More

    ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ

    ಕೊಪ್ಪಳ:ಸೇವೆ ಕಾಯಂಗೊಳಿಸುವಂತೆ ಒತ್ತಾಯಿ ಕೊಪ್ಪಳ ಜಿಲ್ಲಾ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂದ ಪದಾಧಿಕಾರಿಗಳು ಗುರುವಾರ ನರಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಅರ್ನಿದಿಷ್ಠಾವಧಿ ಧರಣಿ ಆರಂಭಿಸಿದರು.

    ರಾಜ್ಯದ 430 ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರೇ ಬಹುಪಾಲು ಪಾಠ ಮಾಡುತ್ತಿದ್ದಾರೆ. ಹತ್ತಾರು ವರ್ಷ ಸೇವೆ ಸಲ್ಲಿಸಿದರೂ ನಮ್ಮ ಬದುಕು ಅತಂತ್ರವಾಗಿದೆ. ಕಳೆದ ಬಾರಿ ಪ್ರತಿಭಟನೆ ನಡೆಸಿದಾಗ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಸದನದಲ್ಲಿ ನಮ್ಮ ಪರ ದನಿ ಎತ್ತಿದ್ದರು. ಅಲ್ಲದೇ ಚುನಾವಣೆ ಸಮಯದಲ್ಲಿ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ನಮ್ಮ ಸಮಸ್ಯೆ ಪರಿಹರಿಸುವ ಭರವಸೆ ನೀಡಿತ್ತು ಎಂದರು.

    ಕಾಂಗ್ರೆಸ್​ ಸರ್ಕಾರ ರಚಿಸಿ ಆರು ತಿಂಗಳಾಗಿದೆ. ಆದರೂ, ನಮ್ಮ ಬೇಡಿಕೆ ಈಡೇರಿಸಿಲ್ಲ. ನಮ್ಮ ಪರಿಸ್ಥಿತಿ ಮೊದಲಿನಂತೆ ಮುಂದುವರೆದಿದ್ದು, ಸೇವಾ ಭದ್ರತೆ ಇಲ್ಲದಂತಾಗಿದೆ. ಸರ್ಕಾರ ಕೇವಲ ನಮ್ಮ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಶಾಶ್ವತ ಪರಿಹಾರ ನೀಡಬೇಕು. ನಮ್ಮ ಸೇವೆ ಆಧರಿಸಿ ಕಾಯಂಗೊಳಿಸಬೇಕು. ಅಲ್ಲಿವರೆಗೂ ಧರಣಿ ಕೈ ಬಿಡುವುದಿಲ್ಲವೆಂದು ತಿಳಿಸಿದರು.

    ಪ್ರತಿಭಟನಾ ಸ್ಥಳಕ್ಕೆ ವಿಪ ಸದಸ್ಯೆ ಹೇಮಲತಾ ನಾಯಕ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ದನಿ ಎತ್ತುವುದಾಗಿ ಭರವಸೆ ನೀಡಿದರು.

    ಅತಿಥಿ ಉಪನ್ಯಾಸಕರ ಸಂದ ಜಿಲ್ಲಾಧ್ಯಕ್ಷ ಡಾ.ವೀರಣ್ಣ ಎಸ್​.ಸಜ್ಜನರ, ಕಾರ್ಯದರ್ಶಿ ಡಾ.ದೇವೇಂದ್ರಸ್ವಾಮಿ, ಅತಿಥಿ ಉಪನ್ಯಾಸಕರಾದ ಬಸವರಾಜ ಕರುಗಲ್​, ಡಾ.ಪ್ರಕಾಶ ಬಳ್ಳಾರಿ, ಎಂ.ಶಿವಣ್ಣ, ಡಾ.ತುಕಾರಾಂ ನಾಯಕ, ಡಾ.ಗಿರಿಜಾ, ಡಾ.ವಿಪ್ಲವಿ, ಅಕ್ಕಮಹಾದೇವಿ, ಶಿವಬಸಪ್ಪ ಗುರಿಕಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts