More

    ರಾಮನಾಮ ಜಪದಿಂದ ಕಷ್ಟಗಳು ದೂರ

    ಕೊಡೇಕಲ್: ಕಲಿಯುಗದ ಕಷ್ಟ ಪರಿಹರಿಸಲು ಭೂಮಿಗೆ ಅವತರಿಸಿದ ಶ್ರೀ ರಾಮಚಂದ್ರ ದೇವರು ಹಲವು ವಿಧದಲ್ಲಿ ಭಕ್ತರ ಕಷ್ಟ ಪರಿಹರಿಸಿದ್ದಾನೆ. ಅಂತಹ ಮಹಾಮಹಿಮನ ನಾಮಸ್ಮರಣೆ ನಿತ್ಯ ಮಾಡುವುದರಿಂದ ಜೀವನದಲ್ಲಿನ ಕಷ್ಟ ದೂರವಾಗುತ್ತವೆ ಎಂದು ಬ್ರಾಹ್ಮಣ ಪುರೋಹಿತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನಾಚಾರ್ಯ ಮಂಗಳೂರು ಹೇಳಿದರು.

    ಅಖಿಲ ಕರ್ನಾಟಕ ಬಾಹ್ಮಣ ಮಹಾಸಭಾ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರು ಪುರೋಹಿತ ಪರಿಷತ್ ಕೇಂದ್ರ ಸಮಿತಿ ಬೆಂಗಳೂರು ಅವರ ನಿದರ್ಶನದಂತೆ ಜಿಲ್ಲಾ ಬ್ರಾಹ್ಮಣ ಅರ್ಚಕರು ಪುರೋಹಿತ ಪರಿಷತ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅಯೋಧ್ಯೆಯ ಶ್ರೀ ರಾಮಚಂದ್ರ ಸ್ವಾಮಿ ಪುನಃ ಪ್ರತಿಷ್ಠಾಪನೆ ನಿಮಿತ್ತ ಗ್ರಾಮದ ಶ್ರೀ ರಾಘವೇಂದ್ರ ಮಠದಲ್ಲಿ ಭಾನುವಾರ ಹಮ್ಮಿಕೊಂಡ ಶ್ರೀ ರಾಮತಾರಕ ಶತಕೋಟಿ ಜಪಯಜ್ಞ ಮಹಾಸಂಕಲ್ಪ ಕರ‍್ಯಕ್ರಮದಲ್ಲಿ ಮಾತನಾಡಿದರು.

    ಮುಂದಿನ ವರ್ಷ (ಜನವರಿ)ಅಯೋಧ್ಯೆಯಲ್ಲಿ ರಾಮಮಂದಿರ ದೇವಸ್ಥಾನ ಲೋಕಾರ್ಪಣೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ರಾಮತಾರಕ ಮಂತ್ರವನ್ನು ಶತಕೋಟಿ ಸಂಖ್ಯೆಯಲ್ಲಿ ಜಪಿಸಿ ದೇಶ ರಾಮ ರಾಜ್ಯವಾಗಿ ಅಭಿವೃದ್ಧಿಗೆ ಮುಂದಾಗೋಣ ಎಂದು ಹೇಳಿದರು.

    ಶ್ರೀಮಠದಲ್ಲಿನ ಯತಿದ್ವಯರ ವೃಂದಾವನಗಳಿಗೆ ವಿಶೇಷ ಪೂಜೆ ನೆರವೇರಿಸಿ ಶ್ರೀ ರಾಮಚಂದ್ರರ ದೇವರಿಗೆ ಪೂಜೆ ಸಲ್ಲಿಸಿ ಶತಕೋಟಿ ಶ್ರೀ ರಾಮತಾರಕ ಜಪಯಜ್ಞ ಸಂಕಲ್ಪ ಮಾಡಲಾಯಿತು.

    ವಿಜಯಾಚಾರ್ಯ ಕಕ್ಕೇರಾ, ಗಂಗಾಧರ ಜೋಶಿ ಕೊಡೇಕಲ್, ನಾಗೇಶ ಜೋಶಿ, ಡಾ.ಸುರೇಶ ಆದೋನಿ, ಅರ್ಚಕರಾದ ರಾಘವೇಂದ್ರಾಚಾರ್ಯ ಜೋಶಿ, ನಾರಾಯಣರಾವ ಕುಲಕರ್ಣಿ ತಿರುಮಲರಾವ ಕುಲಕರ್ಣಿ, ಹಣಮೇಶ ಕುಲಕರ್ಣಿ, ದತ್ತಾತ್ರೇಯ ಜಹಾಗೀರದಾರ್, ದತ್ತಾತ್ರೇಯ ಕುಲಕರ್ಣಿ, ಸತೀಶ ಪದಕಿ, ಮುರಳಿಧರ ಕೊಳ್ಳಿ, ಮಾಧವರಾವ ದೇಶಪಾಂಡೆ, ಭೀಮಸೇನ ಕುಲಕರ್ಣಿ, ದೇವರಾಜ ಕುಲಕರ್ಣಿ, ನಾರಾಯಣರಾವ ಕುಲಕರ್ಣಿ, ನರಸಿಂಹ ದೇಸಾಯಿ, ವೆಂಕಟೇಶ ಜೋಶಿ, ಪ್ರದೀಪ ಕುಲಕರ್ಣಿ, ಸಚಿನ ಆದೋನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts