More

    ವೀಕ್ಷಕರ ಎದುರೇ ಕೈ ಕಾರ್ಯಕರ್ತರ ಹೊಯ್ ಕೈ: ಸಿದ್ದರಾಮೋತ್ಸವ, ಸ್ವಾತಂತ್ರ್ಯ ಅಮೃತೋತ್ಸವ ಪೂರ್ವಭಾಗಿ ಸಭೆಯಲ್ಲಿ ಕಾಂಗ್ರೆಸ್ ಬಣಗಳ ಕಾದಾಟ

    ಕೋಲಾರ: ಜಿಲ್ಲೆಯಲ್ಲಿ ತೆರೆಮರೆಯಲ್ಲಿ ನಡೆಯುತ್ತಿದ್ದ ಜಿಲ್ಲಾ ಕಾಂಗ್ರೆಸ್ ಭಿನ್ನಮತ ಹಾದಿ-ಬೀದಿರಂಪವಾಗಿ ಬದಲಾಗಿದೆ. ಸಿದ್ದರಾಮೋತ್ಸವ, ಸ್ವಾತಂತ್ರ್ಯ ಅಮೃತಮಹೋತ್ಸವಕ್ಕೆ ಸಜ್ಜಾಗಲು ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ರಮೇಶ್‌ಕುವಾರ್ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು.

    ಪಕ್ಷದ ವೀಕ್ಷಕ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್, ಎಂ.ಎಲ್.ಅನಿಲ್‌ಕುಮಾರ್, ಶಾಸಕ ಕೆ.ವೈ.ನಂಜೇಗೌಡ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

    ವೀಕ್ಷಕರ ಎದುರೇ ಕೈ ಕಾರ್ಯಕರ್ತರ ಹೊಯ್ ಕೈ: ಸಿದ್ದರಾಮೋತ್ಸವ, ಸ್ವಾತಂತ್ರ್ಯ ಅಮೃತೋತ್ಸವ ಪೂರ್ವಭಾಗಿ ಸಭೆಯಲ್ಲಿ ಕಾಂಗ್ರೆಸ್ ಬಣಗಳ ಕಾದಾಟ
    ಕಾಂಗ್ರೆಸ್ ಭವನದಲ್ಲಿ ಕುರ್ಚಿ ಮುರಿದು ಹಾಕಲಾಗಿದೆ.

    ಸಭೆ ಪ್ರಾರಂಭವಾಗುತ್ತಿದ್ದಂತೆ ವೇದಿಕೆ ಬ್ಯಾನರ್‌ನಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೆಸರು ಮತ್ತು ಫೋಟೋ ಹಾಕಿಲ್ಲವೆಂದು ಕೆ.ಎಚ್.ಬಣದವರು ದೂರಿದರು. ಇದಕ್ಕೆ ರಮೇಶ್ ಕುವಾರ್, ಅನಿಲ್ ಕುವಾರ್ ಆಕ್ಷೇಪಿಸಿದರು. ಆಗ ಕೆ.ಎಚ್. ಬಣದ ಕಿಸಾನ್‌ಕೇತ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್ಸಿ ಟಕದ ಅಧ್ಯಕ್ಷ ಜಯದೇವ ಮತ್ತಿತರರು, ಪಕ್ಷ ಕಟ್ಟಿದ್ದು ಮುನಿಯಪ್ಪ. ಆದರೆ ಅವರ ಫೋಟೋವನ್ನೇ ಹಾಕದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಆಗ ರಮೇಶ್‌ಕುವಾರ್ ಎದ್ದು ನಿಂತು ಒಂದಿಬ್ಬರಿಗೆ ಏಟು ಕೊಟ್ಟು ಕೆಳಗಿಳಿಯುವಂತೆ ಸೂಚನೆ ನೀಡಿದರು. ಆಗ ಗದ್ದಲ, ಚೀರಾಟ ಹೆಚ್ಚಾಯಿತು. ಎರಡೂ ಕಡೆಯ ಕಾರ್ಯಕರ್ತರು ವೇದಿಕೆಯತ್ತ ನುಗ್ಗಿದರು. ತಳ್ಳಾಟ ಜೋರಾಗಿ ಕೈಕೈ ಮಿಲಾಯಿಸಿಕೊಂಡು ಅವಾಚ್ಯವಾಗಿ ನಿಂದಿಸಿಕೊಂಡರು. ಕೆಲವರು ಕಚೇರಿ ಗೋಡೆಯ ಟೈಲ್ಸ್‌ಗಳನ್ನು ಕಿತ್ತುಹಾಕಿದರು.

    ವೀಕ್ಷಕರ ಎದುರೇ ಕೈ ಕಾರ್ಯಕರ್ತರ ಹೊಯ್ ಕೈ: ಸಿದ್ದರಾಮೋತ್ಸವ, ಸ್ವಾತಂತ್ರ್ಯ ಅಮೃತೋತ್ಸವ ಪೂರ್ವಭಾಗಿ ಸಭೆಯಲ್ಲಿ ಕಾಂಗ್ರೆಸ್ ಬಣಗಳ ಕಾದಾಟ
    ಕಾಂಗ್ರೆಸ್ ಭವನದಲ್ಲಿ ಗೋಡೆಗೆ ಅಳವಡಿಸಿದ್ದ ಪ್ಲೇಟ್‌ಗಳನ್ನು ಕಿತ್ತು ಹಾಕಲಾಗಿದೆ.

    ಮತ್ತೊಂದೆಡೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಂಬರೀಶ್ ಮತ್ತು ಕೆಲವು ಕಾರ್ಯಕರ್ತರ ನಡುವೆ ವಾತಿನ ಚಕಮಕಿ ನಡೆದು ಕಾರ್ಯಕರ್ತನೊಬ್ಬ ಚೇರನ್ನು ಮುರಿದು ಹಾಕಿದ್ದೂ ಆಯಿತು. ಮುಖಂಡರು ಕೆಳಗಿಳಿದು ಬಂದು ಕಾರ್ಯಕರ್ತರನ್ನು ವೇದಿಕೆಯತ್ತ ಕರೆದೊಯ್ದರು.

    ಪತ್ರಕರ್ತರಿಬ್ಬರ ಮೇಲೆ ರಮೇಶ್ ಕುವಾರ್ ಹಲ್ಲೆ: ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ಕ್ಷಮೆಯಾಚಿಸಿದ ಪಕ್ಷದ ಉಸ್ತುವಾರಿ

    ವೀಕ್ಷಕರ ಎದುರೇ ಕೈ ಕಾರ್ಯಕರ್ತರ ಹೊಯ್ ಕೈ: ಸಿದ್ದರಾಮೋತ್ಸವ, ಸ್ವಾತಂತ್ರ್ಯ ಅಮೃತೋತ್ಸವ ಪೂರ್ವಭಾಗಿ ಸಭೆಯಲ್ಲಿ ಕಾಂಗ್ರೆಸ್ ಬಣಗಳ ಕಾದಾಟ
    ಕಾಂಗ್ರೆಸ್ ಭವನದ ಎದುರು ಎಂಎಲ್ಸಿ ಅನಿಲ್‌ಕುವಾರ್, ಪಕ್ಷದ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಪತ್ರಕರ್ತರ ಸಂದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಮತ್ತು ಪತ್ರಕರ್ತರ ಬಳಿ ಬಹಿರಂಗ ಕ್ಷಮೆಯಾಚಿಸಿದರು.

    ಕೋಲಾರ: ವಿವಾದಿತ ಹೇಳಿಕೆಗಳನ್ನು ನೀಡುತ್ತ ಸದಾ ಸುದ್ದಿಯಲ್ಲಿರುವ ವಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪತ್ರಕರ್ತರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಪತ್ರಕರ್ತರಷ್ಟೇ ಅಲ್ಲದೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

    ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣದ ಕಾರ್ಯಕರ್ತರು ಘರ್ಷಣೆಗಿಳಿದಿದ್ದರು. ಈ ಸಂದರ್ಭದಲ್ಲಿ ಚಿತ್ರೀಕರಿಸುತ್ತಿದ್ದ ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಅಸಹನೆ ಕಳೆದುಕೊಂಡು ಕೆಳಗಿಳಿದು ಬಂದು ಪತ್ರಕರ್ತರಿಬ್ಬರ ಮೇಲೆ ಕೈ ಮಾಡಿದರು. ಎಂಎಲ್ಸಿ ಅನಿಲ್‌ಕುಮಾರ್ ಮತ್ತಿತರರು ಎಲ್ಲ ಪತ್ರಕರ್ತರನ್ನು ಸಭೆಯಿಂದ ಆಚೆ ಕಳುಹಿಸಿದರು.

    ಗಾಂಧಿ ವಂಶಸ್ಥ: ಪತ್ರಕರ್ತರನ್ನು ಹೊಡೆಯುವುದಕ್ಕೂ ಮುನ್ನ ಇದೇ ವೇದಿಕೆಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್, ದೇಶಕ್ಕಾಗಿ ಬಲಿದಾನಗೈದ ಗಾಂಧಿ (ಕಾಂಗ್ರೆಸ್) ವಂಶಸ್ಥರು ನಾವು. ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿನಿಂದ ತನ್ನನ್ನು ಬಿಟ್ಟುಬಿಡುವಂತೆ ಕೇಳಿಕೊಂಡಿದ್ದ ಮಾಜಿ ಪ್ರಧಾನಿ ವಾಜಪೇಯಿ ಅವರಂತಹವರು ಇದ್ದ ಪಕ್ಷ ನಮ್ಮದಲ್ಲ. ದೇಶಕ್ಕಾಗಿ ಇಂದಿರಾಗಾಂಧಿ, ರಾಜೀವ್‌ಗಾಂಧಿ ಬಲಿದಾನವಾಯಿತು. ರಾಜೀವ್ ಅವರನ್ನು ನಂಬಿ ಬಂದ ಸೋನಿಯಾಗಾಂಧಿ ಪ್ರಧಾನಮಂತ್ರಿ ಆಗುವ ಯೋಗ ಬಂದರೂ ದೂರ ಸರಿದರು. ಅಂತಹ ತ್ಯಾಗ, ಬಲಿದಾನ ಮಾಡಿದ ಪಕ್ಷದಲ್ಲಿ ನಾವೆಲ್ಲ ಇರುವುದೇ ಹೆಮ್ಮೆಯ ವಿಷಯ ಎಂದು ಭಾಷಣ ವಾಡಿದ್ದರು.

    ಭಾಷಣ ಮುಗಿಯುತ್ತಿದ್ದಂತೆ ಕಾರ್ಯಕರ್ತರು ರ್ಷಣೆಗೆ ಇಳಿದಾಗ ಕಾರ್ಯಕರ್ತರನ್ನು ಥಳಿಸಿದ್ದಲ್ಲದೆ, ಪತ್ರಕರ್ತರ ಮೇಲೂ ಹಲ್ಲೆ ನಡೆಸಿದರು. ಸಭೆಯ ಬಳಿಕ ರಮೇಶ್‌ಕುಮಾರ್ ಬೆಂಬಲಿಗನೊಬ್ಬ ಪತ್ರಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾದ ಟನೆಯೂ ನಡೆಯಿತು. ಆ ವೇಳೆಗೆ ರಮೇಶ್‌ಕುಮಾರ್ ಅಲ್ಲಿಂದ ನಿರ್ಗಮಿಸಿದ್ದರು. ಆಕ್ರೋಶಗೊಂಡ ಪತ್ರಕರ್ತರು, ಸಂದ ಅಧ್ಯಕ್ಷ ಬಿ.ವಿ.ಗೋಪಿನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಿದರು.

    ಕ್ಷಮೆಯಾಚನೆ: ಪತ್ರಕರ್ತರ ಪ್ರತಿಭಟನೆ ತಿಳಿದು ಎಂಎಲ್ಸಿ ಅನಿಲ್‌ಕುವಾರ್, ಶಾಸಕ ಕೆ.ವೈ.ನಂಜೇಗೌಡ, ಪಕ್ಷದ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಸ್ಥಳಕ್ಕಾಗಮಿಸಿ ಟನೆಗೆ ಕ್ಷಮೆಯಾಚಿಸಿದರು. ರಮೇಶ್‌ಕುವಾರ್ ಕ್ಷಮೆ ಕೇಳಬೇಕು ಎಂದು ಪತ್ರಕರ್ತರು ಪಟ್ಟುಹಿಡಿದಾಗ ಮುಂದೊಂದು ದಿನ ಅವರಿಂದಲೂ ಕ್ಷಮೆಯಾಚಿಸುವುದಾಗಿ ಹೇಳಿದರು.

    ಪತ್ರಕರ್ತರಿಗೆ ಆಹ್ವಾನ ಇದ್ದಿದ್ದರಿಂದ ಬಂದಿದ್ದರು. ಇಷ್ಟಕ್ಕೂ ರಮೇಶ್‌ಕುಮಾರ್ ಅಥವಾ ನಾಯಕರ ಮನೆಗಳಲ್ಲಿ ಆಹ್ವಾನವಿಲ್ಲದೆ ಬಂದು ವಿಡಿಯೋ ವಾಡುತ್ತಿರಲಿಲ್ಲ. ಕಾಂಗ್ರೆಸ್ ಭವನದಲ್ಲಿ ವರದಿಗಾರಿಕೆಗೆ ಬಂದಿದ್ದ ಪತ್ರಕರ್ತರ ಮೇಲೆ ಮೇಧಾವಿ, ಮಾಜಿ ಸ್ಪೀಕರ್, ಹಾಲಿ ಶಾಸಕರಾಗಿರುವವರು ಈ ರೀತಿ ಹಲ್ಲೆ ವಾಡುವುದು ಎಷ್ಟು ಸರಿ? ಯಾರೇ ಆಗಿದ್ದರೂ ಪತ್ರಕರ್ತರ ಹಕ್ಕು ಮತ್ತು ಕರ್ತವ್ಯ ನಿರ್ವಹಣೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಅವರು ವರ್ತನೆ ಸರಿಪಡಿಸಿಕೊಂಡು ಹಿರಿಯ, ಕಿರಿಯ ಮತ್ತು ಎಲ್ಲರನ್ನು ಗೌರವಿಸುವುದನ್ನು ಕಲಿತುಕೊಳ್ಳಬೇಕು.
    | ಬಿ.ವಿ.ಗೋಪಿನಾಥ್, ಅಧ್ಯಕ್ಷ, ಜಿಲ್ಲಾಪತ್ರಕರ್ತರ ಸಂ, ಕೋಲಾರ

    ಸಿದ್ದರಾಮೋತ್ಸವಕ್ಕೆ 15 ಸಾವಿರ ಮಂದಿ: ಆ.3ರಂದು ದಾವಣಗೆರೆಯಲ್ಲಿ ವಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷಾಚರಣೆಯ ಸಿದ್ದರಾಮೋತ್ಸವ ಮತ್ತು ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆ.15ಕ್ಕೆ ಆಯೋಜಿಸಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾವೇಶಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಸಿದ್ಧತೆಗಳು ಮತ್ತು ಎರಡೂ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯುವ ಕುರಿತು ಚರ್ಚಿಸಲು ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ವೀಕ್ಷಕ ನಾರಾಯಣಸ್ವಾಮಿ ಪಕ್ಷದ ಕಡೆಯಿಂದ ಕ್ಷೇತ್ರಕ್ಕೆ 5 ಬಸ್ ನೀಡುತ್ತೇವೆ. ಆಯಾ ಕ್ಷೇತ್ರದ ಮುಖಂಡರು ಕನಿಷ್ಠ 20 ಬಸ್‌ಗಳಲ್ಲಿ ಜನರನ್ನು ಕರೆತರಬೇಕು. ಜಿಲ್ಲೆಯಿಂದ ಕನಿಷ್ಠ ಹತ್ತದಿನೈದು ಸಾವಿರ ಮಂದಿ ಸಿದ್ದರಾಮೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts