More

    ಕೊಂಕಣ ಮಾರ್ಗದಲ್ಲಿದ್ದ ಎರಡೂ ಪ್ಯಾಸೆಂಜರ್ ರೈಲುಗಳಿಗೆ ಸಂಚಕಾರ?

    ಮಂಗಳೂರು: ಕೊಂಕಣ ಮಾರ್ಗದಲ್ಲಿ ಇದ್ದ ಎರಡೂ ಪ್ಯಾಸೆಂಜರ್ ರೈಲುಗಳಿಗೂ ಕುತ್ತು ಉಂಟಾಗುವ ಪರಿಸ್ಥಿತಿ ಗೋಚರಿಸಿದೆ.
    200 ಕಿ.ಮೀ. ಅಧಿಕ ದೂರ ಸಂಚರಿಸುವ ಎಲ್ಲ ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತಿಸಲಾಗುವುದು ಎನ್ನುವ ರೈಲ್ವೆ ಮಂಡಳಿ ಆದೇಶ ಮೇಲಿನ ಸಂದೇಹಕ್ಕೆ ಪುಷ್ಟಿ ನೀಡಿದೆ.

    ಮಂಗಳೂರು- ಮಡ್‌ಗಾಂವ್ ಡೆಮು ಮತ್ತು ಕೊಂಕಣ ರೈಲ್ವೆಯ ಪ್ರಪ್ರಥಮ ರೈಲು ಮಂಗಳೂರು- ಮಡಗಾಂವ್ ಪ್ಯಾಸೆಂಜರ್ ರೈಲ್ವೆ ಮಂಡಳಿ ಹೊಸ ಆದೇಶದಿಂದ ಎಕ್ಸ್‌ಪ್ರೆಸ್ ಆಗಿ ಪರಿವರ್ತನೆಯಾಗಲಿರುವ ರೈಲುಗಳು. ಈ ರೈಲುಗಳು 430 ಕಿ.ಮೀ.ನಷ್ಟು ಅಂತರ ಕ್ರಮಿಸುತ್ತವೆ.

    ಮಂಗಳೂರು- ಮಡಗಾಂವ್ ಪ್ಯಾಸೆಂಜರ್ ರೈಲನ್ನು ಎಕ್ಸ್‌ಪ್ರೆಸ್ ಆಗಿ ಪರಿವರ್ತನೆಗೊಳಿಸುವಂತೆ ದಕ್ಷಿಣ ರೈಲ್ವೆಯು ರೈಲ್ವೆ ಮಂಡಳಿಗೆ ಕಳುಹಿಸಿರುವ ಪ್ರಸ್ತಾವನೆ ಪ್ರತಿ ಲಭ್ಯವಾಗಿದೆ. ಆದರೆ ಮಂಡಳಿಯದೇ ಹೊಸ ಆದೇಶ ಪ್ರಕಾರ ಮಂಗಳೂರು- ಮಡ್‌ಗಾಂವ್ ಡೆಮು ಕೂಡ ಎಕ್ಸ್‌ಪ್ರೆಸ್ ಆಗುವುದು ಖಚಿತವಾಗಿದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಗೌತಮ್ ಶೆಟ್ಟಿ.

    ಪ್ಯಾಸೆಂಜರ್ ರೈಲುಗಳು ರದ್ದಾಗುವುದರಿಂದ ಸಣ್ಣಸಣ್ಣ ಊರುಗಳ ಜನರು ರೈಲ್ವೆ ಸೌಲಭ್ಯ ವಂಚಿತರಾಗಲಿದ್ದಾರೆ. ಮಂಗಳೂರು ಮತ್ತಿ ಮಡಗಾಂವ್ ನಡುವೆ ಎರಡು ಪ್ರತ್ಯೇಕ ಸಂಪರ್ಕ ಪ್ಯಾಸೆಂಜರ್ ರೈಲುಗಳನ್ನಾದರೂ ಒದಗಿಸುವ ಕೆಲಸ ನಡೆಯಬೇಕಾಗಿದೆ ಎನ್ನುವುದು ಪಶ್ಚಿಮ ರೈಲ್ವೆ ಯಾತ್ರಿ ಸಂಘದ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ ಅವರ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts