More

    ವಿದ್ಯಾರ್ಥಿ ವೇತನ ಮುಂದುವರಿ: ಎಡಿಸಿ ಸಾವಿತ್ರಿ ಬಿ.ಕಡಿಗೆ ಡಬ್ಲುೃಪಿಐ ಮನವಿ

    ಕೊಪ್ಪಳ: ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಷ್ಯವೇತನ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಪದಾಧಿಕಾರಿಗಳು ಗುರುವಾರ ಎಡಿಸಿ ಸಾವಿತ್ರಿ ಬಿ.ಕಡಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

    ಒಂದರಿಂದ 8ನೇ ತರಗತಿ ಮಕ್ಕಳು ಆರ್‌ಟಿಇ ಅಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಶಿಷ್ಯವೇತನ ಅಗತ್ಯವಿಲ್ಲವೆಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಮೂಲಕ ಶಿಕ್ಷಣ ಹಕ್ಕನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ, ಹಾಜರಾತಿ ಹೆಚ್ಚಳ, ಕಲಿಕೆ ಪ್ರೋತ್ಸಾಹಕ್ಕೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಇದನ್ನೇ ತಪ್ಪಾಗಿ ವ್ಯಾಖ್ಯಾನಿಸಿ ಮಕ್ಕಳನ್ನು ಶಿಷ್ಯವೇತನದಿಂದ ವಂಚಿತರನ್ನಾಗಿಸಲು ಸರ್ಕಾರ ಹೊರಟಿದೆ. ಕೋವಿಡ್ ಅವಧಿಯಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರನ್ನು ಮತ್ತೆ ಮುಖ್ಯವಾಹಿನಿಗೆ ತರುವತ್ತ ಯೋಚಿಸುವುದನ್ನು ಬಿಟ್ಟು, ಇಲ್ಲ-ಸಲ್ಲದ ಕೆಲಸಗಳಿಗೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

    ಕೇಂದ್ರದ ನಡೆಗೆ ರಾಷ್ಟ್ರಪತಿಗಳು ತಡೆ ನೀಡಬೇಕು. ಎಂದಿನಂತೆ ಮಕ್ಕಳಿಗೆ ಶಿಷ್ಯವೇತನ ಪಾವತಿಸಿ ಅವರ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ಆಗುವ ಅನ್ಯಾಯ ತಪ್ಪಿಸಬೇಕೆಂದು ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲಿಮುದ್ದೀನ್, ಪದಾಧಿಕಾರಿಗಳಾದ ಮೌಲಾಹುಸೇನ ಹಣಗಿ,ನಾಸಿರ್ ಮಾಳೇಕೊಪ್ಪ, ಇಸಾಕ್ ಫಜೀಲ್, ಸಬಿಹಾ ಪಟೇಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts