More

    ಬೆಳ್ಳಿ ಗದೆ ಪಡೆದು ಮಿಂಚಿದ್ದ ಉಡುಪಿ ಜಿಲ್ಲಾಧಿಕಾರಿಗೆ ಜಗದೀಶ್​ಗೆ ಶುರುವಾಯ್ತು ಸಂಕಷ್ಟ..!

    ಬೆಂಗಳೂರು: ಬೆಳ್ಳಿ ಗದೆ, ಕಿರೀಟ ಮತ್ತು ಚಿನ್ನದ ಒಡವೆ ಪಡೆದ ಆರೋಪ ಪ್ರಕರಣದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್​ಗೆ ಸಂಕಷ್ಟ ಶುರುವಾಗಿದೆ.

    ಹಿಂದೆ ಸಿಇಒ ಆಗಿದ್ದ ವೇಳೆ ಮಾಡಿಕೊಂಡಿದ್ದ ಯಡವಟ್ಟು ಈಗ ಐಎಎಸ್ ಅಧಿಕಾರಿಗೆ ಮುಳುವಾಗಿ ಪರಿಣಮಿಸಿದೆ. ಇದಲ್ಲದೇ, ಮುಖ್ಯಾಧಿಕಾರಿ ಎಸ್. ಆನಂದ್ ಸೇರಿ 9 ಪಿಡಿಒಗಳಿಗೆ ಸಂಕಷ್ಟ ಎದುರಾಗಿದ್ದು, ಎಸಿಬಿ ತನಿಖೆ ಎದುರಿಸುವಂತಾಗಿದೆ. ಎರಡು ತಿಂಗಳಲ್ಲಿ ಆರೋಪಿಗಳ ವಿರುದ್ದ ತನಿಖೆ ನೆಡೆಸಿ ವರದಿ ನೀಡುವಂತೆ ಕೋಲಾರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಆದೇಶ ನೀಡಿದೆ.

    ಇದನ್ನೂ ಓದಿ; ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಾದಿತ್ತು ಅಚ್ಚರಿ; ಹೊಟ್ಟೆನೋವು ಎಂದವಳ ಲಿಂಗವೇ ಬದಲಾಗಿತ್ತು…!

    2019 ರಲ್ಲಿ ಕೋಲಾರದಿಂದ ವರ್ಗಾವಣೆಯಾಗಿದ್ದ ಜಿ.ಜಗದೀಶ್ ವಿರುದ್ಧ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಸಾಮಾಜಿಕ ಕಾರ್ಯಕರ್ತ ಎಸ್. ನಾರಾಯಣಸ್ವಾಮಿ ದೂರು ನೀಡಿದ್ದರು. ಆದರೆ, ಪ್ರಕರಣ ದಾಖಲಿಸಿಕೊಂಡ ಎಸಿಬಿ ತನಿಖೆಯ್ನು ಆಮೆಗತಿಯಲ್ಲಿ ನಡೆಸುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಎಸಿಬಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೋಲಾರ ಜಿಲ್ಲಾ ಎಸಿಬಿ ವಿಶೇಷ ಕೋಟ್​ರ್ಗೆ (ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ) ಮನವಿ ಮಾಡಿದ್ದರು.

    ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆಗಸ್ಟ್ 25 ರೊಳಗೆ ತನಿಖೆ ಮಾಡಿ ವರದಿ ನೀಡಲು ಸೂಚಿಸಿದೆ.

    ಇದನ್ನೂ ಓದಿ; ಲಾಕ್​ಡೌನ್​ ಮರೆತು ಬಿಡಿ, ಅನ್​ ಲಾಕ್​ಡೌನ್ 2.0 ಗೆ ಸಿದ್ಧರಾಗಿ; ಶಾಲಾ- ಕಾಲೇಜು, ಮೆಟ್ರೋ ಆರಂಭಕ್ಕೆ ಮಾರ್ಗಸೂಚಿ ಸಜ್ಜು

    ಪ್ರಕರಣದ ಹಿನ್ನೆಲೆ: ಸಿಇಓ ಆಗಿದ್ದ ಜಗದೀಶ್​ಗೆ ಇಓ ಆನಂದ ಮತ್ತು 9 ಪಿಎಇಓಗಳು ಬೆಳ್ಳಿ ಗದೆ, ಕಿರೀಟ ಹಾಗೂ ಚಿನ್ನದ ಒಡವೆ ನೀಡದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಜಗದೀಶ್ ವಿರುದ್ದ ಲಂಚ ಸ್ವೀಕಾರ ಮತ್ತು ಕೊಟ್ಟವರ ವಿರುದ್ದ ಲಂಚ ನೀಡಿದ ಆರೋಪ ಹೊರಿಸಲಾಗಿದೆ.

    ಬೊಜ್ಜು ಇಳಿಸುವ ಔಷಧ ಕರೊನಾವನ್ನು ಕರಗಿಸುತ್ತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts