More

    ಗಣೇಶೋತ್ಸವ ನಿಮಿತ್ತ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ: ಹಿಂದು ಮಹಾಮಂಡಳಿ ಆಯೋಜನೆ

    ಕೊಪ್ಪಳ: ಗಣೇಶೋತ್ಸವ ನಿಮಿತ್ತ ಹಿಂದು ಮಹಾಮಂಡಳಿಯಿಂದ ನಗರದ ಈಶ್ವರ ಉದ್ಯಾನದಲ್ಲಿ ಶುಕ್ರವಾರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.

    ಹಿಂದು ಸಂಘಟನೆಗಳು ಒಗ್ಗೂಡಿ ಗಣೇಶೋತ್ಸವ ಆಚರಿಸುತ್ತಿದ್ದು, ಶನಿವಾರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ. 11ನೇ ದಿನ ಗಣೇಶ ಮೂರ್ತಿ ವಿಸರ್ಜನೆ ನಿಮಿತ್ತ ಪ್ರತಿವರ್ಷದಂತೆ ಈ ಬಾರಿಯೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಸದ ಸಂಗಣ್ಣ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಚಾಲನೆ ನೀಡಿದರು. ಈ ಬಾರಿ ಊಟದಲ್ಲಿ ಆಂಧ್ರದ ಉಪ್ಪಿನಕಾಯಿ, ತಮಿಳುನಾಡಿನ ಸಿಹಿ ಪರಮಾನ್ನ, 12 ಕ್ವಿಂಟಾಲ್ ಗೋಧಿಹುಗ್ಗಿ, 20 ಕ್ವಿಂಟಾಲ್ ಅನ್ನ, 5 ಕ್ವಿಂಟಾಲ್ ಬದನೆಕಾಯಿ ಪಲ್ಯ, 20 ಸಾವಿರ ಮಿರ್ಚಿ, ಮಜ್ಜಿಗೆ ಹಾಗೂ ಸಾಂಬಾರು ಪದಾರ್ಥಗಳಿದ್ದವು. ಹಿಂದು, ಮುಸ್ಲಿಂ ಭಕ್ತರು ವ್ನಿೇಶನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಭಾವೈಕ್ಯತೆ ಮೆರೆದರು. ಗವಿಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ 2500ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಸಾದ ಸ್ವೀಕರಿಸಿದರು. ಈಶ್ವರ ದೇವಸ್ಥಾನ ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪೆಂಡಾಲ್ ಸುತ್ತಲೂ ದೀಪಾಲಂಕಾರ ಕಂಡುಬಂತು.

    ರಕ್ತದಾನ ಶಿಬಿರದಲ್ಲಿ ಭಕ್ತರು ರಕ್ತದಾನ ಮಾಡಿದರು. ಮಂಡಳಿ ಶನಿವಾರ 11ನೇ ದಿನಕ್ಕೆ ಗಣೇಶ ಮೂರ್ತಿ ವಿಸರ್ಜನೆ ಮಾಡಲಿದೆ. ಈಶ್ವರ ಉದ್ಯಾನದಿಂದ ವಿಸರ್ಜನಾ ಮೆರವಣಿಗೆ ಆರಂಭವಾಗಲಿದ್ದು, ಮುನಿರಾಬಾದ್ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಮೂರ್ತಿ ವಿಸರ್ಜನೆಯಾಗಲಿದೆ. ಕೊಪ್ಪಳ ಕಾ ರಾಜ ಸೇರಿ ಇತರ ಮಂಡಳಿಗಳು ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮೆರವಣಿಗೆ ಶುಕ್ರವಾರ ಬೆಳಗ್ಗೆ 8 ಗಂಟೆವರೆಗೂ ನಡೆಯಿತು. ಸಂಸದ ಸಂಗಣ್ಣ ಕರಡಿ ಸೇರಿ ಇತರರು ಮೆರವಣಿಗೆಯಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು.

    ಗಣೇಶೋತ್ಸವ ನಿಮಿತ್ತ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ: ಹಿಂದು ಮಹಾಮಂಡಳಿ ಆಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts