More

    ಅಂಗನವಾಡಿ ಕೇಂದ್ರಗಳಲ್ಲಿ ಕೈತೋಟ ನಿರ್ಮಿಸಿ

    ಕೊಪ್ಪಳ: ಕಾಂಪೌಂಡ್ ಇರುವ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಕೈ ತೋಟ ನಿರ್ಮಿಸುವಂತೆ ಜಿಪಂ ಸಿಇಒ ಫೌಜಿಯಾ ತರನ್ನುಮ್, ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

    ನರೇಗಾದಡಿ ಅಂಗನವಾಡಿಗಳಲ್ಲಿ ಶೌಚಗೃಹ, ಕಾಂಪೌಂಡ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕಾಂಪೌಂಡ್ ಇರುವ ಅಂಗನವಾಡಿಗಳಲ್ಲಿ ಕೈ ತೋಟ ನಿರ್ಮಿಸಬೇಕಿದೆ. ಹಳೆಯದಾದ ಅಥವಾ ಶಿಥಿಲಗೊಂಡ ಅಂಗನವಾಡಿ ಕಟ್ಟಡಗಳನ್ನು ಇಂಜಿನಿಯರ್‌ಗಳಿಂದ ವರದಿ ಪಡೆದು ನೆಲಸಮಗೊಳಿಸಬೇಕು. ದುರಸ್ತಿ ಅಗತ್ಯವಿದ್ದಲ್ಲಿ ಇಲಾಖೆ ಅನುದಾನ ಬಳಸಬೇಕು. ಕಡ್ಡಾಯವಾಗಿ ಶೌಚಗೃಹ ನಿರ್ಮಿಸಬೇಕು. ನರೇಗಾದಡಿ ಗ್ರಾಮೀಣ ಭಾಗದ ಅಂಗನವಾಡಿ ಹಾಗೂ ಇಲಾಖೆ ಅನುದಾನದಲ್ಲಿ ನಗರ, ಪಟ್ಟಣ ಪ್ರದೇಶದ ಅಂಗನವಾಡಿಗಳಲ್ಲಿ ಕಾಮಗಾರಿ ಕೈಗೊಳ್ಳಬೇಕು. ಮುಕ್ತಾಯ ಹಂತದಲ್ಲಿರುವ ಕಾಮಗಾರಿಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಆರಂಭಿಸದೇ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಶುರು ಮಾಡಬೇಕೆಮದು ಸೂಚಿಸಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ.ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ್ದು, ಐವರು ಮಹಿಳೆಯರು ಹಾಗೂ ಒಂದು ಸಂಸ್ಥೆ ಸೇರಿ ಒಟ್ಟು 6 ಅರ್ಜಿಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ ಸಿಇಒ, ಸ್ವೀಕೃತಿಯಾದ ಅರ್ಜಿಗಳ ಪ್ರಸ್ತಾವನೆ ಸಲ್ಲಿಸಿ. ಅರ್ಹರಿದ್ದರೂ ಅರ್ಜಿ ಸಲ್ಲಿಸದ ಸಾಧಕರನ್ನು ಗುರುತಿಸಿ ಹೆಸರು ಶಿಫಾರಸು ಮಾಡಬೇಕು. ಬಾಲ್ಯ ವಿವಾಹದಿಂದ ಮಕ್ಕಳನ್ನು ರಕ್ಷಿಸಿದ ನಂತರ ನಿಯಮಾನುಸಾರ ಕ್ರಮ ಜರುಗಿಸಬೇಕು. ಅವರ ಪುನರ್ವಸತಿಗೆ ಬೇಕಾದ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು. ಜಿಪಂ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಡಿಡಿಪಿಐ ಎಂ.ಎ.ರಡ್ಡೇರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ, ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts