More

    ಬಲಿಷ್ಠ ವಿಶ್ವವಿದ್ಯಾಲಯ ಕಟ್ಟೋಣ

    ಕುಕನೂರು: ಎಲ್ಲರ ಸಹಕಾರದೊಂದಿಗೆ ಕೊಪ್ಪಳ ವಿಶ್ವವಿದ್ಯಾಲಯವನ್ನು ಬಲಿಷ್ಠವಾಗಿ ನಿರ್ಮಿಸೋಣ ಎಂದು ವಿವಿ ಉಪಕುಲಪತಿ ಬಿ.ಕೆ.ರವಿ ಹೇಳಿದರು.

    ತಾಲೂಕಿನ ತಳಕಲ್-ಭಾನಾಪುರ ಮಧ್ಯೆ ಇರುವ ಕೊಪ್ಪಳ ವಿಶ್ವವಿದ್ಯಾಲಯವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವರ್ಚುವಲ್ ಮೂಲಕ ಉದ್ಘಾಟಿಸಿದ ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಬೃಹತ್ ವಿಶ್ವವಿದ್ಯಾಲಯ ಮಾಡಲು ಒಬ್ಬಿಬ್ಬರ ಕೈಯಿಂದ ಆಗುವುದಿಲ್ಲ. ಒಂದೇ ಕೈಯಿಂದ ಚಪಾಳೆ ಸಾಧ್ಯವಿಲ್ಲ. ಅದೇರೀತಿ ಒಂದು ವಿಶ್ವವಿದ್ಯಾಯಲ ಬೃಹದಾಕಾರವಾಗಿ ಬೆಳೆಯಲು ಜಿಲ್ಲೆಯ ಜನಪ್ರತಿನಿಧಿಗಳಿಂದ ಹಿಡಿದು ಎಲ್ಲರ ಸಹಕಾರ ಅಗತ್ಯವಿರುತ್ತದೆ ಎಂದರು.

    ಸದ್ಯ ಕೊಪ್ಪಳ ವಿವಿ ಪ್ರಾರಂಭವಾಗಿದೆ. ಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರು ಕೊಪ್ಪಳ ವಿವಿಗೆ ಅಗತ್ಯ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದಾರೆ. ವಿಶ್ವವಿದ್ಯಾಲಯಗಳು ಸಂಶೋಧನಾ ಕೇಂದ್ರವಾಗಿದ್ದು, ಸಾಮಾಜಿಕ, ವೈಜ್ಞಾನಿಕವಾಗಿ ಇಲ್ಲಿ ಸಂಶೋಧನೆಗಳು ನಿರಂತವಾಗಿ ನಡೆಯಬೇಕು. ಇಲ್ಲಿನ ಪ್ರಾಧ್ಯಾಪಕ ಹಾಗೂ ಉಪನ್ಯಾಸಕ ವೃಂದ ಸಾಕಷ್ಟು ಶ್ರಮವಹಿಸಿ ಎಲ್ಲ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಕೊಪ್ಪಳ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಮನೋಜ ಡೊಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಚುವಲ್ ಮೂಲಕ ವಿವಿ ಉದ್ಘಾಟನೇ ವೇಳೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಇದ್ದರು. ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ನೂತನ ವಿವಿಗೆ ಆಗಮಿಸಿ, ವೀಕ್ಷಣೆ ಮಾಡಿದರು.

    ಯಲಬುರ್ಗಾ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಪ್ರಕಾಶ ಯಳವಟ್ಟಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಸಿ.ಐ.ಛಲವಾದಿ, ಡಾ.ಸಾಧು ಸೂರ್ಯಕಾಂತ, ಜಡೆಪ್ಪ, ಡಾ.ಬಸವರಾಜ ಇಳಿಗನೂರು, ಡಾ.ವೀರೇಶ ಉತ್ತಂಗಿ, ಹುಲಿಗಪ್ಪ ನಾಯಕ, ರಂಗನಾಥ, ಶಂಕ್ರಪ್ಪ, ಸುಧಾರ, ಹುಲಿಯಪ್ಪ, ಪ್ರವೀಣ ಕುಮಾರ, ರವೀಂದ್ರ ಬೆಟಗೇರಿ, ಡಾ.ಗೀತಾ ಪಾಟೀಲ್, ವೇಣಿ, ಕೋಮಲಾ, ಡಾ.ಅಶ್ವಿನಿ ಕುಮಾರ, ಡಾ.ಪ್ರವೀಣ ಪೊಲೀಸ್ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts