More

    ಕೊಪ್ಪಳ ಜಿಲ್ಲೆಯಲ್ಲಿ ಮುಂದುವರಿದ ವರುಣಾರ್ಭಟದಿಂದ 970 ಹೆಕ್ಟೇರ್ ಬೆಳೆ ನಾಶ

    ಕೊಪ್ಪಳ: ಜಿಲ್ಲೆಯಲ್ಲಿ ಎರಡು ದಿನದಿಂದ ಮಳೆಯಾಗುತ್ತಿದ್ದು, 140 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ.

    ಭಾನುವಾರ 36 ಮಿ.ಮೀ.ಮಳೆಯಾಗಿದೆ. ಅಕ್ಟೋಬರ್‌ನಲ್ಲಿ ವಾಡಿಕೆಗಿಂತ 22 ಮಿ.ಮೀ. ಹೆಚ್ಚುವರಿ ಮಳೆಯಾಗಿದೆ. ಈ ವರ್ಷದಲ್ಲಿ 525 ಮಿ.ಮೀ.ವಾಡಿಕೆ ಮಳೆಯಿದ್ದು, 736 ಮಿ.ಮೀ. ಮಳೆಯಾಗಿದೆ. ಇದರಿಂದ ಜಿಲ್ಲಾದ್ಯಂತ ಮೆಕ್ಕೆಜೋಳ, ಸಜ್ಜೆ, ಹತ್ತಿ, ಭತ್ತ ಸೇರಿ 140 ಹೆಕ್ಟೇರ್ ಕೃಷಿ ಬೆಳೆ ಪ್ರದೇಶಕ್ಕೆ ಹಾನಿಯಾಗಿದೆ. ಈರುಳ್ಳಿ, ಮೆಣಸಿನಕಾಯಿ, ಬಾಳೆ ಸೇರಿ 830 ಹೆ. ತೋಟಗಾರಿಕೆ ಬೆಳೆ ನಾಶವಾಗಿದೆ ಎಂದು ಕಂದಾಯ ಅಧಿಕಾರಿಗಳು ಅಂದಾಜಿಸಿದ್ದಾರೆ. 4.5 ಕೋಟಿ ರೂ.ನಷ್ಟವಾಗಿದ್ದು, ಜಂಟಿ ಸಮೀಕ್ಷೆ ಮುಂದುವರಿದಿದೆ.

    ಇದರೊಂದಿಗೆ ಎರಡ್ಮೂರು ದಿನಗಳಲ್ಲಿ ಕುಕನೂರು ತಾಲೂಕಿನಲ್ಲಿ 90 ಮನೆಗಳು, ಕೊಪ್ಪಳ 20, ಇತರ ತಾಲೂಕುಗಳಲ್ಲಿ 30 ಸೇರಿ ಒಟ್ಟು 140 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿವೆ. ಇದರಿಂದ 1.4 ಕೋಟಿ ರೂ. ನಷ್ಟ ಸಂಭವಿಸಿದೆ. ಈ ವರ್ಷದಲ್ಲಿ ಈವರೆಗೆ 744 ಮನೆಗಳಿಗೆ 23 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್ ಹಾನಿಯಾಗಿದ್ದು , 4 ಕೋಟಿ ರೂ.ಹಾನಿಯಾಗಿದೆ. ಕುಷ್ಟಗಿ ತಾಲೂಕಿನ ಚಿಕ್ಕಹೆಸರೂರು -ಮುಗದಲ್ – ಮುಂಡರಗಿ ರಾಜ್ಯ ಹೆದ್ದಾರಿ 129 ಕಿ.ಮೀ ನಿಂದ 150 ಕಿ.ಮೀ ರಸ್ತೆಯ ಪಕ್ಕದ ಹಳ್ಳದ ತಡೆಗೋಡೆ ಸಹ ಮಳೆಯಿಂದ ಹಾಳಾಗಿದ್ದು, 1.10 ಕೋಟಿ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.


    ಎರಡು ದಿನದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಮಳೆಯಿಂದಾದ ಹಾನಿ ಬಗ್ಗೆ ವರದಿ ಮಾಡಲಾಗಿದೆ. ಕೃಷಿ, ತೋಟಗಾರಿಕೆ ಪ್ರದೇಶ, ಮನೆಗಳು, ರಸ್ತೆಗಳು ಹಾಳಾಗಿವೆ. ಈ ಬಗ್ಗೆ ನಮ್ಮ ಅಧಿಕಾರಿಗಳು ವರದಿ ಸಲ್ಲಿಸುತ್ತಿದ್ದಾರೆ. ಈ ವರ್ಷದಲ್ಲಿ 744 ಮನೆಗಳಿಗೆ 23 ಲಕ್ಷ ರೂ. ಪರಿಹಾರ ನೀಡಲಾಗಿದೆ. ಬೆಳೆಹಾನಿ ಕುರಿತು ಪರಿಹಾರ ತಂತ್ರಾಂಶದಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ.
    | ಎಂ.ಪಿ.ಮಾರುತಿ ಎಡಿಸಿ ಕೊಪ್ಪಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts