More

    ಸುಳ್ಳು ಕೇಸ್ ವಾಪಸ್ ಪಡೆಯಿರಿ

    ಕೊಪ್ಪಳ: ರಾಯಚೂರಿನ ಜಿಲ್ಲಾ ಕೋರ್ಟ್‌ನಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಫೆ.10 ಮತ್ತು ಫೆ.11ರಂದು ಕೈಗೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಮಿತಿ ಸದಸ್ಯರ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿ ಸಂವಿಧಾನ ಉಳಿಸಿ ಆಂದೋಲನ ಸಮಿತಿ ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿತು.

    ಸಮಿತಿಯ 70 ಜನರ ವಿರುದ್ಧ ಫೆ.11ರಂದು ಪ್ರಕರಣ ದಾಖಲಾಗಿದೆ. ದಲಿತ, ಪ್ರಗತಿಪರ ಹೋರಾಟಗಾರರ ವಿರುದ್ಧ ಹಾಕಿರುವ ಸುಳ್ಳು ಪ್ರಕರಣಗಳನ್ನು ಕೈ ಬಿಡಬೇಕು. ಶೋಷಣೆಗೆ ಒಳಗಾದವರು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕೊಲೆ ತಡೆಯಬೇಕು. ಅಸ್ಪಶ್ಯ ಆಚರಣೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರ ಕರೊನಾ ನೆಪದಲ್ಲಿ ರಾಜ್ಯದ ಅನೇಕ ಜಿಲ್ಲೆಗಳ ಚಳವಳಿಗಾರರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿದೆ. ಸರ್ಕಾರದ ನಡೆ ದಲಿತ ಚಳವಳಿ ಹತ್ತಿಕ್ಕುವ ತಂತ್ರವಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು, ಮಹಾಂತೇಶ ಕೊತಬಾಳ, ಡಿ.ಎಚ್.ಪೂಜಾರ, ಬಸವರಾಜ ಶೀಲವಂತರ, ಮಲ್ಲಿಕಾರ್ಜುನ ಪೂಜಾರ, ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್, ಶಿವಪ್ಪ ಹಡಪದ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹುಜೂರ್ ಅಹಮ್ಮದ್, ಮೊಹಿಮುದ್ ಹುಸೇನಿ, ಪರಶುರಾಮ ಕೆರೆಹಳ್ಳಿ, ಆನಂದ ಕಿನ್ನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts