಯ ಗಳಿಸಬಹುದು ಎಂದು ಬೆಂಗಳೂರಿನ ನಬಾರ್ಡ್ ಸಿಜಿಎಂ ನೀರಜ್ ಕುಮಾರ್ ಹೇಳಿದರು.

    ಪಟ್ಟಣದ ಹಿರೇಮಠ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಕಾಯಕಲ್ಪ ರೈತ ಉತ್ಪಾದಕರ ಸಂಘದ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದರು. ಪ್ರತಿ ಗ್ರಾಮಗಳಲ್ಲಿ ರೈತ ಉತ್ಪಾದಕರ ಸಹಕಾರ ಸಂಘ ರಚಿಸಿಕೊಳ್ಳಬೇಕು. ಕಾರಣ ರೈತ ಕಾಯಕಲ್ಪ ಉತ್ಪಾದಕ ಸಂಘಗಳಿಗೆ ನಬಾರ್ಡ್ ವತಿಯಿಂದ ಆರ್ಥಿಕ ಸಹಾಯ ನೀಡಲಾಗುತ್ತದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗುವ ಜತೆಗೆ ಸಮಾಜದ ಮುಖ್ಯವಾಹಿನಿಗೆ ಬರಲು ಅನುಕೂಲವಾಗುತ್ತದೆ ಎಂದರು.

    ಕಾಯಕಲ್ಪ ರೈತ ಸಂಘದ ನಿರ್ದೇಶಕ ಎಂ.ಬಸವರಾಜ ಮಾತನಾಡಿ, ರೈತರು ವ್ಯಾಪಾರಿ ಗುಣ ಬೆಳೆಸಿಕೊಳ್ಳಬೇಕು. ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ಮಾರದೆ ಮೌಲ್ಯವರ್ಧನೆಮಾಡಿ ಮಾರಬೇಕು. ಗ್ರಾಮೀಣ ಪ್ರದೇಶಗಳಲ್ಲಿ ರೈತ ಕಾಯಕಲ್ಪ ಉತ್ಪಾದಕರ ಸಂಘ ರಚಿಸಿಕೊಂಡರೆ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುವ ಜತೆಗೆ ಆದಾಯವೂ ಹೆಚ್ಚುತ್ತದೆ ಎಂದರು.

    ಬಳ್ಳಾರಿ ನಬಾರ್ಡ್ ಸಂಸ್ಥೆಯ ಡಿಡಿಎಂ ಅಪರ್ಣಾ ಕೋಪ್ಲೆ, ಕೃಷಿ ಇಲಾಖೆಯ ಧನಂಜಯ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನೀಲಪ್ಪ, ಪಿ.ಕೆ.ಜಿ.ಬಿ. ವ್ಯವಸ್ಥಾಪಕಿ ಶ್ವೇತಾ, ಕರ್ನಾಟಕ ಬ್ಯಾಂಕ್‌ನ ಶಿವಪ್ರಸಾದ್, ಕಾಯಕಲ್ಪ ಸಂಸ್ಥೆ ಅಧ್ಯಕ್ಷ ಹನುಮಂತಪ್ಪ, ಮದರ್ ಸಂಸ್ಥೆಯ ನಿರ್ದೇಶಕರ ಎಸ್.ಎಚ್. ವೀರಣ್ಣ, ವಿರುಪಾಪುರ ರಾಘವೇಂದ್ರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts