More

    ಸಂಜೆಯಾಗುತ್ತಿದ್ದಂತೆ ಈ ಗ್ರಾಮದಲ್ಲಿ ಕೇಳುತ್ತೆ ವಿಚಿತ್ರ ಧ್ವನಿ: ನಿಗೂಢ ಧ್ವನಿಗೆ ಗಂಗಮ್ಮನ ಹಳ್ಳಿ ಗಢ ಗಢ!

    ಕೊಟ್ಟೂರು: ಸಾಮಾನ್ಯವಾಗಿ ಹಳ್ಳಿಗಾಡಿನ ಜನರಲ್ಲಿ, ಭೂತ, ದೆವ್ವ, ಮಾಟ ಮಂತ್ರಗಳ ನಂಬಿಕೆ ಹೆಚ್ಚು. ಕೆಲವರೂ ವೈಜ್ಞಾನಿಕವಾಗಿ ಇವೆಲ್ಲ ಸುಳ್ಳು ಅಂತಾರೆ.

    ಆದರೆ ವೈಜ್ಞಾನಿಕವಾಗಿ ಸುಳ್ಳು ಎನ್ನುವವರೂ ಕೂಡ ಈ ಗ್ರಾಮದಲ್ಲಿ ರಾತ್ರಿ ವೇಳೆ ಕೇಳಿ ಬರುವ ಭಯಾನಕ ಧ್ವನಿಯ ಬಗ್ಗೆ ಸ್ಪಷ್ಟ ಉತ್ತರ ಕೊಡಲು ಹಿಂಜರಿಯುವಂತಹ ಘಟನೆ ನಡೆದಿದೆ.

    ಗಣಿನಾಡು ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನ ಹಳ್ಳಿಯಲ್ಲಿ ಇಂತಹದ್ದೊಂದು ಅವಘಡ ನಡೆಯುತ್ತಿದೆ. ಗಂಗಮ್ಮನ ಹಳ್ಳಿಯಲ್ಲಿ ಅಗೋಚರ ಶಕ್ತಿಯೊಂದು ಕರ್ಕಶವಾಗಿ ಕೂಗುವ ಸದ್ದು ದಿನ ನಿತ್ಯ ಕೇಳಿ ಬರ್ತಿದೆ.

    ಈ ನಿಗೂಢ ರೀತಿಯ ಕೂಗಾಟಕ್ಕೆ ಬೆಚ್ಚಿ ಬಿದ್ದ ಜನ ಭಯದಲ್ಲೇ ವಾಸಿಸುತ್ತಿದ್ದಾರೆ. ಸಂಜೆ 8 ಗಂಟೆ ನಂತರ ಆ ಧ್ವನಿ ಒಮ್ಮೆ ಗಂಡಸಿನ ರೀತಿ ದೊಡ್ಡ ಧ್ವನಿಯಲ್ಲಿ ಅಳುತ್ತದೆ, ಇನ್ನೊಮ್ಮೆ ಮಗುವಿನ ಗಹಗಹಿಕೆಯ ನಗುವಿನ ರೀತಿ ನಗು ಕೇಳಿ ಬರತ್ತ‌ದೆ. ಇದು ಗ್ರಾಮದ ಶೇ.70 ಜನರ ಅನುಭವಕ್ಕೆ ಬಂದಿದೆ.

    ಇನ್ನು ವಿಚಿತ್ರ ಅಂದ್ರೆ ಗಂಗಮ್ಮನ ಹಳ್ಳಿಯ ದಕ್ಷಿಣ ಭಾಗದಲ್ಲಿರುವ ಏಕ ಶಿಲಾ ಬೆಟ್ಟದ ಹಿಂದೆ ಈ ನಿಗೂಢ ಧ್ವನಿ ಪ್ರತಿಧ್ವನಿಸುತ್ತಿದೆ. ಅಷ್ಟೇ ಅಲ್ಲದೇ ಒಂಟಿಯಾಗಿ ಓಡಾಡುವರನ್ನ ಈ ಧ್ವನಿ ಬಿಟ್ಟು ಬಿಡದೆ ಹಿಂಬಾಲಿಸುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

    ಹೀಗಾಗಿ ರಾತ್ರಿ ಹೊತ್ತು ಜಮೀನಿಗೆ ನೀರು ಬಿಡಲು ಹೋದರೆ, ತಡ ರಾತ್ರಿ ಗ್ರಾಮಕ್ಕೆ ಬಂದರೆ ಮಧ್ಯ ಬಂದು ಅಡ್ಡಗಟ್ಟುತ್ತದೆ ಈ ನಿಗೂಢ ಧ್ವನಿ. ಇಲ್ಲಿಯವರೆಗೂ ಯಾರಿಗೂ ಕಾಣಿಸದೇ ಕೇವಲ ಧ್ವನಿಯೇ ಜನರ ನೆಮ್ಮದಿ ಕೆಡಿಸಿದೆ. ಗುಂಪು ಗುಂಪಾಗಿ ಹೋದರೆ ಈ ಧ್ವನಿ ಕೇಳಿಸಲ್ಲ ಅಂತಾರೆ ಇಲ್ಲಿನ ಜನ.

    ಇನ್ನು ಕೆಲವರು ಇದು ಗ್ರಹ ಚೇಷ್ಟೆ, ಊರ ಮಾರಮ್ಮನಿಗೆ ಶಾಂತಿ ಮಾಡಿಸಬೇಕು ಅಂತಿದ್ದಾರೆ. ಹುಣ್ಣಿಮೆ ಅಮವಾಸ್ಯೆ ಮುಂದೆ ಈ ವಿಚಿತ್ರ ಧ್ವನಿ ಹೆಚ್ಚಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು. (ದಿಗ್ವಿಜಯ ನ್ಯೂಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts